Advertisement

Bengaluru: ಜಾಗತಿಕ ವಿವಿ ರ್‍ಯಾಂಕಿಂಗ್‌: ದೇಶದಲ್ಲಿ ಐಐಎಸ್‌ಸಿಗೆ ಅಗ್ರಪಟ್ಟ

12:31 PM Oct 11, 2024 | Team Udayavani |

ಬೆಂಗಳೂರು: ಜಾಗತಿಕ ವಿಶ್ವ ವಿದ್ಯಾಲಯಗಳ 2025ನೇ ಸಾಲಿನ ರ್‍ಯಾಂಕಿಂಗ್‌ ಅನ್ನು ದಿ ಟೈಮ್ಸ್‌ ಹೈಯರ್‌ ಎಜುಕೇಶನ್‌ ಸಂಸ್ಥೆಯು ಪ್ರಕಟಗೊಳಿಸಿದ್ದು, ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌ (ಐಐಎಸ್‌ಸಿ) 251ರಿಂದ 300ರವರೆಗಿನ ರ್‍ಯಾಂಕಿಂಗ್‌ ಪಡೆದಿರುವ ಜಾಗತಿಕ ವಿವಿಗಳ ಪೈಕಿ ಸ್ಥಾನ ಪಡೆದಿದೆ. ಈ ಪಟ್ಟಿಯಲ್ಲಿರುವ ಭಾರತದ ಅಗ್ರ ವಿವಿ ಎಂಬ ಗೌರವಕ್ಕೂ ಪಾತ್ರವಾಗಿದೆ.

Advertisement

ಕರ್ನಾಟಕದ ಮಾಹೆ (ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌)ಗೆ 801ರಿಂದ 1000ದ ಕೆಟಗರಿಯಲ್ಲಿ ಸ್ಥಾನ ದೊರೆತಿದ್ದು, ಜೈಪುರದ ಮಣಿಪಾಲ್‌ ವಿವಿಯು 1201ರಿಂದ 1500 ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಐಐಎಸ್‌ಸಿ ಭಾರತದ ವಿವಿಗಳ ಪೈಕಿ ಮೊದಲ ಸ್ಥಾನ ಪಡೆದಿದ್ದರೂ ಜಾಗತಿಕ ಮಟ್ಟದಲ್ಲಿ ಕಳೆದ ಸಾಲಿಗಿಂತಲೂ ಕಡಿಮೆ ಶ್ರೇಯಾಂಕ ಗಳಿಸಿದೆ.

2024ರಲ್ಲಿ ಬೆಂಗಳೂರಿನ ಐಐಎಸ್‌ಸಿ 201ರಿಂದ 250ರ ಪಟ್ಟಿಯಲ್ಲಿರುವ ವಿವಿಗಳ ಪೈಕಿ ಸ್ಥಾನ ಪಡೆದಿತ್ತು. ಇನ್ನು 251ರಿಂದ 1000ದ ಪಟ್ಟಿ ಯ ಲ್ಲಿರುವ ಅಗ್ರ 10 ಭಾರತೀಯ ವಿವಿಗಳ ಪೈಕಿ ಅಣ್ಣಾ ಯೂನಿ ವರ್ಸಿಟಿ, ಮಹಾತ್ಮಗಾಂಧಿ ವಿವಿ, ಸವಿತಾ ಇನ್‌ಸ್ಟಿಟ್ಯೂಟ್‌ ಆಫ್ ಮೆಡಿಕಲ್‌ ಆ್ಯಂಡ್‌ ಟೆಕ್ನಿಕಲ್‌ ಸೈನ್ಸಸ್‌, ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಬನಾರಸ್‌ ಹಿಂದೂ ವಿವಿಗಳೂ ಸೇರಿವೆ. ಜಗತ್ತಿನಾದ್ಯಂತ ಇರುವ 2000 ವಿವಿಗಳಿಗೆ ಟೈಮ್ಸ್‌ ಹೈಯರ್‌ ಎಜುಕೇಶನ್‌ ರ್‍ಯಾಂಕಿಂಗ್‌ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next