Advertisement
ವೆಸ್ಟ್ ಇಂಡೀಸ್ ಬೌಲರ್ ಅಲ್ಜಾರಿ ಜೋಸೆಫ್ ಅವರನ್ನು ಆರ್ ಸಿಬಿ ಖರೀದಿಸಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪೈಪೋಟಿಯಲ್ಲಿ ಬೆಂಗಳೂರು ತಂಡವು 11.5 ಕೋಟಿ ರೂ ನೀಡಿ ಖರೀದಿಸಿತು.
Related Articles
Advertisement
ಕಿವೀಸ್ ಬ್ಯಾಟಿಂಗ್ ಸೆನ್ಸೇಶನ್ ರಚಿನ್ ರವೀಂದ್ರ ಅವರು ಭಾರಿ ಹಣ ಪಡೆಯಬಹುದು ಎಂದು ಭಾವಿಸಲಾಗಿತ್ತು. ಆದರೆ ಹರಾಜಿನಲ್ಲಿ ಹೆಚ್ಚಿನ ಬೇಡಿಕೆ ಸಿಗಲಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ರಚಿನ್ ಅವರನ್ನು 1.8 ಕೋಟಿ ರೂ ಗೆ ತನ್ನ ತೆಕ್ಕೆಗೆ ಹಾಕಿಕೊಂಡಿತು. ಶಾರ್ದೂಲ್ ಠಾಕೂರ್ ಅವರನ್ನು ನಾಲ್ಕು ಕೋಟಿ ಗೆ ಚೆನ್ನೈ ಖರೀದಿಸಿತು.
ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಅವರು ಉತ್ತಮ ಬೇಡಿಕೆ ಪಡೆದರು. ಚೆನ್ನೈ, ಆರ್ ಸಿಬಿ, ಹೈದರಾಬಾದ್ ನಡುವೆ ಪೈಪೋಟಿ ನಡೆಯಿತು. ಕೊನೆಗೆ ಕಮಿನ್ಸ್ ಅವರು ದಾಖಲೆಯ 20.5 ಕೋಟಿ ರೂ ಗೆ ಹೈದರಾಬಾದ್ ತಂಡದ ಪಾಲಾದರು. ಇದು ಐಪಿಎಲ್ ಇತಿಹಾಸದಲ್ಲಿ ಆಟಗಾರ ಪಡೆದ ಅತಿ ಹೆಚ್ಚು ಹಣ
ರೋಮನ್ ಪೊವೆಲ್: ರಾಜಸ್ಥಾನ: 7.4 ಕೋಟಿ
ಹ್ಯಾರಿ ಬ್ರೂಕ್: ಡೆಲ್ಲಿ: 4 ಕೋಟಿ
ಟ್ರಾವಿಸ್ ಹೆಡ್: ಹೈದರಾಬಾದ್: 6.8 ಕೋಟಿ
ವಾನಿಂದು ಹಸರಂಗ: ಹೈದರಾಬಾದ್: 4.5 ಕೋಟಿ
ರಚಿನ್ ರವೀಂದ್ರ: ಚೆನ್ನೈ: 1.8 ಕೋಟಿ
ಶಾರ್ದೂಲ್ ಠಾಕೂರ್: ಚೆನ್ನೈ: 4 ಕೋಟಿ
ಅಜ್ಮತುಲ್ಲಾ ಓಮರ್ಝೈ: ಗುಜರಾತ್: 50 ಲಕ್ಷ
ಪ್ಯಾಟ್ ಕಮಿನ್ಸ್: ಹೈದರಾಬಾದ್: 20.5 ಕೋಟಿ
ಗೆರಾಲ್ಡ್ ಕೋಟ್ಜಿ: ಮುಂಬೈ: 5 ಕೋಟಿ
ಹರ್ಷಲ್ ಪಟೇಲ್ : ಪಂಜಾಬ್: 11.75 ಕೋಟಿ
ಡ್ಯಾರೆಲ್ ಮಿಚೆಲ್: ಚೆನ್ನೈ: 14 ಕೋಟಿ
ಕ್ರಿಸ್ ವೋಕ್ಸ್: ಪಂಜಾಬ್: 4.2 ಕೋಟಿ
ಟ್ರಸ್ಟನ್ ಸ್ಟಬ್ಸ್: ಡೆಲ್ಲಿ: 50 ಲಕ್ಷ
ಕೆಎಸ್ ಭರತ್: ಕೋಲ್ಕತ್ತಾ; 50 ಲಕ್ಷ
ಚೇತನ್ ಸಕಾರಿಯಾ: ಕೋಲ್ಕತ್ತಾ; 50 ಲಕ್ಷ
ಅಲ್ಜಾರಿ ಜೋಸೆಫ್: ಬೆಂಗಳೂರು; 11.50 ಕೋಟಿ
ಉಮೇಶ್ ಯಾದವ್: ಗುಜರಾತ್: 5.80 ಕೋಟಿ
ಶಿವಂ ಮಾವಿ: ಲಕ್ನೋ: 6.4 ಕೋಟಿ