ಬೆಂಗಳೂರು: ಜಿಎಸ್‌ಟಿ, ಇಡಿ ಅಧಿಕಾರಿಗಳ ಸೋಗಿ ನಲ್ಲಿ ಉದ್ಯಮಿಯೊಬ್ಬರ ಅಪ ಹರಿಸಿದ್ದಲ್ಲದೆ, 1.5 ಕೋಟಿ ರೂ. ಸುಲಿಗೆ ಮಾಡಿದ್ದ ಪ್ರಕರಣದಲ್ಲಿ ಇಬ್ಬರು ಖಾಸಗಿ ವ್ಯಕ್ತಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಜ್ಯೂವೆಲ್ಲರಿ ಶಾಪ್ ಮಾಲಿ ಕರಾದ ಮುಕೇಶ್ ಜೈನ್(35) ಮತ್ತು ಪ್ರಕಾಶ್ ಜೈನ್(38) ಬಂಧಿತರು.
ಆರೋಪಿಗಳು, ಇದೇ ಪ್ರಕರಣದಲ್ಲಿ ಈ ಹಿಂದೆ ಬಂಧನ ಕ್ಕೊಳಗಾಗಿದ್ದ ಬೆಂಗಳೂರು ದಕ್ಷಿಣ ಕಮಿಷನರೇಟ್ ವಿಭಾಗದ ಕೇಂದ್ರ ಆದಾಯ ತೆರಿಗೆ ಅಧೀಕ್ಷಕ ಅಭಿಷೇಕ್ (34), ಜಿಎಸ್‌ಟಿ ಗುಪ್ತಚರ ವಿಭಾಗದ ಹಿರಿಯ ಅಧಿಕಾರಿ ಮನೋಜ್ ಸೈನಿ (39), ನಾಗೇಶ್ ಬಾಬು (35) ಮತ್ತು ಗುಪ್ತಚರ ಅಧಿಕಾರಿ ಸೋನಾಲಿ ಸಹಾಯ್(30)ಗೆ ಸಹಾಯ ಮಾಡಿದ್ದರು ಎಂಬುದು ಗೊತ್ತಾಗಿದೆ. ಅಲ್ಲದೆ, ನಾಲ್ವರು ಬಂಧಿತ ಜಿಎಸ್‌ಐಟಿ ಅಧಿಕಾರಿಗಳಿಂದ ಸುಲಿಗೆ ಮಾಡಿದ್ದ ಒಂದೂವರೆ ಕೋಟಿ ರೂ. ಪೈಕಿ 50 ಲಕ್ಷ ರೂ. ಪಡೆದು ಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆ.30ರಂದು ಉದ್ಯಮಿ ಕೇಶವ್ ತಕ್ ಎಂಬುವರ ಮನೆಗೆ ನುಗ್ಗಿ, ಕೇಶವ್ ತಕ್ ಹಾಗೂ ಅವರು ಮೂವರು ಕುಟುಂಬ ಸದಸ್ಯರನ್ನು ಅಪಹರಿಸಿ, ಅವರ ಕಚೇರಿಯಲ್ಲೇ ಗೃಹ ಬಂಧನದಲ್ಲಿರಿಸಿದ್ದರು. ಅಲ್ಲದೆ, 1.5 ಕೋಟಿ ರೂ. ಸುಲಿಗೆ ಮಾಡಿದ್ದರು. ಈ ಸಂಬಂಧ ಕೇಶವ್ ತಕ್ ಬೈಯಪ್ಪನಹಳ್ಳಿ ಠಾಣೆಗೆ ದೂರು ನೀಡಿದ್ದರು. ಬಳಿಕ ಸಿಸಿಬಿಗೆ ಪ್ರಕರಣ ವರ್ಗಾವಣೆ ಯಾಗಿದ್ದು, ಇಬ್ಬರು ಜಂಟಿ ಕಾರ್ಯಾಚರಣೆ ನಡೆಸಿ ಸೆ.9ರಂದು ನಾಲ್ವರು ಜಿಎಸ್‌ಐಟಿ ಆರೋಪಿಗಳನ್ನು ಬಂಧಿಸಲಾಗಿತ್ತು. ಇದೀಗ ಉದ್ಯಮಿಯ ಬಗ್ಗೆ ಮಾಹಿತಿ ನೀಡಿ, ಇಡೀ ಕೃತ್ಯದ ರೂಪುರೇಷೆ ಸಿದ್ಧಪಡಿಸಿದಲ್ಲದೆ, ಹವಾಲ ಮೂಲಕ ದೂರುದಾರರಿಂದ ಹಣ ಸುಲಿಗೆ ಮಾಡಿದ ಇಬ್ಬರನ್ನು ಬಂಧಿಸಲಾಗಿದೆ ಎಂದು ಕಮಿಷನರ್ ತಿಳಿಸಿದರು.
ಉದ್ಯಮಿಯನ್ನು ಖೆಡ್ಡಕ್ಕೆ ಕೆಡವಿದ್ದ ಜ್ಯುವೆಲ್ಲರಿ ಮಾಲಿಕರು ಮುಕೇಶ್ ಜೈನ್ ಹಾಗೂ ಪ್ರಕಾಶ್ ಜೈನ್ ತಾವೇ ಜಿಎಸ್‌ಟಿ ಅಧಿಕಾರಿಗಳ ಮೂಲಕ ಉದ್ಯಮಿಯನ್ನು ಖೆಡ್ಡಾಕೆ ಕೆಡವಿ ಬಳಿಕ ಅವರ ಮೂಲಕ ಆತನನ್ನು ಬೆದರಿಸಿ ಹವಾಲ ಮೂಲಕ 1.1 ಕೋಟಿ ರೂ. ಪಡೆದಿದ್ದರು. ಅದೇ ಹಣದಲ್ಲಿ ಕಮಿಷನ್ 50 ಲಕ್ಷ ರೂ. ಪಡೆದು ಉಳಿದ ಹಣ ಆರೋಪಿತ ಜಿಎಸ್‌ಟಿ ಅಧಿಕಾರಿಗಳಿಗೆ ತಲುಪಿಸಿದ್ದರು ಎಂದು ತಿಳಿದು ಬಂದಿತ್ತು. ಈ ಇಬ್ಬರು ಆರೋಪಿಗಳಿಂದ 69 ಲಕ್ಷ ರೂ. ನಗದು ಹಾಗೂ 306 ಗ್ರಾಂ ಚಿನ್ನದ ಗಟ್ಟಿಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದಲ್ಲಿ ಇದುವರೆಗೂ 93 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ. ಹವಾಲ ಮಾದರಿಯಲ್ಲಿ ಹಣ ವರ್ಗಾವಣೆ ಆಗಿರುವುದರ ಕುರಿತು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ಆಯುಕ್ತರು ತಿಳಿಸಿದರು.