Advertisement

ಸ್ಪಾ ಮಾಲಿಕರ ಬೆದರಿಸಿ ಹಣ ವಸೂಲಿ: ಓರ್ವ ಪತ್ರಕರ್ತ ಸೇರಿ ನಾಲ್ವರು ಗೃಹರಕ್ಷಕ ಸಿಬ್ಬಂದಿ ಸೆರೆ

11:54 AM Mar 03, 2022 | Team Udayavani |

ಬೆಂಗಳೂರು: ಸ್ಪಾ ಮಾಲಿಕರನ್ನು ಬೆದರಿಸಿ ಅವರಿಂದ 1.60 ಲಕ್ಷ ರೂ. ವಸೂಲಿ ಮಾಡಿದ್ದ ಪತ್ರಕರ್ತ ಹಾಗೂ ನಾಲ್ವರು ಗೃಹರಕ್ಷಕ ಸಿಬ್ಬಂದಿಯನ್ನು ರಾಮಮೂರ್ತಿ ನಗರ ಪೊಲೀಸರು
ಬಂಧಿಸಿದ್ದಾರೆ.

Advertisement

Customs and Excise ಪತ್ರಿಕೆ ವರದಿಗಾರ ಆರ್‌.ಟಿ. ನಗರ ನಿವಾಸಿ ಸೈಯ್ಯದ್‌ ಖಲೀಂ (28), ಡಿಜೆಹಳ್ಳಿಯ ನಿವಾಸಿ ಗೃಹರಕ್ಷಕ ಸಿಬ್ಬಂದಿ ಸಂಪಂಗಿರಾಮ್‌ (31), ಆಶೀಫ್‌ (27), ಆನಂದ್‌ ರಾಮ್‌ (30) ಹಾಗೂ ವಿನಾಯಕ್‌ (28) ಅವರನ್ನು ಬಂಧಿಸಲಾಗಿದೆ. ಸ್ಪಾ ಮಾಲಿಕರು ವೇತನ ನೀಡದ ಹಿನ್ನೆಲೆಯಲ್ಲಿ ಆರೋಪಿಗಳಲ್ಲಿ ಒಬ್ಬರಾದ ಆನಂದರಾಮ್‌ಗೆ ಪರಿಚಯವಿದ್ದ ಯುವತಿಯೊಬ್ಬಳು ಇತ್ತೀಚೆಗೆ ಕೆಲಸ ಬಿಟ್ಟಿದ್ದಳು. ಈ ವಿಷಯವನ್ನು ಸಂಪಂಗಿರಾಮ್‌ ತನ್ನ ಸ್ನೇಹಿತರಾದ ಸೈಯ್ಯದ್‌ ಖಲೀಂ ಹಾಗೂ ಇತರರಿಗೆ ತಿಳಿಸಿದ್ದರು.

ಆರೋಪಿಗಳೆಲ್ಲ ಜತೆಯಾಗಿ ಸ್ಪಾ ಮಾಲಿಕನಿಂದ ಹಣ ವಸೂಲಿ ಮಾಡಲು ಸಂಚು ರೂಪಿಸಿದ್ದರು. ಅದರಂತೆ ಫೆ.26 ರಂದು ಮಧ್ಯಾಹ್ನ ರಾಮಮೂರ್ತಿ  ನಗರದ ಸ್ಪಾಗೆ ತೆರಳಿ ಸೈಯ್ಯದ್‌ ತನ್ನನ್ನು ಪತ್ರಿಕೆಯೊಂದರ ವರದಿಗಾರನೆಂದು ಪರಿಚಯಿಸಿಕೊಂಡರೆ, ಉಳಿದವರು ತಾವು ಪೊಲೀಸ್‌ ಎಂದು ಹೇಳಿದ್ದರು.

ಇದನ್ನೂ ಓದಿ : ”ಅಸಲಿ ಆಟ ಈಗ ಶುರು” ಎಂದ ವಿಕ್ರಾಂತ್ ರೋಣ; ಇಂಗ್ಲೀಷ್ ವರ್ಷನ್ ಡಬ್ಬಿಂಗ್ ಮುಗಿಸಿದ ಕಿಚ್ಚ

ನಿಮ್ಮ ಸ್ಪಾದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಿಸಿ ಪತ್ರಿಕೆಯಲ್ಲಿ ಸುದ್ದಿ ಪ್ರಕಟಿಸುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದರು.

Advertisement

ಆತಂಕಗೊಂಡ ಸ್ಪಾ ಮಾಲಿಕರು ಮೊದಲು 60 ಸಾವಿರ ರೂ. ನಗದು ಹಾಗೂ 1 ಲಕ್ಷ ರೂ.ಗಳನ್ನು ಆರೋಪಿಗಳ ಖಾತೆಗೆ ಗೂಗಲ್‌ ಪೇ ಮಾಡಿದ್ದರು. ಮರುದಿನ ಸ್ಪಾ ಮಾಲಿಕನಿಗೆ ಕರೆ ಮಾಡಿದ ಆರೋಪಿ ಗಳು ಮತ್ತೆ ಹಣಕ್ಕೆ ಬೇಡಿಕೆಯಿಟ್ಟಿದ್ದರು.

ಆರೋಪಿಗಳ ಬಗ್ಗೆ ಅನುಮಾನಗೊಂಡ ಸ್ಪಾ ಮಾಲಿಕ, ರಾಮಮೂರ್ತಿನಗರ ಠಾಣೆ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದರು. ಪೊಲೀಸರು ಸ್ಪಾ ಮಾಲಿಕರಿಂದಲೇ ಆರೋಪಿಗಳಿಗೆ
ಕರೆ ಮಾಡಿಸಿ, ತಾವಿದ್ದಲ್ಲಿಗೆ ಕರೆಸಿಕೊಂಡು ಬಂಧಿಸಿದ್ದಾರೆ.

ಮೊದಲ ಪ್ರಕರಣದಲ್ಲಿಯೇ ಸಿಕ್ಕಿ ಬಿದ್ದ ಆರೋಪಿಗಳು: ನಾಲ್ವರು ಆರೋಪಿಗಳು ನಗರದ ವಿವಿಧ ಠಾಣೆಗಳಲ್ಲಿ ಗೃಹರಕ್ಷಕ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಸ್ಪಾ ಮಾಲಿಕನ
ಬಳಿ ಯುವತಿಗೆ ವೇತನ ಕೊಡದಿರುವ ಬಗ್ಗೆ ಪ್ರಶ್ನಿಸಿರಲಿಲ್ಲ. ಮೊದಲ ಬಾರಿಗೆ ಇಂತಹ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next