Advertisement
ನವರಾತ್ರಿ ಆರಂಭದ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರಮುಖ ದೇವಸ್ಥಾನಗಳಲ್ಲಿ ನವ ದುರ್ಗೆಯರ ಆರಾಧನೆ ಮಾಡಲಾಯಿತು. ಮುಂಜಾನೆ 5 ರಿಂದ ದೇಗುಲಗಳಲ್ಲಿ ಧಾರ್ಮಿಕ ಕೈಂಕರ್ಯ ಹಾಗೂ ವಿಶೇಷ ಪೂಜೆ, ಹೋಮಗಳು ನಡೆದವು. ಮನೆಗಳಲ್ಲಿ ಶುಭ ಮುಹೂರ್ತದಲ್ಲಿ ದೇವಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆಗಳನ್ನು ಸಲ್ಲಿಸಿದರು. ಜತೆಗೆ ಬೊಂಬೆಗಳನ್ನು ಕೂರಿಸಿ ಸಂಭ್ರಮಿಸಿದರು. ಇದೇ ವೇಳೆ ನವ ಭಕ್ಷ್ಯಗಳನ್ನು ತಯಾರಿಸಿ, ದೇವಿ ಮುಂದಿಟ್ಟು ನೈವೇದ್ಯ ಅರ್ಪಿಸಿದರು.
Related Articles
Advertisement
ನವರಾತ್ರಿ ಅಂಗವಾಗಿ ದೇವಿಯನ್ನು ಶೈಲಪುತ್ರಿ, ಬ್ರಹ್ಮ ಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದ ಮಾತಾ, ಕಾತ್ಯಾಯನಿ, ಕಾಲರಾತ್ರಿ, ಸಿದ್ಧಿದಾತ್ರಿ ಮತ್ತು ಮಹಾಗೌರಿಯ ರೂಪದಲ್ಲಿ ಸಿಂಗಾರ ಮಾಡಿ, ಮುಂದಿನ 9 ದಿನಗಳ ಕಾಲ ಪೂಜೆ ಮಾಡಲಾಗುತ್ತದೆ.
ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ: ಲಾಸ್ಯ ವರ್ಧನ ಟ್ರಸ್ಟ್ ನವರಾತ್ರಿ ಮಹೋತ್ಸವ ಅಂಗವಾಗಿ 10 ದಿನಗಳ ಮಲ್ಲೇಶ್ವರದ ಕೇಶವ ಕಲ್ಪದಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದೆ. ಅ.4ರಂದು ಸಾಧನ ಸಂಗಮ ಟ್ರಸ್ಟ್‌ನಿಂದ ಸಮೂಹ ನೃತ್ಯ, ಅ.5ರಂದು ಚಂಪಕ ಅಕಾಡೆಮಿ ಭರತನಾಟ್ಯ ಸಮೂಹ ನೃತ್ಯ, ಅ.6ರಂದು ಕಲೈಕೋವಿಲ್ ನಾಟ್ಯ ಪಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಸಮೂಹ ನೃತ್ಯ, ಅ.7 ಪೂರ್ಣವಂದಿತ ವೆಂಟಕರಾಮು ಅವರಿಂದ ಭರತನಾಟ್ಯ, ಅ.8ರಂದು ಶ್ರೀ ಕಂಠೇಶ್ವರ ಕಲಾಕೇಂದ್ರ ವಿದ್ಯಾರ್ಥಿಗಳಿಂದ ಭರತ ನಾಟ್ಯ ಸಮೂಹ ನೃತ್ಯ, ಅ. 9ರಂದು ಜತಿನ್ ಅಕಾಡೆಮಿ ವಿದ್ಯಾರ್ಥಿಗಳಿಂದ ಕೂಚಿಪುಡಿ, ಅ.10ರಂದು ಶ್ರದ್ಧಾ ಡಾನ್ಸ್ ಸೆಂಟರ್‌ನಿಂದ ಭರತನಾಟ್ಯ, ಅ. 11ರಂದು ಲಾಸ್ಯವರ್ಧನ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯತೆ ಕಾರ್ಯಕ್ರಮ ನಡೆಯಲಿದೆ.