Advertisement

22ಕ್ಕೆ ರೈತ ವಿರೋಧಿ ಕಾಯ್ದೆ ಖಂಡಿಸಿ ಬೆಂಗಳೂರು ಚಲೋ

01:58 PM Mar 16, 2021 | Team Udayavani |

ಮಧುಗಿರಿ: ಕೇಂದ್ರ ಸರ್ಕಾರ ವಿವಾದಿತ ಕೃಷಿ, ಕಾರ್ಮಿಕ ಹಾಗೂ ಪ್ರಜಾಪ್ರಭುತ್ವ ದಮನಿಸುವಕಾರ್ಯಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳುಮುಂದಾಗಿದ್ದು, ಇವುಗಳ ವಿರುದ್ಧ ಧ್ವನಿಎತ್ತಲು ಮಾ.22 ರಂದು ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತಸಂಘಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಹೇಳಿದರು.

Advertisement

ತಾಲೂಕಿನಲ್ಲಿ ಕಳೆದ 5 ದಿನಗಳಿಂದ ಸರ್ಕಾರಗಳ ಜನವಿರೋಧಿ ನೀತಿ ಖಂಡಿಸಿ ಜಾಗೃತಿ ಮೂಡಿಸಿಪಟ್ಟಣದ ತಹಶೀಲ್ದಾರ್‌ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಹಿಂದೆ ರಾಜರು ಕೇವಲ ಪಟ್ಟಭದ್ರ ಹಿತಾಸಕ್ತಿಜನರಿಗೆ ಭೂಮಿ ನೀಡಿದಂತೆ ಇಂದು ಈ ಮೋದಿಸರ್ಕಾರ ಅಂಬಾನಿ-ಅಧಾನಿಯ ಕಂಪನಿಗೆ ದೇಶದ ರೈತರ ಭೂಮಿಯನ್ನು ಮಾರಾಟ ಮಾಡಲು ಸಂಚು ರೂಪಿಸಿದೆ. ಲಾಕ್‌ಡೌನ್‌ ನೆಪದಲ್ಲಿ ಆರ್ಥಿಕ ಬಿಕ್ಕಟ್ಟುಉಲ್ಬಣಿಸಿದ್ದು, ಜನರ ಮೇಲೆ ಅಪಾರವಾದ ತೆರಿಗೆಭಾರವನ್ನು ಹೊರಿಸಿದ್ದಾರೆ ಎಂದು ಕಿಡಿಕಾರಿದರು.ಇತ್ತೀಚಿನ ಬಜೆಟ್‌ಗಳು ಜನಸಾಮಾನ್ಯರ ಹೊಟ್ಟೆಬಗೆದು ಶ್ರೀಮಂತ ಕಂಪನಿಗಳ ತಿಜೋರಿತುಂಬಿಸುತ್ತಿದೆ. ಇದರಿಂದ ಕೃಷಿಯನ್ನೇ ನಂಬಿರುವರೈತರು, ಕೃಷಿ ಕಾರ್ಮಿಕರು ಹಾಗೂ ವಾಣಿಜ್ಯಕಾರ್ಮಿಕರ ದುಡಿಮೆಯೆಲ್ಲ ಕಾರ್ಪೋರೇಟ್‌ ಕಂಪನಿಗಳ ಪಾಲಾಗುತ್ತಿದೆ. ಇದರಿಂದ ದೇಶವಾಸಿಗಳು ಗುಲಾಮರಾಗುತ್ತಿದ್ದು, ಪೆಟ್ರೋಲ್‌,ಡಿಸೇಲ್‌ ಬೆಲೆ ಹೆಚ್ಚಳದಿಂದ ದಿನಬಳಕೆಯ ವಸ್ತುಗಳುಆಕಾಶಕ್ಕೇರಿದ್ದು, ಸಾಮಾನ್ಯ ಜನತೆಗೆ 3 ಹೊತ್ತು ಊಟಕ್ಕೂ ಪರದಾಡುವಂತ ಪರಿಸ್ಥಿತಿ ಬಂದೊದಗಿದೆ.

ನಮ್ಮ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ ಎಲ್ಲ ಸಂಘಟನೆಗಳ ಒಕ್ಕೂಟವಾದ “ಸಂಯುಕ್ತ ಹೋರಾಟ ಕರ್ನಾಟಕ” ದಿಂದ ಮಾ.22 ರಂದು ಪ್ರತಿಭಟನೆ ನಡೆಸಲಿದ್ದು, ಎಲ್ಲರೂ ಭಾಗವಹಿಸಿ ಹೋರಾಟದಲ್ಲಿ ಯಶಸ್ಸು ಕಾಣಲು ಒಗ್ಗಟ್ಟು ಪ್ರದರ್ಶಿಸುವಂತೆ ಮನವಿ ಮಾಡಿದ್ದಾರೆ. ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ ಮಾತನಾಡಿ, ದೇಶದಲ್ಲಿನ ಮೋದಿಸರ್ಕಾರ ಹಾಗೂ ರಾಜ್ಯದ ಯಡಿಯೂರಪ್ಪನವರಸರ್ಕಾರವು ಕೃಷಿಕರ ಪಾಲಿಗೆ ಮರಣಶಾಸನವನ್ನುಬರೆಯುತ್ತಿದ್ದು ಅಪಾಯಕಾರಿ. ಭೂ ಮಸೂದೆ,ವಿದ್ಯುತ್‌ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆಗಳನ್ನುತಂದಿರುವುದು ದೇಶಕ್ಕೆ ಮಾರಕವಾಗಲಿದೆ ಎಂದು ತಿಳಿಸಿದರು.

ಯತಿರಾಜು ಅಖೀಲ ಭಾರತೀಯ ಕಿಸಾನ್‌ ಸಂಘರ್ಷ ಸಮನ್ವಯ ಸಮಿತಿ ಜಿಲ್ಲಾ ಸಂಚಾಲಕಯತಿರಾಜು, ಜಿಲ್ಲಾ ಸಂಘಟನಾ ಕಾರ್ಯದರ್ಶಿದೊಡ್ಡಮಾಳಯ್ಯ, ಜಿಲ್ಲಾ ಮಹಿಳಾಧ್ಯಕ್ಷೆ ನಾಗರತ್ನಮ್ಮ, ತಾ. ಅಧ್ಯಕ್ಷ ಡಿ.ಆರ್‌.ರಾಜಶೇಖರ್‌, ತಾ.ಕಾರ್ಯದರ್ಶಿ ನಾಗರಾಜು, ತಾಲೂಕು ಮಹಿಳಾಅಧ್ಯಕ್ಷೆ ಭಾಗ್ಯಮ್ಮ, ಕನ್ನಡಪರ ಸಂಘಟನೆಗಳ ಒಕ್ಕೂದ ಅಧ್ಯಕ್ಷ ತಿಮ್ಮರಾಜು ಇದ್ದರು.

Advertisement

ತಾಲೂಕು ಸರ್ವೆ ಇಲಾಖೆ ಅಧಿಕಾರಿಗಳು ರೈತರ ಜಮೀನು ಸರ್ವೆಮಾಡಲು ಮನಸೋಇಚ್ಛೆ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ. ಈ ಬಗ್ಗೆ ತಹಶೀ ಲ್ದಾರ್‌ ಕೂಡಲೇ ಸಭೆ ನಿಗದಿ ಮಾಡಿ. ರೈತ ರನ್ನೂ ಆಹ್ವಾನಿಸಿದರೆ ಇವರ ಬಂಡವಾಳ ವನ್ನು ದಾಖಲೆ ಸಮೇತ ಬಯಲು ಮಾಡುತ್ತೇವೆ. ಈ ಬಗ್ಗೆ ಉಪವಿಭಾಗಾ ಧಿಕಾರಿಗಳು ಸಹ ರೈತರ ನೆರವಿಗೆ ನಿಲ್ಲಬೇಕು. – ಜಿ.ಸಿ.ಶಂಕರಪ್ಪ, ಪ್ರಧಾನ ಕಾರ್ಯದರ್ಶಿ, ಜಿಲ್ಲಾ ರೈತಸಂಘ

Advertisement

Udayavani is now on Telegram. Click here to join our channel and stay updated with the latest news.

Next