Advertisement

Pro Kabaddi ಏಳಿಗೆ ಕಾಣದ ಬೆಂಗಳೂರು ಬುಲ್ಸ್‌

12:25 AM Dec 21, 2023 | Team Udayavani |

ಪುಣೆ: ಹತ್ತನೇ ಪ್ರೊ ಕಬಡ್ಡಿ ಸೀಸನ್‌ನಲ್ಲಿ ಬೆಂಗಳೂರು ಬುಲ್ಸ್‌ ತಂಡದ ನಿರಾಶಾದಾಯಕ ಆಟ ಮುಂದುವರಿದಿದೆ. ಬುಧವಾರದ ಮುಖಾಮುಖಿಯಲ್ಲಿ ಅದು 18-43 ಅಂಕಗಳ ಭಾರೀ ಅಂತರದಿಂದ ಆತಿಥೇಯ ಪುಣೇರಿ ಪಲ್ಟಾನ್ಸ್‌ಗೆ ಶರಣಾಯಿತು.

Advertisement

ಇದು 7 ಪಂದ್ಯಗಳಲ್ಲಿ ಬುಲ್ಸ್‌ಗೆ ಎದುರಾದ 5ನೇ ಸೋಲು. ಪುನೇರಿ ಆರರಲ್ಲಿ 5 ಪಂದ್ಯಗಳನ್ನು ಗೆದ್ದು ತವರಿನ ಆವೃತ್ತಿಯನ್ನು ಮುಗಿಸಿತು. ಗುರುವಾರ ವಿರಾಮ. ಶುಕ್ರವಾರದಿಂದ ಚೆನ್ನೈ ಚರಣ ಆರಂಭವಾಗಲಿದೆ.

ಜೈಪುರಕ್ಕೆ ಭರ್ಜರಿ ಜಯ
ದಿನದ ಮೊದಲ ಪಂದ್ಯದಲ್ಲಿ ಜೈಪುರ್‌ ಪಿಂಕ್‌ ಪ್ಯಾಂಥರ್ 41-24 ಅಂಕಗಳ ಅಂತರದಿಂದ ಯುಪಿ ಯೋಧಾಸ್‌ಗೆ ಸೋಲುಣಿಸಿತು. ರೈಡರ್‌ ಅರ್ಜುನ್‌ ದೇಶ್ವಾಲ್‌ ಅಮೋಘ ಪ್ರದರ್ಶನ ನೀಡಿ ಜೈಪುರದ ದೊಡ್ಡ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ದೇಶ್ವಾಲ್‌ ಅವರದು 13 ಅಂಕಗಳ ಸಾಧನೆ. ಇದರಲ್ಲಿ 12 ಟಚ್‌ ಪಾಯಿಂಟ್‌ಗಳಾಗಿದ್ದವು. ಇನ್ನೊಂದು ಟ್ಯಾಕಲ್‌ ಮೂಲಕ ಲಭಿಸಿತು. ಮತ್ತೋರ್ವ ರೈಡರ್‌ ವಿ. ಅಜಿತ್‌, ಡಿಫೆಂಡರ್‌ ರೇಝ ತಲಾ 4 ಅಂಕ ಗಳಿಸಿದರು.

ಯುಪಿ ತಂಡದಲ್ಲಿ ಯಾರಿಂದಲೂ ಜೋಶ್‌ ಕಂಡುಬರಲಿಲ್ಲ. ನಾಯಕ ಪದೀìಪ್‌ ನರ್ವಾಲ್‌ 6, ಆಲ್‌ರೌಂಡರ್‌ ವಿಜಯ್‌ ಮಲಿಕ್‌ 4 ಅಂಕ ತಂದಿತ್ತರು.

Advertisement

Udayavani is now on Telegram. Click here to join our channel and stay updated with the latest news.

Next