Advertisement

Bengaluru: ಪತ್ನಿ ಕಾಟಕ್ಕೆ ಬೇಸತ್ತು ಮನೆ ಬಿಟ್ಟು ಹೋಗಿದ್ದ ಟೆಕಿ ನೋಯ್ಡಾದಲ್ಲಿ ಪತ್ತೆ

02:50 PM Aug 17, 2024 | Team Udayavani |

ಬೆಂಗಳೂರು: ಪತ್ನಿಯ ಕಾಟಕ್ಕೆ ಬೇಸತ್ತು ಮನೆ ಬಿಟ್ಟು ಹೋಗಿದ್ದ ಸಾಫ್ಟ್ವೇರ್‌ ಎಂಜಿನಿಯರ್‌ ವಿಪಿನ್‌ ಗುಪ್ತಾ ಎಂಬುವರನ್ನು ಉತ್ತರ ಪ್ರದೇಶದ ನೋಯ್ಡಾದಲ್ಲಿ ಕೊಡಿಗೇಹಳ್ಳಿ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ.

Advertisement

ಮಾನ್ಯತಾ ಟೆಕ್‌ಪಾರ್ಕ್‌ನಲ್ಲಿರುವ ಸಾಫ್ಟ್ವೇರ್‌ ಕಂಪನಿಯೊಂದರ ಉದ್ಯೋಗಿ ವಿಪಿನ್‌ ಗುಪ್ತಾ ಕೊಡಿಗೇಹಳ್ಳಿಯ ಟಾಟಾನಗರದಲ್ಲಿ ಪತ್ನಿಯೊಂದಿಗೆ ವಾಸಿಸುತ್ತಿದ್ದರು. ಕಳೆದ ಆ.4ರಂದು ಮಧ್ಯಾಹ್ನ ಮನೆಯಿಂದ ಹೋಗಿದ್ದ ಅವರು ಹಿಂತಿರುಗಿರಲಿಲ್ಲ. ಏಕಾಂಗಿಯಾಗಿ ಆಗಾಗ ವಿಪಿನ್‌ ಬೈಕ್‌ ರೈಡ್‌ ಹೋಗುವ ಹವ್ಯಾಸ ಹೊಂದಿದ್ದರಿಂದ ಮನೆಗೆ ಬರಬಹುದು ಎಂದು ಪತ್ನಿ ಸುಮ್ಮನಾಗಿದ್ದರು. ಆದರೆ, ಫೋನ್‌ ಸ್ವಿಚ್ಡ್ ಆಫ್ ಆಗಿದ್ದರಿಂದ ಆತಂಕಗೊಂಡು ಕೊಡಿಗೇಹಳ್ಳಿ ಠಾಣೆಗೆ ದೂರು ನೀಡಿದ್ದರು. ‌

ಪೊಲೀಸರು ತನಿಖೆ ನಡೆಸಿದಾಗ ಪಿವಿನ್‌ ಮನೆಯಿಂದ ತನ್ನ ಬೈಕ್‌ನಲ್ಲೇ ತಿರುಪತಿಗೆ ತೆರಳಿದ್ದರು. ಅಲ್ಲಿ ಕೇಶಮುಂಡನ ಮಾಡಿಸಿಕೊಂಡು ನಂತರ ನೋಯ್ಡಾಗೆ ಹೋಗಿರುವುದು ಕಂಡು ಬಂದಿತ್ತು. ಇದೀಗ ಕೋಡಿಗೆಹಳ್ಳಿ ಪೊಲೀಸರು ನೋಯ್ಡಾಗೆ ತೆರಳಿ ವಿಪಿನ್‌ ಪತ್ತೆಹಚ್ಚಿ ನಗರಕ್ಕೆ ಕರೆತಂದಿದ್ದಾರೆ.

ಮನೆಯಲ್ಲಿ ಸಿಸಿ ಕ್ಯಾಮೆರಾ: ಪತ್ನಿ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾಳೆ. ನನ್ನನ್ನು ನಿಯಂತ್ರಿಸಲೆಂದೇ ಮನೆಗೆ ಸಿಸಿ ಕ್ಯಾಮೆರಾ ಅಳವಡಿಸಿದ್ದಾಳೆ. ಆಕೆಯ ಮಾನಸಿಕ ಹಿಂಸೆಯಿಂದ ನೊಂದು ಮನೆ ಬಿಟ್ಟು ಬಂದಿರುವುದಾಗಿ ವಿಪಿನ್‌ ಪೊಲೀಸರ ಮುಂದೆ ಹೇಳಿದ್ದಾರೆ. ಮನೆಗೆ ಮಾತ್ರ ಹೋಗಲಾರೆ ಎಂದು ಆತ ಪೊಲೀಸರ ಮುಂದೆ ಅವಲತ್ತುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next