Advertisement
ಬಿಬಿಎಂಪಿಯ ಅಂಕಿ-ಅಂಶದ ಪ್ರಕಾರ, ಬೆಂಗಳೂರು ಉಪನಗರಗಳನ್ನು ಸಂಪರ್ಕಿಸುವ ರೈಲ್ವೆ ಯೋಜನೆ, ರಸ್ತೆ, ನಮ್ಮ ಮೆಟ್ರೋ ಸೇರಿದಂತೆ ಮತ್ತಿತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸಲುವಾಗಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕಳೆದ 3 ವರ್ಷಗಳಿಂದ ಸುಮಾರು 9,703 ಕ್ಕೂ ಅಧಿಕ ಮರಗಳಿಗೆ ಕೊಡಲಿ ಪೆಟ್ಟು ನೀಡಲಾಗಿದೆ.
Related Articles
Advertisement
“ಬಿಬಿಎಂಪಿಗೆ ಮರ ಸಂರಕ್ಷಣೆ ಬಗ್ಗೆ ಕಾಳಜಿಯಿಲ್ಲ‘
ಹವಾಮಾನ ವೈಪರೀತ್ಯವನ್ನು ತಡೆಯುವ ನಿಟ್ಟಿನಲ್ಲಿ ಮರಗಿಡಗಳು ಪ್ರಮುಖ ಪಾತ್ರ ವಹಿಸುತ್ತವೆ. ಭವಿಷ್ಯತ್ತಿನ ಹವಾಮಾನ ಬದಲಾವಣೆ ಕೇಂದ್ರೀ ಕರಿಸಿ ಪ್ಯಾರೀಸ್ ಒಪ್ಪಂದ ಜಾರಿಗೆ ತರಲಾಗಿದೆ. ಪ್ಯಾರೀಸ್ ಒಪ್ಪಂದಕ್ಕೆ ಸಹಿ ಹಾಕಿ ಜಾಗತಿಕ ತಾಪಮಾನ ತಡೆಗಟ್ಟಲು ಕೈ ಜೋಡಿಸುವ ಭರವಸೆಯನ್ನು ಸರ್ಕಾರ ನೀಡಿದೆ. ಆದರೆ, ಸರ್ಕಾರದ ಆಡಳಿತ ಯಂತ್ರದ ಭಾಗವಾಗಿರುವ ಬಿಬಿಎಂಪಿ ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ಕೇವಲ ಮೂರೇ ವರ್ಷದಲ್ಲಿ 9 ಸಾವಿರ ಮರಗಳನ್ನು ನೆಲಸಮ ಮಾಡಲು ಅವಕಾಶ ಕೊಟ್ಟಿರುವುದನ್ನು ನೋಡಿದರೆ ನಿಜವಾದ ಪರಿಸರ ಉಳಿಸುವ ಕಾಳಜಿ ಇಲ್ಲದಂತೆ ತೋರುತ್ತದೆ ಎಂದು ಪರಿಸರವಾದಿ ಭಾರ್ಗವಿ ರಾವ್ ದೂರುತ್ತಾರೆ. ಜಾಗತಿಕ ತಾಪ ಮಾನದ ಬದಲಾವಣೆಯಿಂದಾಗಿ ಅತಿವೃಷ್ಟಿ ಮತ್ತು ಅನಾವೃಷ್ಟಿಯಂತಹ ವಿಪತ್ತುಗಳು ಸಂಭವಿಸುತ್ತಿವೆ. ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ) ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಂತಹ ಸಂಸ್ಥೆಗಳು ನಗರದ ಹಸಿರು ಹೊದಿಕೆಯನ್ನು ಸುಧಾರಿಸಲು ಮತ್ತು ಉಳಿಸಿಕೊಳ್ಳಲು ಯೋಜನೆಯನ್ನು ಸಿದ್ಧಪಡಿಸ ಬೇಕಾಗಿದೆ ಎನ್ನುತ್ತಾರೆ.
ರಾಜಧಾನಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸಾವಿರಾರು ಮರಗಳನ್ನು ಕಡಿಯುತ್ತಿದ್ದು, ಮುಂದಿನ ದಿನಗಳಲ್ಲಿ ನಾವೆಲ್ಲರೂ ದೊಡ್ಡ ಬೆಲೆ ತೆರಬೇಕಾಗುತ್ತದೆ. ಈಗಾಗಲೇ ರಾಜಧಾನಿಯಲ್ಲಿ ಗರಿಷ್ಠ ತಾಪಮಾನ ತಲುಪಿದೆ. ಬಿಬಿಎಂಪಿ ಮರ ಸಮಿತಿಯು ಕಡಿದ ಮರಗಳಿಗೆ ಪರ್ಯಾಯವಾಗಿ ಎಷ್ಟು ಗಿಡಗಳನು ನೆಟ್ಟು ಬೆಳೆಸಿದೆ ಎಂಬುದರ ಪರಿಶೀಲನೆ ನಡೆಸಲು ಮುಂದಾಗಬೇಕು. ●ವಿಜಯ್ ನಿಶಾಂತ್, ಸಸ್ಯ ವೈದ್ಯ
-ದೇವೇಶ ಸೂರಗುಪ್ಪ