Advertisement

Bengaluru: ವ್ಹೀಲಿಂಗ್‌ ಮಾಡುತ್ತಿದ್ದ 44 ಯುವಕರು ವಶಕ್ಕೆ

01:13 PM Aug 17, 2024 | Team Udayavani |

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಲ್ಲಿ ದ್ವಿಚಕ್ರವಾಹನ ವ್ಹೀಲಿಂಗ್‌ ನಡೆಸಿ ಪುಂಡಾಟ ಮೆರೆಯುತ್ತಿದ್ದ 44 ಯುವಕರನ್ನು ವಶಕ್ಕೆ ಪಡೆದ ಉತ್ತರ ವಿಭಾಗದ ಸಂಚಾರ ವಿಭಾಗದ ಪೊಲೀಸರು 33 ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

ದೇವನಹಳ್ಳಿ ಸಂಚಾರ ಪೊಲೀಸ್‌ ಠಾಣೆಯಲ್ಲಿ 9, ಯಲಹಂಕ ಠಾಣೆಯಲ್ಲಿ 6 ಮತ್ತು ಹೆಬ್ಟಾಳ ಠಾಣೆಯಲ್ಲಿ 18 ಪ್ರಕರಣಗಳು ದಾಖಲಾಗಿವೆ.

ಯಲಹಂಕದ ಚಿಕ್ಕಜಾಲ ಬಳಿಯ ಏರ್‌ಪೋರ್ಟ್‌ ರಸ್ತೆಯಲ್ಲಿ ಗುರುವಾರ ಸಂಜೆ 5 ಗಂಟೆ ಬಳಿಕ ಪುಂಡರ ಗ್ಯಾಂಗ್‌ ದ್ವಿಚಕ್ರವಾಹನ ವ್ಹೀಲಿಂಗ್‌ ನಡೆಸುತ್ತಿತ್ತು. ವಿಮಾನ ನಿಲ್ದಾಣದ ಕಡೆಯಿಂದ ಬೆಂಗಳೂರಿನತ್ತ ಬರುವ ವಾಹನ ಸವಾರರು ಇತ್ತೀಚೆಗೆ ಪುಂಡರ ಬೈಕ್‌ ವ್ಹೀಲಿಂಗ್‌ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಈ ವೇಳೆ ಯುವಕನೊಬ್ಬ ಅಶ್ಲೀಲವಾಗಿ ಕಾರಿನಲ್ಲಿದ್ದವರಿಗೆ ಬೆದರಿಸಿದ್ದ.

ಈ ದೃಶ್ಯವನ್ನು ಕಾರಿನಲ್ಲಿದ್ದ ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣ ಗಳಲ್ಲಿ ಹಂಚಿಕೊಂಡಿದ್ದರು. ಈ ದೃಶ್ಯ ವೈರಲ್‌ ಆಗು ತ್ತಿದ್ದಂತೆ ಎಚ್ಚೆತ್ತುಕೊಂಡ ಉತ್ತರ ವಿಭಾಗದ ಸಂಚಾರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆ‌ಸಿ 33 ಪ್ರಕರಣ ದಾಖಲಿಸಿಕೊಂಡು, 44 ಯುವಕರನ್ನು ವಶಕ್ಕೆ ಪಡೆದ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next