ಪಶ್ಚಿಮ ಬಂಗಾಳ: ಸುಮಾರು 15 ಕಡೆ ನಡೆದ ಕಚ್ಚಾ ಬಾಂಬ್ ದಾಳಿಯಲ್ಲಿ ಒಂದು ಮಗು ಸೇರಿ ಮೂವರು ಗಾಯಗೊಂಡ ಘಟನೆ ಪಶ್ಚಿಮ ಬಂಗಾಳದ ಉತ್ತರ 24ನೇ ಪರಗಣ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.
ಜಗತ್ದಲ್ ನ ಗಲಿ ಸಂಖ್ಯೆ 17ರಲ್ಲಿ ಈ ಘಟನೆ ನಡೆದಿದೆ. ಘಟನೆ ನಡೆದ ಪ್ರದೇಶವು ಬಾರಕ್ ಪುರದ ಬಿಜೆಪಿ ಸಂಸದ ಅರ್ಜುನ್ ಸಿಂಗ್ ರ ನಿವಾಸದ ಹತ್ತಿರದಲ್ಲೇ ನಡೆದಿದೆ.
ಇದನ್ನೂ ಓದಿ:14 ವರ್ಷ ಹಿಂದೆ ನಾಪತ್ತೆಯಾಗಿದ್ದ ಸೈನಿಕ ಪತ್ತೆ! ಅಪಘಾತವಾಗಿ ಸ್ಮರಣ ಶಕ್ತಿ ನಾಶ
ಸುಮಾರು 15 ಕಡೆಗಳಲ್ಲಿ ಈ ಕಚ್ಚಾ ಬಾಂಬ್ ಗಳನ್ನು ಎಸೆಯಲಾಗಿದೆ ಎಂದು ವರದಿಗಳು ತಿಳಿಸಿದೆ. ಅಷ್ಟೇ ಅಲ್ಲದೆ ಕೆಲವು ಕಡೆಗಳಲ್ಲಿ ಸಿಸಿಟಿವಿ ಕ್ಯಾಮರಾಗಳಿಗೆ ಹಾನಿ ಮಾಡಲಾಗಿದೆ.
ಜಗತ್ದಲ್ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಆದರೆ ಸ್ಥಳೀಯರ ಪ್ರತಿಭಟನೆ ಎದುರಿಸಬೇಕಾಯಿತು. ಪೊಲೀಸರ ಎದುರೇ ಒಂದು ಬಾಂಬ್ ಎಸೆಯಲಾಗಿದೆ ಎಂದು ವರದಿ ತಿಳಿಸಿದೆ. ಆದರೆ ಇದುವರೆಗೆ ಬಾಂಬ್ ಎಸೆದವರಾರು, ಈ ದಾಳಿಯ ಹಿಂದೆ ಯಾರಿದ್ದಾರೆ ಎನ್ನವ ಬಗ್ಗೆ ಮಾಹಿತಿ ದೊರೆತಿಲ್ಲ.
ಇದನ್ನೂ ಓದಿ: ಮಾಂಗಲ್ಯ ಸರ ಅಡವಿಟ್ಟು ಮೊಟ್ಟೆ ವಿತರಣೆ ! ಅಂಗನವಾಡಿ ಕಾರ್ಯಕರ್ತೆಯ ಕಾಳಜಿ