Advertisement
ಪಕ್ಷದ ಕ್ಯಾನಿಂಗ್ ವೆಸ್ಟ್, ಮಗ್ರಾಹತ್, ಕುಲ್ತಾಲಿ, ಜಾಯ್ ನಗರ್ ಮತ್ತು ಬಿಷ್ಣುಪುರದ ನೂರಾರು ಕಾರ್ಯಕರ್ತರು ವಿಧಾನ ಸಭಾ ಚುನಾವಣೆಗೆ ಆಯ್ಕೆ ಮಾಡಲಾದ ಅಭ್ಯರ್ಥಿಗಳ ಪಟ್ಟಿಯನ್ನು ಖಂಡಿಸಿ ಪ್ರತಿಭಟನೆಯನ್ನು ಮಾಡಿದ್ದಾರೆ. ಕೆಲವೆಡೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿಗೂ ಈ ಘಟನೆ ಸಾಕ್ಷಿಯಾಗಿದೆ.
Related Articles
Advertisement
ತೃಣಮೂಲ ಕಾಂಗ್ರೆಸ್ ನಿಂದ ಬಿಜೆಪಿಗೆ ವಲಸೆ ಬಂದವರಿಗೆ ನೀಡಿದ ನಾಮ ನಿರ್ದೇಶನವನ್ನು ಹಿಂತೆಗೆದುಕೊಳ್ಳದಿದ್ದರೇ, ನಾವು ಸುಮ್ಮನೆ ಕುಳಿತುಕೊಳ್ಳುತ್ತೇವೆ. ಪಕ್ಷಕ್ಕಾಗಿ ಕೆಲಸ ಮಾಡುವುದಿಲ್ಲವೆಂದು ಮಗ್ರಾಹತ್ ನ ಬಿಜೆಪಿ ಪಕ್ಷದ ಕಾರ್ಯಕರ್ತ ರೋನಿ ಮನ್ನಾ ಆಕ್ರೊಶ ಹೊರ ಹಾಕಿದ್ದಾರೆ.
ಓದಿ : ಪಶ್ಚಿಮ ಬಂಗಾಳ: ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಸ್ವಪನ್ ದಾಸ್ ಗುಪ್ತಾ ರಾಜಿನಾಮೆ
ಈ ಸಂದರ್ಭ, ಬಿಜೆಪಿ ಚುನಾವಣಾ ಕಚೇರಿ ಎದುರು ಹಾಕಲಾಗಿದ್ದ ಬ್ಯಾರಿಕೇಡ್ ಗಳನ್ನು ತೆಗೆಯಲು ಪ್ರತಿಭಟನಾಕಾರರು ಮುಂದಾದರು.
ಪಶ್ಚಿಮ ಬಂಗಾಳದಲ್ಲಿ ಮೂರನೇ ಮತ್ತು ನಾಲ್ಕನೇ ಹಂತದ ಚುನಾವಣೆಗೆ ಪಕ್ಷದ 63 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಪ್ರಕಟಿಸಿದ ನಂತರ ಭಾನುವಾರ ಸಂಜೆಯಿಂದ ಬಿಜೆಪಿಯ ಚುನಾವಣಾ ಕಚೇರಿ ಮತ್ತು ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ.
ಪಕ್ಷದ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಖಂಡಿಸಿ ನಡೆಸಿದ ಪ್ರತಿಭಟನೆ ಕೆಲವು ಕಡೆಗಳಲ್ಲಿ ಸ್ವಲ್ಪ ಮಟ್ಟಿಗೆ ಹಿಂಸಾಚಾರಕ್ಕೂ ತಿರುಗಿತು ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಗಳಲ್ಲಿ ವರದಿಯಾಗಿವೆ.
ಬಿಜೆಪಿಗೆ ಹೆಚ್ಚು ಹೆಚ್ಚು ಮಂದಿ ಸೇರ್ಪಡೆಗೊಳ್ಳುತ್ತಿರುವ ಕಾರಣದಿಮದಾಗಿ ಆಕಂಕ್ಷಿಗಳ ಸಂಖ್ಯೆ ಜಾಸ್ತಿಯಾಗಿದೆ. ಈ ಸಮಸ್ಯೆಗಳನ್ನು ಪಕ್ಷ ಬಗೆಹರಿಸಲಿದೆ ಎಂದು ಬಿಜಿಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಯಮತನ್ ಬಸು ಸಮರ್ಥಿಸಿಕೊಂಡಿದ್ದಾರೆ.
ಓದಿ : ರಿಷಬ್-ಪ್ರಮೋದ್ ಸಂದರ್ಶನ: ”ಹೀರೋ” ಸಿನಿಮಾದ ತೆರೆಯ ಹಿಂದಿನ ಕಥೆ