Advertisement
ಜಗದೀಶ್ ಕುಂಬ್ಳೆ ಅವರ ಮಾರ್ಗದರ್ಶನ ದಲ್ಲಿ ಬೆಂಗಾಲ್ ಉತ್ತಮ ನಿರ್ವಹಣೆ ನೀಡುತ್ತಿದೆ. “ಬಿ’ ವಲಯದಲ್ಲಿರುವ ಬೆಂಗಾಲ್ ಆಗಸ್ಟ್ ಮಾಸಾಂತ್ಯಕ್ಕೆ ಅಗ್ರ ಮೂರರೊಳಗಿನ ಸ್ಥಾನವನ್ನು ಉಳಿಸಿಕೊಂಡಿದೆ. “ಎ’ ಮತ್ತು “ಬಿ’ ವಲಯದ ಅಗ್ರ ಮೂರು ತಂಡಗಳು ಸೂಪರ್ ಪ್ಲೇ ಆಫ್ಗೆ ತೇರ್ಗಡೆಯಾಗಲಿವೆ. ಸೂಪರ್ ಪ್ಲೇ ಆಫ್ನಲ್ಲಿ ಆಡಿದ ಎಲ್ಲ ಪಂದ್ಯ ಗೆದ್ದರೆ ಫೈನಲಿ ಗೇರುವ ಸಾಧ್ಯತೆಯಿದೆ. ಹಾಗಾಗಿ ಸೂಪರ್ ಪ್ಲೇ ಆಫ್ಗೆ ತೇರ್ಗಡೆಯಾಗಿ ಪ್ರಶಸ್ತಿ ಗೆಲ್ಲುವ ಗುರಿಯನ್ನು ಬೆಂಗಾಲ್ ಇಟ್ಟುಕೊಂಡಿದೆ.
ಕೋಲ್ಕತಾ ಚರಣ ಆರಂಭಗೊಂಡಿದ್ದು ಆಡಿದ 9 ಪಂದ್ಯಗಳಲ್ಲಿ ಐದರಲ್ಲಿ ಗೆದ್ದು 32 ಅಂಕ ಹೊಂದಿರುವ ಬೆಂಗಾಲ್ “ಬಿ’ ವಲಯದಲ್ಲಿ ಅಗ್ರಸ್ಥಾನಕ್ಕೇರಿದೆ. ಬೆಂಗಾಲ್‌ಗಿದು ತವರಿನ ತಾಣವಾಗಿದೆ. ಇಲ್ಲಿ ಬೆಂಗಾಲ್ ಆರು ಪಂದ್ಯ ಗಳನ್ನು ಆಡಲಿದ್ದು ಗರಿಷ್ಠ ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಅಂಕವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಬೇಕಾಗಿದೆ. “ಬಿ ವಲಯದಲ್ಲಿ ಯುಪಿ ಯೋಧಾ (30 ಅಂಕ) ದ್ವಿತೀಯ ಮತ್ತು ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ (28 ಅಂಕ) ಮೂರನೇ ಸ್ಥಾನದಲ್ಲಿದೆ. ಬೆಂಗಾಲ್ ಶನಿವಾರದ ಪಂದ್ಯದಲ್ಲಿ ಯುಪಿ ಯೋಧಾ ತಂಡವನ್ನು ಎದುರಿಸಲಿದೆ. ಪ್ರೊ ಕಬಡ್ಡಿಯ ಕೋಚ್ ಆಗಿ ಜಗದೀಶ್ ಕುಂಬ್ಳೆ ಅವರಿಗಿದು ಹೊಸ ಅನುಭವ. ಸರ್ವೀಸಸ್ ವೇಳೆ ಆಡಿದ ಅನುಭವ ಮತ್ತು ಕೋಚ್ ಆಗಿ ನಾನು ಕಲಿತ ವಿದ್ಯೆಯನ್ನು ತಂಡದ ಯುವ ಆಟಗಾರರಿಗೆ ಸಮರ್ಪಿಸುವೆ ಎಂದು ಕುಂಬ್ಳೆ ತಿಳಿಸಿದರು. ಅವರು ಸರ್ವೀಸಸ್ ಪರ ಎರಡು ದಶಕಗಳ ಕಾಲ ಆಡಿದ ಅನುಭವ ಹೊಂದಿದ್ದಾರೆ.