Advertisement

ಲಾಕ್ ಡೌನ್ :ಮಾಸ್ಕ್ ಧರಿಸಿ ಸರಳ ವಿವಾಹ, ಮದುವೆ ಖರ್ಚಿನ ಹಣ ದೇಣಿಗೆ ಕೊಟ್ಟ ಯುವ ಜೋಡಿ

09:23 AM Apr 18, 2020 | Nagendra Trasi |

ಖರಗ್ ಪುರ್(ಪಶ್ಚಿಮಬಂಗಾಳ): ಕರ್ನಾಟಕದಲ್ಲಿ ಕೋವಿಡ್ 19 ವೈರಸ್ ಭೀತಿ, ಲಾಕ್ ಡೌನ್ ನಡುವೆಯೂ ಮಾಜಿ ಮುಖ್ಯಮಂತ್ರಿಯೊಬ್ಬರ ಪುತ್ರನ ಮದುವೆಗೆ ನೂರಾರು ಜನರು, 40ಕ್ಕೂ ಅಧಿಕ ಕಾರಿನಲ್ಲಿ ಕುಟುಂಬಸ್ಥರು ಆಗಮಿಸಿದ್ದರು. ಏತನ್ಮಧ್ಯೆ ಪಶ್ಚಿಮಬಂಗಾಳದಲ್ಲಿ ಯುವ ಜೋಡಿಯೊಂದು ಮಾಸ್ಕ್ ಧರಿಸಿ ಹಸೆಮಣೆಗೆ ಏರಿದ್ದು, ಸರಳ ವಿವಾಹ ಕಾರ್ಯಕ್ರಮಕ್ಕೆ ಬೆರಳೆಣಿಕೆಯಷ್ಟು ಅತಿಥಿಗಳು ಭಾಗವಹಿಸಿದ್ದರು ಎಂದು ವರದಿ ತಿಳಿಸಿದೆ.

Advertisement

ಸ್ವಾತಿನಾಥ್ ಅವರು ಸೌರವ್ ಕರ್ಮಾಕರ್ ಅವರ ಜತೆ ವಿವಾಹವಾಗಿದ್ದಾರೆ. ಈ ಸರಳ ವಿವಾಹ ಸಮಾರಂಭದಲ್ಲಿ 15 ಮಂದಿ ಕುಟುಂಬದ ಸದಸ್ಯರು ಮಾಸ್ಕ್ ಧರಿಸಿ ಹಾಜರಾಗಿದ್ದರು. ಅಲ್ಲದೇ 31 ಸಾವಿರ ರೂಪಾಯಿ ಹಣವನ್ನು ಯುವ ಜೋಡಿ ಬಡವರ ಊಟಕ್ಕಾಗಿ ದೇಣಿಗೆ ನೀಡಿದ್ದಾರೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ಥಳೀಯ ಕ್ಲಬ್ ವೊಂದು ಸಮಸ್ಯೆಗೊಳಗಾದವರಿಗೆ ಊಟದ ವ್ಯವಸ್ಥೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಬಡವರಿಗೆ ಊಟ ನೀಡಲು ಹಣವನ್ನು ಬಳಸಿಕೊಳ್ಳುವಂತೆ ಕರ್ಮಾಕರ್ ತಿಳಿಸಿದ್ದಾರೆ. ಮದುವೆಗೆ ಆಗಮಿಸುವ ಅತಿಥಿಗಳಿಗೆ ಮಾಸ್ಕ್ ಧರಿಸುವಂತೆ ಸೂಚಿಸಲಾಗಿತ್ತು. ಪುರೋಹಿತರು ಕೂಡಾ ಮಾಸ್ಕ ಧರಿಸಿದ್ದರು.

ನನ್ನ ಮದುವೆ ಸಾಮಾನ್ಯ ರೀತಿಯಲ್ಲಿ ನೆರವೇರಿಸುವ ನಿಟ್ಟಿನಲ್ಲಿ ಹಣ ಖರ್ಚು ಮಾಡಲು ಮೊದಲೇ ನಿರ್ಧರಿಸಿದ್ದೆ. ಹೀಗಾಗಿ ನನ್ನ ಮದುವೆ ಹಣವನ್ನು ನಾನು ಬಡವರಿಗಾಗಿ ಯಾಕೆ ಕೊಡಬಾರದು ಎಂದು ಯೋಚಿಸಿದೆ. ಈ ಬಗ್ಗೆ ಪೋಷಕರಲ್ಲಿಯೂ ಕೇಳಿದಾಗ ಸಮ್ಮತಿ ಸೂಚಿಸಿದ್ದರು. ಹೀಗಾಗಿ ನನ್ನ ಮದುವೆ ನೆಪದಲ್ಲಾದರೂ ಅಶಕ್ತರಿಗೆ ನೆರವು ನೀಡಿದ ಖುಷಿ ನನಗೆ ಇದೆ ಎಂದು ಸೌರವ್ ಪ್ರತಿಕ್ರಿಯೆ ನೀಡಿದ್ದಾರೆ.

ಮಾರ್ಚ್ 13ರಂದು ಸೌರವ್ ಮದುವೆ ನಿಶ್ಚಯವಾಗಿತ್ತು. ಆದರೆ ಸೌರವ್ ತಾಯಿ ಅನಾರೋಗ್ಯಕ್ಕೆ ಒಳಗಾದ ಹಿನ್ನೆಲೆಯಲ್ಲಿ ಮದುವೆ ರದ್ದುಪಡಿಸಲಾಗಿತ್ತು. ಸ್ವಾತಿ ಕೂಡಾ ತನ್ನ ಚಿಕ್ಕಮ್ಮನ ಮನೆಯಲ್ಲಿ ಉಳಿದುಕೊಂಡಿದ್ದರು. ಅದಕ್ಕೆ ಕಾರಣ ತನ್ನ ಭಾವಿ ಅತ್ತೆಯನ್ನು ನೋಡಿಕೊಳ್ಳುವ ನಿಟ್ಟಿನಲ್ಲಿ. ಇದೀಗ ಹಿರಿಯರ ಆಶೀರ್ವಾದೊಂದಿಗೆ ಗುರುವಾರ ರಾತ್ರಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next