Advertisement

ಪಶ್ಚಿಮ ಬಂಗಾಳವನ್ನು ವಿಭಜಿಸಲು ಕೇಂದ್ರ ಸಂಚು ರೂಪಿಸಿದೆ : ದೀದಿ ಆರೋಪ

09:01 PM Jun 23, 2021 | Team Udayavani |

ಕೋಲ್ಕತ್ತಾ : ಕೇಂದ್ರ ಸರ್ಕಾರದ ವಿರುದ್ಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೆ ವಾಗ್ದಾಳಿ ಮಾಡಿದ್ದಾರೆ.

Advertisement

ಕೇಂದ್ರ ಸರ್ಕಾರದ ಕೋವಿಡ್ ಸೋಂಕಿನ ಎರಡನೇ  ಅಲೆಯ ನಿರ್ವಹಣೆಯನ್ನು ಟೀಕಿಸುತ್ತಾ, ಕೋಲ್ಕತ್ತಾದಲ್ಲಿ ಸುದ್ದಿಗೋಷ್ಟೀಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಶ್ಚಿಮ ಬಂಗಾಳದ ಜಂಗ್ಲೆಮಹಲ್ ಪ್ರದೇಶದಿಂದ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನು ರಚಿಸಬೇಕೆಂದು ಅಲಿಪುರ್ದಾರ್‌ನ ಬಿಜೆಪಿ ಸಂಸದ ಜಾನ್ ಬಾರ್ಲಾ ಒತ್ತಾಯಿಸಿದ್ದನ್ನು ಉಲ್ಲೇಖಿಸಿ, ಪಶ್ಚಿಮ ಬಂಗಾಳ ರಾಜ್ಯವನ್ನು ವಿಭಜಿಸಲು ಕೇಂದ್ರ ಸರ್ಕಾರ ಸಂಚು ರೂಪಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ : ಗಂಗಾವತಿ : ಪಡಿತರ ಅಕ್ಕಿ ಅಕ್ರಮ ಸಾಗಾಟ : ಆಹಾರ ಇಲಾಖೆ- ಪೊಲೀಸರ ದಾಳಿ

ಇನ್ನು,  ರಾಜ್ಯದ ಮಾಜಿ ಮುಖ್ಯ ಕಾರ್ಯದರ್ಶಿ ಅಲಾಪನ್ ಬಂಡ್ಯೋಪಾಧ್ಯಾಯರಿಗೆ ಬರೆದ ಪತ್ರದ ಬಗ್ಗೆ ಕೇಳಿದಾಗ, “ಅವರು ಇದರ ವಿರುದ್ಧ ಹೋರಾಡಲು ಸಮರ್ಥ ವ್ಯಕ್ತಿ. ನಮ್ಮ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ” ಎಂದು ಹೇಳಿದ್ದಾರೆ.

ಅಲಾಪನ್ ಬಂಡ್ಯೋಪಾಧ್ಯಾಯ ಅವರನ್ನು ಕೇಂದ್ರ ಸರ್ಕಾರ ಬಲಿ ಪಶು ಮಾಡಿದೆ. ಒಂದು ತಿಂಗಳಲ್ಲಿ ತನ್ನ ಸಹೋದರ ಮತ್ತು ತಾಯಿಯನ್ನು ಕಳೆದುಕೊಂಡ ವ್ಯಕ್ತಿಯನ್ನು ಕೇಂದ್ರ ಬಲಿಪಶು ಮಾಡುತ್ತಿದ್ದಾರೆ ಎಂದು ಕೇಂದ್ರವು ತಿಳಿದಿರಬೇಕು … ತನ್ನ ಇಡೀ ಜೀವನವನ್ನು ದೇಶಕ್ಕಾಗಿ ಕೆಲಸ ಮಾಡಿದರೂ ಮಾನಸಿಕ ಸಂಕಟದಲ್ಲಿದ್ದಾರೆ.

Advertisement

ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಿತ್ತು, ಶೇಕಡಾ 33 ರಷ್ಟಿದ್ಧ ಪಾಸಿಟಿವಿಟಿ ರೇಟ್ ಈಗ ಶೇಕಡಾ 3ಕ್ಕೆ ಬಂದು ತಲುಪಿದೆ. ಉತ್ತರ ಪ್ರದೇಶದಲ್ಲಿ ಕೋವಿಡ್ ಸೋಂಕಿನ ಸಾವಿನ ಪ್ರಮಾಣ ಹೆಚ್ಚಿದೆ. ನದಿಗಳ ಮೂಲಕ ನೂರಾರು ಕೋವಿಡ್ ಮೃತ ದೇಹಗಳು ತೇಲಿ ಬರುತ್ತಿವೆ. ಬಿಹಾರದ ಮೂಲಕ ಬಂಗಾಳಕ್ಕೆ ಬರುತ್ತವೆ. ಈ ವ್ಯವಸ್ಥೆಯ ಬಗ್ಗೆ ನಿಮಗೆ ನಾಚಿಕೆಯಾಗುವುದಿಲ್ಲವೇ..? ಎಂದು ದೀದಿ ಕಟುವಾಗಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ಅಲೋಪತಿ ವಿರುದ್ಧ ಹೇಳಿಕೆ: ಎಫ್ ಐಆರ್ ವಿಚಾರಣೆಗೆ ತಡೆ ನೀಡಿ- ಬಾಬಾ ಸುಪ್ರೀಂಗೆ ಮೊರೆ

Advertisement

Udayavani is now on Telegram. Click here to join our channel and stay updated with the latest news.

Next