ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಈ ಬಾರಿ 287 ಶಾಲೆಗಳಿಗೆ 2,550 ಪೀಠೊಪಕರಣ ಒದಗಿಸಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಯೋಜನೆಯ ವತಿಯಿಂದ 2020-21ನೇ ಸಾಲಿನಲ್ಲಿ ಕೊಪ್ಪಳ ಪ್ರಾದೇಶಿಕ ವ್ಯಾಪ್ತಿಯ ಜಿಲ್ಲೆಗಳ ಶಾಲೆಗಳಿಗೆ ಪೀಠೊಪಕರಣ ಹಸ್ತಾಂತರಿ ಸುವ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿದರು.
ಬಾಗಲಕೋಟೆ, ರಾಯಚೂರು, ಕೊಪ್ಪಳ, ಗದಗ, ಬಳ್ಳಾರಿ, ಹೊಸಪೇಟೆ ಜಿಲ್ಲೆಗಳ 287 ಶಾಲೆಗಳಿಗೆ 2,550 ಬೆಂಚ್, ಡೆಸ್ಕ್ಗಳನ್ನು ವಿತರಿಸಲಾಗುತ್ತಿ¤ದೆ. 1,78,50,000 ರೂ. ವಿನಿಯೋಗಿ ಸಿದ್ದು 10,200 ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ. ಶೇ. 80ರಷ್ಟು ಮೊತ್ತವನ್ನು ಕ್ಷೇತ್ರ, ಉಳಿದದ್ದನ್ನು ಶಾಲಾಭಿವೃದ್ಧಿ ಸಮಿತಿ ಭರಿಸುತ್ತದೆ ಎಂದರು.
ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷೆ ಹೇಮಾವತಿ ವೀ. ಹೆಗ್ಗಡೆ, ಗ್ರಾಮಾಭಿವೃದ್ಧಿ ಯೋಜನೆಯ ಸಿಇಒ ಅನಿಲ್ ಕುಮಾರ್, ಧರ್ಮೋತ್ಥಾನ ಟ್ರಸ್ಟ್ ಕಾರ್ಯದರ್ಶಿ ಎ. ವೀರು ಶೆಟ್ಟಿ, ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ದನ, ಸಮುದಾಯ ಅಭಿವೃದ್ಧಿ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ಯೋಜನಾಧಿಕಾರಿ ಪುಷ್ಪರಾಜ್, ಸಮುದಾಯ ಅಭಿವೃದ್ಧಿ ವಿಭಾಗ ಪ್ರಬಂಧಕರಾದ ವಿಜ್ಞೆಶ್ ಕಾಮತ್, ಜಗದೀಶ್ ಪೂಜಾರಿ, ಮೇಲ್ವಿಚಾರಕ ಮಹಾಬಲ, ಉದ್ಯಮಿ ಮೋಹನ್ ಕುಮಾರ್ ಉಪಸ್ಥಿತರಿದ್ದರು.
9,213 ಶಾಲೆಗಳಿಗೆ ವಿತರಣೆ
10 ವರ್ಷಗಳಲ್ಲಿ 29 ಜಿಲ್ಲೆಗಳ 9,213 ಶಾಲೆಗಳಿಗೆ 58,915 ಜತೆ ಡೆಸ್ಕ್, ಬೆಂಚ್‌ಗಳನ್ನು ವಿತರಿಸಲಾಗಿದೆ. ಸುಮಾರು 15,923,26,000 ರೂ. ವಿನಿಯೋಗಿಸಿದ್ದು 2,35,660 ವಿದ್ಯಾರ್ಥಿಗಳಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ.