Advertisement

ಪಾಕಿಸ್ಥಾನ ಸರಣಿಯಿಂದ ದೂರ ಸರಿದ ಬೆನ್‌ ಸ್ಟೋಕ್ಸ್‌

08:05 PM Aug 10, 2020 | mahesh |

ಲಂಡನ್: ಇಂಗ್ಲೆಂಡ್‌ ತಂಡದ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಪಾಕಿಸ್ಥಾನ ವಿರುದ್ಧದ ಇನ್ನುಳಿದ ಅವಧಿಯ ಸರಣಿಗೆ ಲಭ್ಯರಾಗುವುದಿಲ್ಲ. ಕೌಟುಂಬಿಕ ಕಾರಣಗಳಿಂದ ಅವರು ದೂರ ಉಳಿಯಲು ನಿರ್ಧರಿಸಿದ್ದಾರೆ ಎಂದು ಇಸಿಬಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

Advertisement

ಅನಾರೋಗ್ಯಕ್ಕೊಳಗಾಗಿರುವ ತಂದೆಯನ್ನು ಕಾಣಲು ಬೆನ್‌ ಸ್ಟೋಕ್ಸ್‌‌ ನ್ಯೂಜಿಲ್ಯಾಂಡಿಗೆ ತೆರಳಲಿದ್ದಾರೆ. ಹೀಗಾಗಿ ಅವರು ಪಾಕ್‌ ಎದುರಿನ ಉಳಿದೆರಡು ಟೆಸ್ಟ್‌ಗಳಲ್ಲಿ ಆಡುವುದಿಲ್ಲ. ಆದರೆ ಅನಾರೋಗ್ಯದ ಕರಣ ತಂದೆ ಆಸ್ಪತ್ರೆಯಲ್ಲಿ ಇರುವುದರಿಂದ ಬೆನ್‌ ಸ್ಟೋಕ್ಸ್‌ ಸರಣಿಯಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next