Advertisement

ಸಚಿನ್‌ ತೆಂಡುಲ್ಕರ್‌ ಅಲ್ಲ, ಸ್ಟೋಕ್ಸ್‌ ಸಾರ್ವಕಾಲಿಕ ಶ್ರೇಷ್ಠ!

11:09 PM Aug 28, 2019 | Sriram |

ಲಂಡನ್‌: ಕ್ರಿಕೆಟ್‌ ದೇವರು ಎಂದೇ ಕರೆಸಿಕೊಂಡಿರುವ ಸಚಿನ್‌ ತೆಂಡುಲ್ಕರ್‌ ಅವರನ್ನು ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ ಎಂದು ಹೊಗಳುವುದು ಹಳೆಯ ಸಂಗತಿ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಯ ಟ್ವಿಟರ್‌ ಖಾತೆಯ ಪ್ರಕಾರ, ಇಂಗ್ಲೆಂಡ್‌ನ‌ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಅವರೇ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ!

Advertisement

ಇದು ಸಚಿನ್‌ ತೆಂಡುಲ್ಕರ್‌ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ. ಐಸಿಸಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳಲಾಗಿದೆ. ಮೊನ್ನೆಯಷ್ಟೇ ಮುಗಿದ 3ನೇ ಆ್ಯಶಸ್‌ ಟೆಸ್ಟ್‌ನಲ್ಲಿ ಸ್ಟೋಕ್ಸ್‌ ಅದ್ಭುತ ಶತಕ ಬಾರಿಸಿ ಇಂಗ್ಲೆಂಡನ್ನು ಗೆಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಐಸಿಸಿ, ಈ ಹಿಂದೆ ತಾನೇ ಮಾಡಿದ ಟ್ವೀಟನ್ನು ರೀಟ್ವೀಟ್‌ ಮಾಡಿದೆ. ಅದರಲ್ಲಿ ಸಚಿನ್‌ ತೆಂಡುಲ್ಕರ್‌, ಸ್ಟೋಕ್ಸ್‌ ಜತೆಗೆ ಮಾತನಾಡುತ್ತಿರುವ ಚಿತ್ರವಿದೆ. ಅದಕ್ಕೆ ಐಸಿಸಿ, “ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ ಮತ್ತು ಸಚಿನ್‌ ತೆಂಡುಲ್ಕರ್‌’ ಎಂಬ ತಲೆಬರಹ ನೀಡಿದೆ.

ಇತ್ತೀಚೆಗೆ ಮುಗಿದ ಏಕದಿನ ವಿಶ್ವಕಪ್‌ ಫೈನಲ್‌ ಅನಂತರ ಮಾಡಿದ್ದ ಟ್ವೀಟನ್ನೇ ಮತ್ತೆ ಪೋಸ್ಟ್‌ ಮಾಡಲಾಗಿದೆ. ಗಲಾಟೆಗೆ ಕಾರಣವಾಗಿರುವುದು ಇದೇ!

ಸಚಿನ್‌ ತೆಂಡುಲ್ಕರ್‌ ದಾಖ ಲೆಯೇನು, ಸ್ಟೋಕ್ಸ್‌ ದಾಖಲೆಯೇನು ಎಂದು ಅಭಿಮಾನಿಗಳು ಖಾರವಾಗಿ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next