Advertisement

ಬೆಳ್ವೆ: ಅಂಗನವಾಡಿ ಕೇಂದ್ರಗಳ ಕುಂದು ಕೊರತೆಗಳ ಸಭೆ

04:00 AM Jul 17, 2017 | Harsha Rao |

ಸಿದ್ದಾಪುರ: ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗೆ ಆದ‌Âತೆ ನೀಡುವ ನಿಟ್ಟಿನಲ್ಲಿ ಕುಂದಾಪುರ ತಾ. ಪಂ. ವತಿಯಿಂದ ವಿನೂತನ ಪ್ರಯೋಗವಾಗಿ ಆಯಾಯ ಕ್ಲಸ್ಟರ್‌ ಮಟ್ಟದಲ್ಲಿ ಅಂಗನವಾಡಿ ಕೇಂದ್ರಗಳ ಕುಂದು ಕೊರತೆಗಳು ಹಾಗೂ ಅಭಿವೃದ್ಧಿಯ ಕುರಿತು ಸಭೆ ನಡೆಸಿ, ಪುಸ್ತಕ ರೂಪದಲ್ಲಿ ಬೇಡಿಕೆಗಳ ಪಟ್ಟಿ ತಯಾರಿಸಿ ಸರಕಾರ‌ಕ್ಕೆ ವರದಿ ನೀಡಲಾಗುವುದು ಎಂದು ಕುಂದಾಪುರ ತಾ.ಪಂ. ಅಧ್ಯಕ್ಷೆ ಜಯಶ್ರೀ ಎಸ್‌. ಮೊಗವೀರ ಅವರು ಹೇಳಿದರು.
ಅವರು ಬೆಳ್ವೆ ಗ್ರಾ. ಪಂ. ಸಭಾಭವನದಲ್ಲಿ ನಡೆದ ಅಂಗನವಾಡಿ ಕಾರ್ಯಕರ್ತೆಯರಿಗೆ ಅಂಗನವಾಡಿಗಳಲ್ಲಿ ಸೌಲಭ್ಯಗಳ ಕುಂದು ಕೊರತೆ ಹಾಗೂ ಅಭಿವೃದ್ಧಿ ಕುರಿತು ನಡೆದ ಸಭೆಯಲ್ಲಿ ಮಾತನಾಡಿದರು.

Advertisement

ಮಕ್ಕಳಿಗೆ ಬಾಲ್ಯದಲ್ಲಿ ಶಿಕ್ಷಣವನ್ನು ನೀಡುವ ಅಂಗನವಾಡಿ ಕೇಂದ್ರಗಳು ಮೂಲ ಸೌಲಭ್ಯಗಳನ್ನು ಹೊಂದಿರಬೇಕು. ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಜವಾಬ್ದಾರಿಯುತ ಕರ್ತವ್ಯ ಪಾಲಿಸಬೇಕು. ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗೆ ಅನುದಾನಗಳನ್ನು ಒದಗಿಸುವಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಕುಂದಾಪುರ ತಾ.ಪಂ. ಉಪಾಧ್ಯಕ್ಷ ಪ್ರವೀಣ ಕುಮಾರ್‌ ಶೆಟ್ಟಿ, ಬೆಳ್ವೆ ಕ್ಷೇತ್ರ ತಾ.ಪಂ. ಸದಸ್ಯ ಎಸ್‌. ಚಂದ್ರಶೇಖರ್‌ ಶೆಟ್ಟಿ ಸೂರೊYàಳಿ, ಅಮಾಸೆಬೈಲು ಕ್ಷೇತ್ರ ತಾ.ಪಂ. ಸದಸ್ಯೆ ಜ್ಯೋತಿ ಪೂಜಾರಿ, ಬೆಳ್ವೆ ಗ್ರಾ.ಪಂ. ಅಧ್ಯಕ್ಷೆ ಶೋಭಾ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ಪ್ರಭಾ ಶಂಕರ ಪುರಾಣಿಕ್‌, ಮಡಾಮಕ್ಕಿ ಗ್ರಾ.ಪಂ. ಅಧ್ಯಕ್ಷ ರಾಜೀವ ಕುಲಾಲ, ಅಭಿವೃದ್ಧಿ ಅಧಿಕಾರಿ ಎಲ್‌. ನರಸಿಂಹ ಮೂರ್ತಿ, ಹೆಂಗವಳ್ಳಿ ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ, ಅಭಿವೃದ್ಧಿ ಅಧಿಕಾರಿ ಅಶೋಕ ಕುಮಾರ್‌ ಶೆಟ್ಟಿ, ಶಿಶು ಅಭಿವೃದ್ಧಿ ಇಲಾಖೆಯ ಪ್ರಭಾರ ಅಧಿಕಾರಿ ಶಶಿಕಲಾ  ಮೊದಲಾದವರು ಉಪಸ್ಥಿತರಿದ್ದರು.

ಬೆಳ್ವೆ ಗ್ರಾ.ಪಂ. ವ್ಯಾಪ್ತಿಯ 9, ಮಡಾಮಕ್ಕಿ ಗ್ರಾ.ಪಂ. ವ್ಯಾಪ್ತಿಯ 6, ಹೆಂಗವಳ್ಳಿ ಗ್ರಾ.ಪಂ. ವ್ಯಾಪ್ತಿಯ 4, ಹಾಲಾಡಿ ಗ್ರಾ.ಪಂ. ವ್ಯಾಪ್ತಿಯ ಮುಡುವಳ್ಳಿ, ಗರಡಿಗುಡ್ಡೆ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು ಭಾಗವಹಿಸಿದರು. ಅಂಗನವಾಡಿಗಳಲ್ಲಿ ಸೌಲಭ್ಯಗಳ ಕುಂದು ಕೊರತೆ ಹಾಗೂ ಅಭಿವೃದ್ಧಿಯ ಕುರಿತು ಮಾಹಿತಿ ನೀಡಿದರು.
ಬೆಳ್ವೆ ವಲಯ ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕಿ ಸುಜಯಾ ಸ್ವಾಗತಿಸಿದರು. ಗೋಳಿಯಂಗಡಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಗುಲಾಬಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next