Advertisement
ಪುರಸಭಾ ಹೊಯ್ಸಳ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಬಜೆಟ್ ಮಂಡಿಸಿ ಮಾತನಾಡಿದ ಅವರು, ಸರ್ಕಾರದ ನಿಧಿಗಳು ಸೇರಿದಂತೆ ವಿವಿಧ ಮೂಲಗಳಿಂದ 22. 34ಕೋಟಿ ರೂ. ಆದಾಯ ನಿರೀಕ್ಷೆ ಮಾಡಿದ್ದು ಪಟ್ಟಣದ 23 ವಾರ್ಡ್‌ಗಳ ಅಭಿವೃದ್ಧಿ ಕಾಮಗಾರಿಗಳಾಗಿ 22. 29ಕೋಟಿ ರೂ. ಲಕ್ಷ ವೆಚ್ಚ ಮಾಡಲಾಗುತ್ತದೆ. 5.7ಲಕ್ಷ ರೂ.ಗಳ ಉಳಿತಾಯ ನಿರೀಕ್ಷಿಸಲಾಗಿದೆ ಎಂದರು.
ಫಲಕದಿಂದ 75ಸಾವಿರ ರೂ., ನಿವೇಶನ ಖರೀದಿಗೆ 60ಲಕ್ಷ ರೂ., ಇತರೆ ಅನುದಾನಗಳು ಸೇರಿಂದತೆ 22.29 ಕೋಟಿ ರೂ. ಆದಾಯ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದರು. ಅಭಿವೃದ್ಧಿಗೆ ಹಣ ಮೀಸಲು: ಪಟ್ಟಣದ ಅಭಿವೃದ್ಧಿಗಾಗಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕಾಗಿ 3. 40 ಕೋಟಿ ರೂ., ಕಚೇರಿ ಗಣಕ ಯಂತ್ರ ಉಪಕರಣಗಳ ಖರೀದಿಗಾಗಿ 10 ಲಕ್ಷ ರೂ., ಹೈಮಾಸ್ಟ್ ಸೋಲಾರ್ ಬೀದಿ ದೀಪ ಖರೀದಿಗೆ 25 ಲಕ್ಷ ರೂ., ಹೊಸ ವಿದ್ಯುತ್ ಕಂಬಗಳಿಗೆ 15ಲಕ್ಷ ರೂ., ಶೌಚಾಲಯ ನಿರ್ಮಾಣಕ್ಕೆ 2.5ಲಕ್ಷ ರೂ.,
ಕಟ್ಟಡ ದುರಸ್ತಿಗೆ 10ಲಕ್ಷ ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ 1.25ಲಕ್ಷ ರೂ., ಅಲ್ಲದೇ ಸ್ವಾಗತ ಕಮಾನು ಮಾರ್ಗ ಸೂಚಿ ಫಲಕ, ಪಾದಚಾರಿ ರಸ್ತೆ, ಹೊರ ಗುತ್ತಿಗೆ ನಿರ್ವಾಹಣೆ ವೆಚ್ಚ ವಾಹನ ದುರಸ್ತಿ ಕೋಳವೆ ಬಾವಿ, ನೀರಿನ ವ್ಯವಸ್ಥೆ ಸ್ಮಾಶಾನ ಅಭಿವೃದ್ಧಿ ಒಳಚರಂಡಿ, ಕಸಾಯಿ ಖಾನೆ, ಇನ್ನಿತರೆ ಅಭಿವೃದ್ಧಿ ಕಾರ್ಯಗಳಿಗೆ 22.29 ಕೋಟಿ ರೂ. ವೆಚ್ಚ ಮಾಡಲಾಗುವುದು ಎಂದು ತಿಳಿಸಿದರು. ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಸದಸ್ಯ ಶಾಂತಕುಮಾರ್ ಸದಸ್ಯರ ಸಲಹೆ ಪಡೆಯದೇ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಸದಸ್ಯ ಎಂ.ಆರ್.ವೆಂಕಟೇಶ್ ಮಾತನಾಡಿ, ಯೋಜನೆಗಳಿಗೆ ಬಜೆಟ್‌ನಲ್ಲಿ ಹಣ ಮೀಸಲಿಟ್ಟೆದರೆ ಸಾಲದು ಪ್ರತಿವಾರ್ಡ್‌ಗಳಿಗೂ ಅಧಿಕಾರಿಗಳು ಭೇಟಿ ನೀಡಿ ಪುರಸಭೆಯ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸಬೇಕು ಎಂದರು. ಸಭೆಯಲ್ಲಿ ಉಪಾಧ್ಯಕ್ಷ ಅರುಣಕುಮಾರ್, ಮುಖ್ಯಾಧಿಕಾರಿ ಮಂಜುನಾಥ್ ಇತರರು ಇದ್ದರು.