Advertisement

Belthangady ಭಾರತೀಯ ಸಂಸ್ಕೃತಿಯಿಂದ ಸಂಸ್ಕಾರ ಜಾಗೃತಿ: ನಳಿನ್‌

12:09 AM Nov 20, 2023 | Team Udayavani |

ಬೆಳ್ತಂಗಡಿ: ಭಾರತೀಯ ಆತ್ಮ ಹಿಂದುತ್ವ. ಆ ಹಿಂದುತ್ವ ನಂಬಿಕೆ ಮತ್ತು ಭಾವನೆಗಳ ಮೇಲೆ ನಿಂತಿರುವ ಸಮಾಜವಾಗಿದೆ. ಹಿಂದೂ ಧರ್ಮದ ನಂಬಿಕೆಗಳು ಸಂಸ್ಕಾರ ಮತ್ತು ಸಂಸ್ಕೃತಿಗಳನ್ನು ತೋರಿಸುತ್ತದೆ. ಹಾಗಾಗಿ ಭಾರತದಲ್ಲಿ ಭೂಮಿ ಮತ್ತು ಸ್ತ್ರೀ ಪರಮಶ್ರೇಷ್ಠವಾಗಿದೆ ಎಂದು ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಂಕರಪುರ ಏಕಜಾತಿ ಧರ್ಮ ಪೀಠ, ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್‌ ಗುರೂಜಿಯವರ ಸಂಕಲ್ಪದಂತೆ ನ. 19ರಂದು ಮೂಗುತಿ ಧಾರಣೆ ಆಗದ ತಾಲೂಕಿನ 9ರಿಂದ 19 ವರ್ಷದ 300 ಹೆಣ್ಣು ಮಕ್ಕಳಿಗೆ ಉಚಿತ ಚಿನ್ನದ ಮೂಗುತಿ ಧಾರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಭಾರತೀಯ ಸಂಸ್ಕೃತಿಯಲ್ಲಿ ತಿಲಕ, ಮೂಗುತಿ, ಕೈಗೆ ಬಳೆ, ಹೂ ಮುಡಿಯುವಂತಹದು ಸಂಸ್ಕಾರದ ಭಾಗವಾಗಿ ಜೋಡಿಸುತ್ತ ಹೋಗಿದ್ದೇವೆ. ಒಂದು ದೇವಸ್ಥಾನದಲ್ಲಿ ಮೂಗುತಿ ಧಾರಣೆಯಂತ ಅದ್ಭುತ ಚಿಂತನೆ ರಾಜ್ಯದಲ್ಲೇ ಮೊದಲ ಕಾರ್ಯಕ್ರಮ ವೇಣೂರಿನಲ್ಲಿ ಮೂಡಿಬಂದಿದೆ. ಈ ಮೂಲಕ ಹಿಂದೂ ಸಮಾಜದ ಭಾವನೆಗಳ ಜಾಗೃತಿ ಮಾಡುವ ಕಾರ್ಯ ಇಲ್ಲಿ ಮಾಡಲಾಗಿದೆ. ಮುಂದೆ ಜಿಲ್ಲೆಯ ಎಲ್ಲ ದೇವಸ್ಥಾನಗಳಲ್ಲಿ ಸಂಸ್ಕಾರ ಮತ್ತೆ ಮರುಕಳಿಸುವ ಕಾರ್ಯವಾಗಬೇಕಿದೆ ಎಂದು ಹೇಳಿದರು.

ತಾಲೂಕಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ 300 ಹೆಣ್ಣು ಮಕ್ಕಳಿಗೆ ಉಚಿತ ಚಿನ್ನದ ಮೂಗುತಿ ಧಾರಣೆ ನಡೆಯಿತು. ತಾಲೂಕಿನ ವಿವಿಧ ಕಡೆಯಿಂದ 9 ರಿಂದ 19 ವರ್ಷದೊಳಗಿನ ಹೆಣ್ಣು ಮಕ್ಕಳು ಆಗಮಿಸಿ ಮೂಗುತಿ ಧಾರಣೆಗೆ ಸಹಕರಿಸಿದರು.

ಶಂಕರಪುರ ಏಕಜಾತಿ ಧರ್ಮ ಪೀಠ, ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್‌ ಗುರೂಜಿ ಆಶೀರ್ವಚನ ನೀಡಿದರು.

Advertisement

ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್‌ ಕೋಟ್ಯಾನ್‌, ಶ್ರೀ ಮಹಾಲಿಂಗೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ.ಎನ್‌. ಪುರುಷೋತ್ತಮ ರಾವ್‌, ಮರೋಡಿ ಶ್ರೀ ಉಮಾಮಹೇಶ್ವರ ದೇಗುಲದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ, ವೇಣೂರು ಗ್ರಾ.ಪಂ. ಅಧ್ಯಕ್ಷ ನೇಮಯ್ಯ ಕುಲಾಲ್‌, ವೇಣೂರು ಪ್ರಾ. ಕ. ಪ. ಸ. ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿಇ, ಮೀನಾಕ್ಷಿ, ವೇಣೂರು ಸತೀಶ್‌ ಮಡಿವಾಳ ಉಪಸ್ಥಿತರಿದ್ದರು.

ಮೂಗುತಿಗೆ ವಿಶೇಷ ಮಹತ್ವ: ಪೂಂಜ
ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತೀಯ ಹಿಂದೂ ಸಂಸ್ಕೃತಿಯಲ್ಲಿ ಮೂಗುತಿಗೆ ವಿಶೇಷ ಮಹತ್ವವಿದೆ. ಹಿಂದೂ ದೇಶದಲ್ಲಿ ಹೆಣ್ಣುಮಕ್ಕಳಿಗೆ ಮೂಗುತಿ ಧಾರಣೆ ಸಾಮೂಹಿಕತೆಯಡಿ ಬದಲಾಗಿದೆ ಎಂದಾದರೆ ಅದು ವೇಣೂರಿನ ಮಹಾಲಿಂಗೇಶ್ವರ ದೇವರ ಪವಿತ್ರ ಮಣ್ಣಿನಲ್ಲಿ ಮೂಡಿಬಂದಿದೆ. ಮುಂದೆ ದೇಶದಲ್ಲಿ ಸರ್ವವ್ಯಾಪಿಯಾಗಿ ಮೂಡಿಬರುವ ಮೂಲಕ ಮುಂದಿನ ಸಮಾಜಕ್ಕೆ ಅದರ ಮಹತ್ವ ತಿಳಿಸಿಕೊಡುವ ಕಾರ್ಯ ಶ್ರೀ ಸಾಯಿ ಈಶ್ವರ್‌ ಗುರೂಜಿಯವರಿಂದ ಮೂಡಿ ಬರಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next