Advertisement
ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ಕುರಿತು ಅನೇಕ ಬಾರಿ ಉದಯವಾಣಿ ವರದಿ ಪ್ರಕಟಿಸಿತ್ತು. ಈ ಮಧ್ಯೆ ಕೆಸರುಮಯ ರಸ್ತೆಯಲ್ಲಿ ವಾಹನ ಸವಾರರು ಪರದಾಡುವ ಸಂಪೂರ್ಣ ಚಿತ್ರಣವನ್ನೂ ಉದಯವಾಣಿ ಸುದಿನದಲ್ಲಿ ಪ್ರಕಟಿಸಿತ್ತು. ಇದಕ್ಕೂ ಮುನ್ನ ಗುತ್ತಿಗೆದಾರರ ಕೆಲಸಗಾರರಿಗೆ ವೇತನ ನೀಡದೆ ಸಮಸ್ಯೆ ಎದುರಾದ ವರದಿ ಪ್ರಕಟಗೊಂಡಿತ್ತು.
ಪ್ರಸಕ್ತ ಜಲ್ಲಿ ಹುಡಿ ಸಹಿತ ಎಂ ಸ್ಯಾಂಡ್ ಜಲ್ಲಿಗಳಿಂದ ನಿರಂತರವಾಗಿ ಹೊಂಡ ಮುಚ್ಚುವ ಕಾರ್ಯ ನಡೆಯುತ್ತಿದೆ. ನಿರಂತರ ಮಳೆಯಿಂದ ಕಾಮಗಾರಿಗೆ ತೊಡಕಾಗಿದೆ. ಮಳೆ ಬಿಟ್ಟು ಬಿಸಿಲು ಬಂದಲ್ಲಿ ತಕ್ಷಣವೇ ಸಮತಟ್ಟು ಮಾಡಿ ಡಾಮರೀಕರಣ ನಡೆಯಲಿದೆ. ಪ್ರಸಕ್ತ ಮಳೆ ನೀರು ಸರಾಗವಾಗಿ ಸಾಗಲು ಚರಂಡಿ ದುರಸ್ತಿ ಕಾರ್ಯವೂ ನಡೆಯುತ್ತಿದೆ ಎಂದು ಕಂಪೆನಿಯವರು ತಿಳಿಸಿದ್ದಾರೆ.
Related Articles
ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗೆ ಒಟ್ಟು 35 ಕಿ.ಮೀ. ವ್ಯಾಪ್ತಿಯ ಹೆದ್ದಾರಿಯಲ್ಲಿ ಸುಮಾರು 7 ಸ್ಥಳಗಳಲ್ಲಿ ರಸ್ತೆ ಸಂಪೂರ್ಣ ಕೆಟ್ಟು ಹೋಗಿದ್ದು ಮೊದಲ ಹಂತದಲ್ಲಿ ಈ ಸ್ಥಳಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮುಗ್ರೋಡಿ ಗುತ್ತಿಗೆದಾರರಿಂದ ಬೆಳ್ತಂಗಡಿಯಿಂದ ಉಜಿರೆ ವರೆಗೆ 3 ಜೆಸಿಬಿ, 1 ಹಿಟಾಚಿ, 2 ಟಿಪ್ಪರ್, 1 ಗ್ರೇಡರ್ ಕಾಮಗಾರಿ ನಡೆಸುತ್ತಿದ್ದು, ಗುರುವಾಯನಕೆರೆಯಿಂದ ಮಡಂತ್ಯಾರು ವರೆಗೆ 1ಹಿಟಾಚಿ, 2 ಜೆಸಿಬಿ ಕಾರ್ಯನಿರ್ವಹಿಸುತ್ತಿದೆ. ಉಜಿರೆಯಿಂದ ಚಾರ್ಮಾಡಿವರೆಗೆ 3 ಜೆಸಿಬಿ, 1 ಹಿಟಾಚಿ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತಿದೆ. ಒಟ್ಟು 25 ರಿಂದ 30 ಕೆಲಸಗಾರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.
Advertisement