ಪ್ರಸಾದ್ ಕುಮಾರ್ ಯು. ನಾಮಪತ್ರ ಸಲ್ಲಿಸಿದರು.
Advertisement
ಬೆಳ್ತಂಗಡಿ : ನಾಮಪತ್ರ ಸಲ್ಲಿಕೆಗೆ ಎ. 24 ಕೊನೆಯ ದಿನವಾಗಿದ್ದು, ಮೂರು ಮಂದಿ ಅಭ್ಯರ್ಥಿಗಳು ಸಹಿತ ಜೆ.ಡಿ.ಎಸ್.ನಿಂದ ಒಬ್ಬ ಅಭ್ಯರ್ಥಿ ನಾಮಪತ್ರ ಸಲ್ಲಿಸಿದರು.
ಈಗಾಗಲೇ ಜೆ.ಡಿ.ಎಸ್. ಅಭ್ಯರ್ಥಿಯಾಗಿ ಸುಮತಿ ಎಸ್. ಹೆಗ್ಡೆ ಎ. 20ರಂದು ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾದ ಎ. 24ರಂದು ಜೆ.ಡಿ.ಎಸ್.ನ ಜಗನ್ನಾಥ್ ಅವರೂ ನಾಮಪತ್ರ ಸಲ್ಲಿಸಿದರು. ಪಕ್ಷೇತರ ಅಭ್ಯರ್ಥಿ
ಕಳೆದ ಬಾರಿಯ ವಿಧಾನಸಭಾ ಚುನಾವಣೆಗೆ ಸಂಯುಕ್ತ ಜನಾತಾ ದಳದಿಂದ ಸ್ಫರ್ಧಿಸಿದ್ದ ವೆಂಕಟೇಶ ಬೆಂಡೆ ಅವರು ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಬೆಳ್ತಂಗಡಿಯ ಮಿನಿ ವಿಧಾನಸೌಧದಲ್ಲಿ ಎ. 24ರಂದು ಬೆಳಗ್ಗೆ ಚುನಾವಣಾಧಿಕಾರಿ ಎಚ್.ಆರ್. ನಾಯ್ಕ ಅವರಿಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ವೇಳೆ ಸಂಜೀವಿ ಪ್ರಭು, ರೂಪಲತಾ ಬೆಂಡೆ ಇದ್ದರು. ಕುಕ್ಕೇಡಿಯ ಯು.ಎಂ. ಸೈಯದ್ ಹಸನ್ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.
Related Articles
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸ್ಫರ್ಧಿಸುತ್ತಿರುವ ಎಂ.ಇ.ಪಿ. ಪಕ್ಷದಿಂದ ತೋಟತ್ತಾಡಿಯ ಉದ್ಯಮಿ ಜಗನ್ನಾಥ್ ಎಂ. ಅವರು ನಾಮಪತ್ರ ಸಲ್ಲಿಸಿದರು. ಈ ವೇಳೆ ಎಂ.ಇ.ಪಿ. ಸದಸ್ಯ ಹಾಲೇಶ್ ಬಾಬು, ಗಿರಿಜಾ, ಸಂಜೀವ ಶೆಟ್ಟಿ, ಕೃಷ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
Advertisement
ಶಿವಸೇನೆಶಿವಸೇನೆಯಿಂದ ಜಿಲ್ಲೆಯಲ್ಲಿ ಮೊದಲ ನಾಮಪತ್ರ ಸಲ್ಲಿಸಲಾಗಿದೆ. ಪ್ರಸಾದ್ ಕುಮಾರ್ ಯು. ಅವರು ಚುನಾವಣಾಧಿಕಾರಿ ಎಚ್.ಆರ್. ನಾಯ್ಕ ಅವರಿಗೆ ನಾಮಪತ್ರ ಸಲ್ಲಿಸಿದರು. ಶಿವಸೇನೆ ದಕ್ಷಿಣ ಪ್ರಾಂತ ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ, ಶಿವಸೇನೆ ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ಅಸುತೋಷ್, ಶಿವಸೇನೆಯ ಶಿವಪ್ರಸಾದ್ ಅರುವಾ, ವಿನೋದ್ ಧರ್ಮಸ್ಥಳ, ಹರೀಶ್ ಗರ್ಡಾಡಿ ಮೊದಲಾದವರು ಉಪಸ್ಥಿತರಿದ್ದರು.