Advertisement
ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಜಾನುವಾರುಗಳನ್ನು ಕಳೆದುಕೊಂಡು ಆರ್ಥಿಕವಾಗಿ ನಷ್ಟ ಹೊಂದುತ್ತಿರುವ ಅನೇಕರ ರೈತರು ಹೈನುಗಾರಿಕೆಯಿಂದ ವಿಮುಖರಾಗಬೇಕೆಂದು ಚಿಂತಿಸಿದ್ದೂ ಇದೆ. ಹಾಲು ಉತ್ಪಾದನೆ ಹೆಚ್ಚಿಸಿಕೊಳ್ಳುವುದಕ್ಕೆ ಮಾತ್ರವಲ್ಲ ಜಾನುವಾರಗಳ ಜೀವ ಉಳಿಸಿಕೊಳ್ಳಲು ಕೂಡ ಆಗದ ಸ್ಥಿತಿ ಕೆಲವೊಮ್ಮೆ ಬಂದೊದಗುತ್ತಿದೆ ಎಂದು ಅಲವತ್ತುಕೊಳ್ಳುತ್ತಿದ್ದಾರೆ ಹೈನುಗಾರರು. ಬೆಳ್ತಂಗಡಿ ತಾಲೂಕಿನಲ್ಲಿ ಅಗತ್ಯಕ್ಕಿಂತ ತೀರ ಕಡಿಮೆ ಪ್ರಮಾಣದಲ್ಲಿರುವ ಪಶು ವೈದ್ಯರು ಸೂಕ್ತ ಸಮಯದಲ್ಲಿ ಕೈಗೆ ಸಿಗುತ್ತಿಲ್ಲ ಎಂಬ ದೂರು ಪ್ರತಿನಿತ್ಯ ಎಂಬಂತಾಗಿದೆ.
ಬೆಳ್ತಂಗಡಿ ತಾಲೂಕಿನಲ್ಲಿ 81 ಹಳ್ಳಿಗಳಿದ್ದು ತಾಲೂಕಿನಲ್ಲಿ ಅ ಧಿಕೃತವಾಗಿ ಕೇವಲ ಐವರು ಪಶು ವೈದ್ಯರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಳ್ತಂಗಡಿ, ಚಾರ್ಮಾಡಿ, ವೇಣೂರು, ನೆರಿಯಾ, ಉಜಿರೆಯಲ್ಲಿ ಮಾತ್ರ ಪಶು ವೈದ್ಯರ ಸೇವೆ ಲಭ್ಯವಿರುತ್ತದೆ. ಇಲ್ಲಿ ವೈದ್ಯರೇ ಇಲ್ಲ
ಧರ್ಮಸ್ಥಳ, ಮಡಂತ್ಯಾರು, ಬಾರ್ಯ, ನಾರಾವಿ, ಅಂಡಿಂಜೆಯಲ್ಲಿ ಪಶು ಆಸ್ಪತ್ರೆಗಳಿದೆಯಾದರೂ ಪಶು ವೈದ್ಯರುಗಳೇ ಇಲ್ಲ. ಇರುವ ವೈದ್ಯರುಗಳಿಗೆ ಹೆಚ್ಚುವರಿ ಹೊರೆ ಇರುವುದರಿಂದ ಈ ಭಾಗದ ಜನರಿಗೆ ಪಶು ವೈದ್ಯರ ಸೇವೆ ದೊರೆಯುವಾಗ ವಿಳಂಬವಾಗುತ್ತಿದೆ.
Related Articles
ಪಶು ಆಸ್ಪತ್ರೆ, ಪ್ರಾಥಮಿಕ ಪಶ ಚಿಕಿತ್ಸಾ ಕೇಂದ್ರ ಸೇರಿದಂತೆ ಒಟ್ಟು 20 ಪಶು ವೈದ್ಯ ಸಂಸ್ಥೆಗಳಿವೆ. ಈ ಎಲ್ಲ ಸಂಸ್ಥೆಗಳಲ್ಲೂ ಸಿಬಂದಿಗಳ ಕೊರತೆ ಇದೆ. ತುರ್ತು ವೈದ್ಯರು ಅಲಭ್ಯರಾದ ಸಂದರ್ಭದಲ್ಲಿ ಪಶು ವೈದ್ಯ ಪರೀಕ್ಷರ ನೆರವು ಅಗತ್ಯವಿದೆ.ಆದರೆ ತಾಲೂಕಿನಲ್ಲಿ ಪಶು ವೈದ್ಯ ಪರೀಕ್ಷರಿಗೂ ಮೂರು ನಾಲ್ಕು ಹಳ್ಳಿಗಳ ಜವಾಬ್ದಾರಿ ನೀಡಲಾಗಿದ್ದು ಜನರ ಮೊರೆಗೆ ಶೀಘ್ರ ಸ್ಪಂದನೆಗೆ ಕಷ್ಟದಾಯಕವಾಗಿದೆ.
Advertisement
ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದಲ್ಲಿ ಪಶು ಪರೀಕ್ಷಕರೂ ಇಲ್ಲ. ತಾಲೂಕಿನೆಲ್ಲೆಡೆ ಒಟ್ಟು 80 ಜನ ಸಿಬ್ಬಂದಿ ಅಗತ್ಯ ಇದೆ. ಪ್ರಸ್ತುತ 21 ಮಂದಿ ಸಿಬ್ಬಂದಿ ಮಾತ್ರ ಇದ್ದಾರೆ. ತುರ್ತು ಸಂದರ್ಭದಲ್ಲಿ ಪಶು ವೈದ್ಯ ಪರೀಕ್ಷರ ನೆರವು ಅಗತ್ಯವಿದ್ದು ಕ್ಲಪ್ತ ಸಮಯಕ್ಕೆ ಯಾರೂ ಕೈಗೆಟುದಿರುವುದು ಖೇದಕರ.
ಗೋ ಕಳ್ಳತನಈ ಮಧ್ಯೆಯೇ ತಾಲೂಕಿನ ವಿವಿಧೆಡೆ ಅವ್ಯಾಹತವಾಗಿ ನಡೆಯುತ್ತಿರುವ ಗೋ ಕಳ್ಳತನ ಕೂಡಾ ಹೆ„ನುಗಾರರನ್ನು ಹೆ„ರಾಣಾಗಿಸಿದೆ. ಪ್ರಗತಿಪರ ಕೃಷಿಕ, 60ಕ್ಕೂ ಹೆಚ್ಚು ತಳಿಯ ಭತ್ತದ ಸಂರಕ್ಷಕ, ರಾಷ್ಟ್ರಪ್ರಶಸ್ತಿ ವಿಜೇತ ಕಿಲ್ಲೂರಿನ ಬಿ.ಕೆ. ದೇವರಾವ್ ಅವರ ಮನೆಯಿಂದಲೂ ಗೋ ಕಳ್ಳತನ ನಡೆದಿದೆ. ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಎರಡು ತಾಸಿಗೂ ಹೆಚ್ಚು ಕಾಲ ಅವರನ್ನು ಕುಳ್ಳಿರಿಸಿ ದೂರು ಸ್ವೀಕಾರಕ್ಕೆ ಬೇಕೋಬೇಡವೋ ಎಂದು ಉದಾಸೀನ ತೋರಿಸಿದ ಘಟನೆಯೂ ನಡೆದಿದೆ. ಚಾರ್ಮಾಡಿ ಮೂಲಕ ಘಟ್ಟದಿಂದ ಸದಾ ಕಳ್ಳತನವಾದ ಗೋವುಗಳ ಸಆಗಾಟ ನಡೆಯುತ್ತಲೇ ಇರುತ್ತದೆ. ನಗರದ ರಸ್ತೆಗಳಲ್ಲಿ ಬೀಡಾಡಿಯಾಗಿ ತಿರುಗುತ್ತಿದ್ದ ಹಸುಗಳಿಗೆ ಮಾತ್ರ ಎರವಾಗುತ್ತಿದ್ದ ಕಂಟಕ ಈಗ ಹಳ್ಳಿ ಹಳ್ಳಿಗಳ ಹಟ್ಟಿಗೆ ನುಗ್ಗಿದೆ. ಮಾರಕಾಸ್ತ್ರ ಹಿಡಿದು ಬೆದರಿಸಿ ಮನೆಯವರು ಇದ್ದಾಗಲೇ ಹಸುಗಳನ್ನು ಕದಿಯುವ ಘಟನೆಗಳೂ ಹೆಚ್ಚಾಗಿದೆ. ಕಡಿವಾಣ ಹಾಕಬೇಕಾದವರು ಮೌನಕ್ಕೆ ಶರಣಾದರೆ ಅನಾಹುತ ಕಟ್ಟಿಟ್ಟ ಬುತ್ತಿ. ಪಶುವೈದ್ಯರ ಕೊರತೆ ನೀಗಿದರೆ ಹೈನುಗಾರರು ಮುಖ್ಯ ತೊಂದರೆಯಿಂದ ಮುಕ್ತರಾಗಬಹುದು. ಸರಕಾರ ತುರ್ತು ಗಮನಹರಿಸಲಿ.
ಚಂದ್ರಶೇಖರ್ ಎಸ್. ಅಂತರ ಬೆಳ್ತಂಗಡಿಗೆ ನೇಮಕಾತಿಯಾಗಿಲ್ಲ
ಬಂಟ್ವಾಳ, ಮಂಗಳೂರು ಮತ್ತಿತರ ಕಡೆಗಳಿಗೆ ವೈದ್ಯರ ನೇಮಕಾತಿಯಾಗುತ್ತಿದೆ. ಆದರೆ ಬೆಳ್ತಂಗಡಿಗೆ ಮಾತ್ರ ನೇಮಕಾತಿಯಾಗಿಲ್ಲ. ಇದೊಂದು ದೊಡ್ಡ ತಾಲೂಕಾಗಿದ್ದು ಕನಿಷ್ಠ 10 ಜನರು ಅ ಧಿಕೃತ ವೈದ್ಯರಾದರೂ ಬೇಕು. ಈ ಬಗ್ಗೆ ತುರ್ತಾಗಿ ಇಲಾಖೆ ಸ್ಪಂದಿಸಬೇಕಿದೆ.
– ಡಾ| ರತ್ನಾಕರ ಮಲ್ಯ, ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ ಬೆಳ್ತಂಗಡಿ