Advertisement

ಬೆಳ್ತಂಗಡಿ: ಕೋಟಿ –ಚೆನ್ನಯ ಕ್ರೀಡಾಕೂಟದ ಸಮಾರೋಪ 

02:03 PM Jan 04, 2018 | Team Udayavani |

ಬೆಳ್ತಂಗಡಿ: ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವ ಅಭಿರುಚಿಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಗೆಲುವು ಮುಖ್ಯ ಅಲ್ಲ. ಸೋಲು ಕೂಡ ಅನುಭವವನ್ನು ನೀಡುತ್ತದೆ. ಕ್ರೀಡಾ ಸಾಧಕರನ್ನು ಗುರುತಿಸಿ ಗೌರವಿಸಿ ಪ್ರೋತ್ಸಾಹಿಸುವ ಕೆಲಸವನ್ನು ಸಂಘಟನೆಗಳು ಮಾಡಬೇಕು ಎಂದು ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಕೆ. ವಸಂತ ಬಂಗೇರ ಹೇಳಿದರು.

Advertisement

ಅವರು ಬೆಳ್ತಂಗಡಿ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ ವೇದಿಕೆ, ಮಹಿಳಾ ಬಿಲ್ಲವ ವೇದಿಕೆ ಮತ್ತು ಯುವವಾಹಿನಿ ಬೆಳ್ತಂಗಡಿ ಘಟಕದ ಆತಿಥ್ಯದಲ್ಲಿ ಜಗನ್ನಾಥ ಬಂಗೇರ ಹೇರಾಜೆ ವೇದಿಕೆಯಲ್ಲಿ ನಡೆದ ಕೋಟಿ-ಚೆನ್ನಯ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಕ್ರೀಡಾ ಸಾಧಕರನ್ನು ಸಮ್ಮಾನಿಸಿ ಮಾತನಾಡಿದರು.

ಅತಿಥಿಯಾಗಿ ರೋಟರಿಯ ನಿಯೋಜಿತ ಜಿಲ್ಲಾ ಗವರ್ನರ್‌ ರೋಹಿನಾಥ್‌ ಪಾದೆ ಮಾತನಾಡಿದರು. ಅತಿಥಿಯಾಗಿ ಬಿಲ್ಲವ ಮಹಾ ಮಂಡಲದ ಉಪಾಧ್ಯಕ್ಷ, ನಿವೃತ್ತ ಎಸ್‌ಪಿ ಪೀತಾಂಬರ ಹೇರಾಜೆ ಭಾಗವಹಿಸಿದ್ದರು. ಸಂಘದ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ ಅಧ್ಯಕ್ಷತೆ ವಹಿಸಿದ್ದರು.

ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ಬಿಜೆಪಿ ಯುವ ಮೋರ್ಚಾ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಸಂಪತ್‌
ಬಿ. ಸುವರ್ಣ, ಮಹಿಳಾ ಬಿಲ್ಲವ ವೇದಿಕೆ ಸ್ಥಾಪಕಾಧ್ಯಕ್ಷೆ ಸುಜಿತಾ ವಿ. ಬಂಗೇರ, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ
ರಾಜಶ್ರೀ ರಮಣ್‌ ಉಪಸ್ಥಿತರಿದ್ದರು.

ಸಮ್ಮಾನ
ಅಂತಾರಾಷ್ಟ್ರೀಯ ನೆಟ್‌ಬಾಲ್‌ ಆಟಗಾರ ನಿತಿನ್‌ಪೂಜಾರಿ, ರಾಷ್ಟ್ರೀಯ ನೆಟ್‌ ಬಾಲ್‌ ಆಟಗಾರರಾದ ತುಷಾರ ಅಮಿನ್‌, ದುರ್ಗಾ ಪ್ರಸಾದ್‌, ಪವರ್‌ ಲಿಫ್ಟಿಂಗ್ ಸಾಧಕ ಅಭಿನಯ ಸುವರ್ಣ, ಯೋಗಾಸನ ಸಾಧಕಿ ದೀಕ್ಷಾ ಬಿ. ಕೋಟ್ಯಾನ್‌, ಕ್ರೀಡಾ ಸಾಧಕಿ ಅಕ್ಷತಾ ಕೋಟ್ಯಾನ್‌, ಕಬಡ್ಡಿ ಸಾಧಕರಾದ ಹರಿಕಿರಣ್‌, ಚೇತನ್‌ ಸುವರ್ಣ,
ನಿಶಾಂತ್‌ ಪೂಜಾರಿ, ಶ್ವೇತಾ, ಖೋಖೋ ಆಟಗಾರ ರಮೇಶ್‌, ಸ್ಕೌಟ್‌ ಮತ್ತು ಗೈಡ್ಸ್‌ ಸಾಧಕ ಹೃಷಿಕೇಶ್‌
ರಾಜಾರಾಮ್‌, ದೈಹಿಕ ಶಿಕ್ಷಣ ನಿರ್ದೇಶಕ ರಮೇಶ್‌, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಯಶೋಧರ
ಸುವರ್ಣ ಅವರನ್ನು ಸಮ್ಮಾನಿಸಲಾಯಿತು. ಕ್ರೀಡಾ ಸಂಚಾಲಕ ಜಯವಿಕ್ರಮ ಕಲ್ಲಾಪು ಸ್ವಾಗತಿಸಿದರು. ಸುಧಾಮಣಿ ರಮಾನಂದ್‌ ಸಮ್ಮಾನಿತರನ್ನು ಪರಿಚಯಿಸಿದರು. ಪದ್ಮನಾಭ ಸಾಲ್ಯಾನ್‌ ಕಾರ್ಯಕ್ರಮ ನಿರೂಪಿಸಿದರು.

Advertisement

ಸಮಾಜವನ್ನು ಒಟ್ಟುಗೂಡಿಸಲು ಕ್ರೀಡೆ ಅಗತ್ಯ
ಕ್ರೀಡಾಕೂಟ ರಾಜಕೀಯವಾಗಿ, ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಒಡೆದ ಸಮಾಜವನ್ನು ಒಟ್ಟುಗೂಡಿಸಲು
ಅಗತ್ಯವಾದುದು. ಕ್ರೀಡಾಪಟುವಿನಲ್ಲಿ ತಾನು ಸಾಧನೆಯ ಶಿಖರವನ್ನು ಏರುವ ಛಲವಿರಬೇಕು.
– ರೋಹಿನಾಥ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next