Advertisement

Belthangady constituency; ರಾಜ್ಯದ ಅತೀ ದೊಡ್ಡ ವಿಧಾನಸಭಾ ಕ್ಷೇತ್ರವೆಂಬ ಹೆಗ್ಗಳಿಕೆ

01:52 PM Apr 17, 2023 | Team Udayavani |

ಬೆಳ್ತಂಗಡಿ: ರಾಜ್ಯದ ಅತೀ ದೊಡ್ಡ ವಿಧಾನಸಭಾ ಕ್ಷೇತ್ರವನ್ನು ಹೊಂದಿರುವ ಬೆಳ್ತಂಗಡಿ ಪ್ರತಿಷ್ಠಿತ ಚುನಾವಣಾ ಕಣಗಳಲ್ಲಿ ಒಂದು. ಇಲ್ಲಿ ಮಹಿಳಾ ಮತದಾರರ ಪ್ರಾಬಲ್ಯ ಹೆಚ್ಚಾಗಿದೆ. ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಈವರೆಗೆ 15 ಬಾರಿ ಶಾಸಕತ್ವಕ್ಕೆ ಚುನಾವಣೆ ನಡೆದಿದ್ದು 8 ಮಂದಿ ಶಾಸಕರಾಗಿ ಆಯ್ಕೆ ಯಾಗಿದ್ದಾರೆ.

Advertisement

1952ರಲ್ಲಿ ಮದ್ರಾಸ ಪ್ರಾಂತ್ಯದ ಭಾಗವಾಗಿ ನಡೆದ ಚುನಾವಣೆಯಲ್ಲಿ ಬೆಳ್ತಂಗಡಿ ಕ್ಷೇತ್ರವೂ ಪುತ್ತೂರು ವಿಧಾನ ಸಭಾ ಕ್ಷೇತ್ರದ ಭಾಗವಾಗಿತ್ತು. ದ್ವಿಸದಸ್ಯ ಕ್ಷೇತ್ರವಾಗಿದ್ದ ಪುತ್ತೂರಿನಲ್ಲಿ ಕೆ. ವೆಂಕಟ್ರ ಮಣ ಗೌಡ ಹಾಗೂ ಕೆ. ಈಶ್ವರ ಅವರ ಶಾಸಕರಾಗಿ ಆಯ್ಕೆ ಯಾಗಿದ್ದರು. 1957 ರಲ್ಲಿ ಸ್ವತಂತ್ರ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂತು.

1957ರಿಂದ 2018ರವರೆಗೆ ನಡೆದ 15 ಚುನಾವಣೆಯಲ್ಲಿ 9 ಬಾರಿ ಕಾಂಗ್ರೆಸ್‌, 5 ಬಾರಿ ಬಿಜೆಪಿ, ಒಂದು ಬಾರಿ ಜನತಾ ದಳ ಗೆಲುವು ಸಾಧಿಸಿದೆ. 1957ರಲ್ಲಿ ಅಂದು ಕ್ಷೇತ್ರದ ಮೊದಲ ಶಾಸಕರಾಗಿ ಧರ್ಮಸ್ಥಳದ ಡಿ. ರತ್ನವರ್ಮ ಹೆಗ್ಗಡೆಯವರು ಚುನಾಯಿತ ರಾದರು. ಬಿಲ್ಲವ ಮತದಾರರ ಪ್ರಾಬಲ್ಯವಿರುವ ಕ್ಷೇತ್ರವಾಗಿದ್ದು, ಎರಡನೇ ಸ್ಥಾನದಲ್ಲಿ ಗೌಡ ಹಾಗೂ ಮುಸಲ್ಮಾನ, ಉಳಿದಂತೆ ಪ.ಜಾತಿ, ಪ. ಪಂಗಡದ ಅತೀ ಹೆಚ್ಚು ಮತದಾರ ರಿದ್ದಾರೆ. ತಲಾ ಒಂದು ಬಾರಿ ಜೈನ, ಕೊಂಕಣಿ, ಬಂಟ ಸಮುದಾಯದವರು ಶಾಸಕರಾದರೆ, ಮೂರು ಬಾರಿ ಗೌಡ ಸಮುದಾಯಕ್ಕೆ ಮತದಾರರು ಮಣೆ ಹಾಕಿದ್ದಾರೆ.

ಉನ್ನತ ಸ್ಥಾನಮಾನ
ಕ್ಷೇತ್ರದಿಂದ ಆಯ್ಕೆಯಾದ ಶಾಸಕರಲ್ಲಿ ವೈಕುಂಠ ಬಾಳಿಗ ಮೈಸೂರು ವಿಧಾನ ಸಭೆಯ ಸೀ³ಕರ್‌ ಅಗಿ ಎರಡು ಅವಧಿಯಲ್ಲಿ ಕಾರ್ಯ ನಿರ್ವಹಿಸಿದ್ದರು. ಬೆಳ್ತಂಗಡಿ ತಾಲೂಕಿನಿಂದ ಗೆದ್ದು ಅತೀ ಕಿರಿಯ 28ನೇ ವಯಸ್ಸಿನಲ್ಲಿ ಯುವಜನ ಸೇವೆ ಮತ್ತು ಕ್ರೀಡಾ ಸಚಿವರಾಗಿ ಸೇವೆ ಸಲ್ಲಿಸಿದವರು ಕೆ. ಗಂಗಾಧರ ಗೌಡ. ಉಳಿದಂತೆ ಕೆ. ವಸಂತ ಬಂಗೇರ ಅವರು ವಿಧಾನಸಭೆಯ ಮುಖ್ಯ ಸಚೇತಕರಾಗಿ, ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದರು. ಬೆಳ್ತಂಗಡಿ ವಿ.ಸಭಾ ಕ್ಷೇತ್ರದಲ್ಲಿ ಪ್ರತಿಷ್ಠಿತ ಕೇದೆ ಕುಟುಂಬದ ಮೂವರು ಸಹೋದರರು 8 ಬಾರಿ ಗೆಲುವು ಕಂಡಿರುವುದು ಕ್ಷೇತ್ರದ ರಾಜಕೀಯ ಇತಿಹಾಸದಲ್ಲೊಂದು.

Advertisement

ಈ ಬಾರಿ ಐದು ಪಕ್ಷದ ಅಭ್ಯರ್ಥಿಗಳು
ಬಿಜೆಪಿಯಿಂದ ಶಾಸಕ ಹರೀಶ್‌ ಪೂಂಜ ಸ್ಪರ್ಧಿಯಾಗಿದ್ದು, ಕಾಂಗ್ರೆಸ್‌ ನಿಂದ ಹೊಸ ಆಯ್ಕೆಯಾಗಿ ರಕ್ಷಿತ್‌ ಶಿವರಾಂ ಘೋಷಣೆಯಾಗಿದೆ. ಎಸ್‌ ಡಿಪಿಐನಿಂದ ಅಕ್ಬರ್‌ ಬೆಳ್ತಂಗಡಿ, ಕರ್ನಾ ಟಕ ಸರ್ವೋದಯ ಪಕ್ಷ ದಿಂದ (ಕೆ.ಎಸ್‌.ಪಿ.) ಆದಿತ್ಯ ನಾರಾಯಣ ಕೊಲ್ಲಾಜೆ, ತುಳುನಾಡ ಪಕ್ಷದಿಂದ ಶೈಲೇಶ್‌ ಆರ್‌.ಜೆ. ಸ್ಪರ್ಧೆ ಖಚಿತ ವಾಗಿದೆ. ಜೆಡಿಎಸ್‌ ಹಾಗೂ ಸಿಪಿಐಎಂ ಕಣದಿಂದ ಹಿಂದೆ ಸರಿದಂತಿದೆ.

ಈ ಬಾರಿ ಐದು ಪಕ್ಷದ ಅಭ್ಯರ್ಥಿಗಳು ಬಿಜೆಪಿಯಿಂದ ಶಾಸಕ ಹರೀಶ್‌ ಪೂಂಜ ಸ್ಪರ್ಧಿಯಾಗಿದ್ದು, ಕಾಂಗ್ರೆಸ್‌ ನಿಂದ ಹೊಸ ಆಯ್ಕೆಯಾಗಿ ರಕ್ಷಿತ್‌ ಶಿವರಾಂ ಘೋಷಣೆಯಾಗಿದೆ. ಎಸ್‌ ಡಿಪಿಐನಿಂದ ಅಕºರ್‌ ಬೆಳ್ತಂಗಡಿ, ಕರ್ನಾ ಟಕ ಸರ್ವೋದಯ ಪಕ್ಷ ದಿಂದ (ಕೆ.ಎಸ್‌.ಪಿ.) ಆದಿತ್ಯ ನಾರಾಯಣ ಕೊಲ್ಲಾಜೆ, ತುಳುನಾಡ ಪಕ್ಷ ದಿಂದ ಶೈಲೇಶ್‌ ಆರ್‌.ಜೆ. ಸ್ಪರ್ಧೆ ಖಚಿತವಾಗಿದೆ. ಜೆಡಿಎಸ್‌ ಹಾಗೂ ಸಿಪಿಐಎಂ ಕಣದಿಂದ ಹಿಂದೆ ಸರಿದಂತಿದೆ.

Advertisement

Udayavani is now on Telegram. Click here to join our channel and stay updated with the latest news.

Next