Advertisement
ಬೆಳ್ತಂಗಡಿ ವಾರದ ಸಂತೆಯು ಮೊದಲ ಬಾರಿಗೆ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರವಾದ್ದರಿಂದ ಅಲ್ಲಿನ ವ್ಯಾಪಾರ ವಹಿವಾಟುಗಳನ್ನು ಶಾಸಕ ಹರೀಶ್ ಪೂಂಜ ಪರಿಶೀಲಿಸಿದರು. ಸಾರ್ವಜನಿಕರಿಗೆ ಖರೀದಿ ಮಾಡುವಾಗ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಜಾಗೃತಿ ಮೂಡಿ ಸಲಾಯಿತು. ವ್ಯಾಪಾರದ ಬಗ್ಗೆ ಮಾಹಿತಿ ಪಡೆದುಕೊಂಡರು.
ಸಂತೆಕಟ್ಟೆ ಪ್ರದೇಶದಲ್ಲಿ ಯಾವುದೇ ವ್ಯಾಪಾರ ವಹಿವಾಟುಗಳು ನಡೆಯ ದಂತೆ, ಜನ ಜಂಗುಳಿ, ವಾಹನಗಳ ಓಡಾಟವು ಹೆಚ್ಚಾಗದಂತೆ ಪೊಲೀಸರನ್ನು ನಿಯೋಜಿಸಲಾಗಿತ್ತು. ಸಂತೆಕಟ್ಟೆ ಬಳಿ ಬ್ಯಾರಿಕೇಡ್ ಹಾಕಿ ಸೂಚನಾಫಲಕ ಅಳವಡಿಸಲಾಗಿತ್ತು. ರವಿವಾರ ರಾತ್ರಿಯಿಂದಲೇ ಅಂಗಡಿಗಳನ್ನು ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿತ್ತು.
Related Articles
Advertisement
ತಹಶೀಲ್ದಾರ್ ಗಣಪತಿ ಶಾಸ್ತ್ರಿ, ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ಎಂ.ಎಚ್., ಎ.ಪಿ.ಎಂ.ಸಿ. ಅಧ್ಯಕ್ಷ ಕೇಶವ ಗೌಡ ಬೆಳಾಲು, ಬೆಳ್ತಂಗಡಿ ಠಾಣೆ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ., ಎಪಿಎಂಸಿ ಕಾರ್ಯದರ್ಶಿ ರವೀಂದ್ರ, ನಗರ ಪಂಚಾ ಯತ್ ಎಂಜಿನಿಯರ್ ಮಹಾವೀರ ಆರಿಗ ಮೊದಲಾದವರು ಉಪಸ್ಥಿತರಿದ್ದರು.
ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆಪ್ರತಿ ಸೋಮವಾರ ಸಂತೆಯಿಂದಾಗಿ ಹೆದ್ದಾರಿ ಸಂಚಾರ, ಬೇಕಾಬಿಟ್ಟಿ ವಾಹನ ಪಾರ್ಕಿಂಗ್ ಮಾಡುತ್ತಿದ್ದ ಪರಿಣಾಮ ನಗರದಲ್ಲಿ ಸಂಚಾರ ದಟ್ಟಣೆ ಎದುರಿಸಬೇಕಾಗಿತ್ತು. ಈ ಕುರಿತು ಹಲವು ದಶಕಗಳಿಂದ ಸಂತೆಮಾರುಕಟ್ಟೆ ಸ್ಥಳಾಂತರಕ್ಕೆ ಒತ್ತಾಸೆ ಕೇಳಿಬಂದಿತ್ತು. ಆದರೆ ರಾಜಕೀಯ ಲಾಬಿಯಿಂದ ಈಡೇರಿಲ್ಲ. ಅತ್ತ ಎಪಿಎಂಸಿ ಪ್ರಾಂಗಣದಲ್ಲಿ ಸರಕಾರ ಸಾರ್ವಜನಿಕರ ಅನುಕೂಲಕ್ಕೆ ನಿರ್ಮಿಸಿದ ಕಟ್ಟಡಗಳು ಪ್ರಯೋಜನಕ್ಕೆ ಬಾರದಂತಾಗಿತ್ತು. ಈಗಿನಂತೆ ಮುಂದೆಯೂ ವಾರದ ಸಂತೆ ಎಪಿಎಂಸಿಯಲ್ಲೇ ನಡೆಸುವಂತೆ ಜನಭಿಪ್ರಾಯ ಕೇಳಿಬಂದಿದೆ.