Advertisement
ಬೆಳ್ತಂಗಡಿ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ನ.19ರಂದು ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
Related Articles
Advertisement
ಉಪಾಧ್ಯಕ್ಷೆ ಗೌರಿ, ಸ್ಥಾಯೀ ಸಮಿತಿ ಅಧ್ಯಕ್ಷ ಶರತ್ಕುಮರ್, ಎಂಜಿನಿಯರ್ ಮಹಾವೀರ ಹಾಗೂ ಸದಸ್ಯರು, ನಾಮನಿರ್ದೇಶನ ಸದಸ್ಯರು ಉಪಸ್ಥಿತರಿದ್ದರು.
ಪ್ಲಾಸ್ಟಿಕ್ ನಿಷೇಧನಗರದಲ್ಲಿ ಪ್ಲಾಸ್ಟಿಕ್ ನಿಷೇಧಿಸುವ ಕುರಿತು ಚರ್ಚೆನ ನಡೆಯಿತು. ಈಗಾಗಲೇ ನಗರದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಬಗ್ಗೆ ಜನರಲ್ಲಿ ವರ್ತಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಿದೆ. ಪ್ರತೀ ಮನೆಗಳಿಗೆ ಬಟ್ಟೆ ಚೀಲಗಳನ್ನು ಕೊಡುವ ವ್ಯವಸ್ಥೆ ಪಂಚಾಯತ್ನಿಂದ ಮಾಡಲಾಗುವುದು. ಇದಕ್ಕೆ 1.15 ಲಕ್ಷ ರೂ. ಇರಿಸಲಾಗಿದೆ ಎಂದು ಮುಖ್ಯಾಧಿಕಾರಿ ತಿಳಿಸಿದರು. ಸದಸ್ಯರು ಪ್ರತಿಕ್ರಿಯಿಸಿ ಪ್ಲಾಸ್ಟಿಕ್ ಚೀಲಗಳನ್ನು ಮಾರಾಟ ಮಾಡುವವರಿಗೂ ದಂಡ ವಿಧಿಸಬೇಕು ಎಂದು ಆಗ್ರಹಿಸಿದರು. ಪ್ಲಾಸಿಕ್ ಬ್ಯಾಗ್ ಮಾರಾಟ ಮಾಡುವವರು ಬಟ್ಟೆ ಚೀಲ ಮಾರಾಟ ಮಾಡುವಂತೆ ಅವರಲ್ಲಿ ಮನವರಿಕೆ ಮಾಡುವುದಾಗಿ ಮುಖ್ಯಾಧಿಕಾರಿ ತಿಳಿಸಿದರು. ರುದ್ರಭೂಮಿಗೆ ಮರುಜೀವ ನೀಡಿ
ಬೆಳ್ತಂಗಡಿ ಪ.ಪಂ. ವ್ಯಾಪ್ತಿಯಲ್ಲಿ ರುದ್ರಭೂಮಿಗಳ ಅವ್ಯವಸ್ಥೆ ಹೆಚ್ಚಿದೆ. ಪಟ್ಟಣದಕ್ಕೆ 40 ಲಕ್ಷ ರೂ. ಇರಿಸಲಾಗಿದ್ದು, ಕ್ರಿಯಾಯೋಜನೆ ಆಗಿದೆ ಎನ್ನಲಾಗುತ್ತಿದೆ. ಅನುದಾನ ಕಡಿಮೆ ಇದ್ದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮನವಿ ಸಲ್ಲಿಸೋಣ ಎಂದು ಸದಸ್ಯ ಜಗದೀಶ್ ಹೇಳಿದರು. ಮುಖ್ಯಾಧಿಕಾರಿ ಪ್ರತಿಕ್ರಿಯಿಸಿ ಟೆಂಡರ್ ಆಗಿದೆ. ಜಿಲ್ಲಾಧಿಕಾರಿ ಹಂತದಲ್ಲಿದ್ದು, ಲಾಗಿನ್ ಆದ ಕೂಡಲೇ ಕಾಮಗಾರಿ ನಡೆಸುವುದಾಗಿ ತಿಳಿಸಿದೆ. ಜನರೇಟರ್ ನಿರುಪಯುಕ್ತ
ಬೆಳ್ತಂಗಡಿ ನಗರ ವ್ಯಾಪ್ತಿಯಲ್ಲಿ ನಾಲ್ಕೈದು ಕಡೆಗಳಲ್ಲಿ ಜನರೇಟರ್ ಇದೆ. ಅದು ಕಾರ್ಯನಿರ್ವಹಿಸುತ್ತಿಲ್ಲ, ಇದರ ಬಗ್ಗೆ ಯಾಕೆ ಗಮನ ಹರಿಸುತ್ತಿಲ್ಲ ಎಂದು ಜಗದೀಶ್ ಪ್ರಶ್ನಿಸಿದಾಗ ಉತ್ತರಿಸಿದ ಮುಖ್ಯಾಧಿಕಾರಿಯವರು ನಗರದಲ್ಲಿ ಐದು ಕಡೆಗಳಲ್ಲಿ ಜನರೇಟರ್ ಅಳವಡಿಸಲಾಗಿತ್ತು. ಆದರೆ ಈಗ ನಗರದಲ್ಲಿ ವಿದ್ಯುತ್ ಸಮಸ್ಯೆ ಇಲ್ಲ. ಇದರಿಂದ ಇದು ನಿರುಪಯುಕ್ತವಾಗಿದೆ ಎಂದು ತಿಳಿಸಿದರು. ನಗರಕ್ಕೆ ಎರಡು ಜನರೇಟರ್ನ್ನು ಇಟ್ಟುಕೊಂಡು ಉಳಿದ ಜನರೇಟರನ್ನು ಏಲಂ ಮಾಡುವ ಈ ಬಗ್ಗೆ ಕ್ರಮ ಕೈಗೊಳ್ಳೋಣ ಎಂದು ಅಧ್ಯಕ್ಷ ಜಯಾನಂದ ಅವರ ಸಲಹೆಯಂತೆ ಸದಸ್ಯರು ಸಮ್ಮತಿ ಸೂಚಿಸಿದರು.