Advertisement
ಮಂಗಳವಾರ ಪಾಲಿಕೆಯಲ್ಲಿ ಮೇಯರ್ ಫೋನ್ ಇನ್ಗೆ ಕರೆ ಮಾಡಿದ ಜಯಪ್ರಕಾಶ್ ಎಕ್ಕೂರು ಅವರು “ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ನಗರದಲ್ಲಿ ಇದ್ದರೂ ಯಾಕೆ ಅನುಷ್ಠಾನವಾಗುವುದಿಲ್ಲ. ಪ್ಲಾಸ್ಟಿಕ್ ಎಲ್ಲಿ ಉತ್ಪಾದನೆ ಆಗುತ್ತದೆಯೋ ಅಲ್ಲಿಯೇ ತಡೆ ನೀಡುವ ಕೆಲಸವನ್ನು ಪಾಲಿಕೆ ನಡೆಸಲಿ. ‘ಉದಯವಾಣಿ’ ಪತ್ರಿಕೆಯು ಈ ನಿಟ್ಟಿನಲ್ಲಿ ಸುದೀರ್ಘ ವರದಿಯೊಂದಿಗೆ ಜಾಗೃತಿ ಮೂಡಿಸುವ ಕೆಲಸ ನಡೆಸಿತ್ತು. ಇದನ್ನು ಗಂಭೀರವಾಗಿ ಪಾಲಿಕೆ ಪರಿಗಣಿಸಬೇಕು ಎಂದರು. ಸರಿತಾ ಲೋಬೋ ಎಂಬವರು ಕರೆ ಮಾಡಿ “ಸಣ್ಣ ಅಂಗಡಿಗೆ ರೈಡ್ ಮಾಡುವ ಬದಲು ಉತ್ಪಾದನೆಯ ಹಂತದಲ್ಲೇ ನಿರ್ಬಂಧಿಸಿ’ ಎಂದು ಸಲಹೆ ನೀಡಿದರು.
Related Articles
ರೀಟಾ ಕಾಟಿಪಳ್ಳ ಕರೆ ಮಾಡಿ ಕಾಟಿಪಳ್ಳ 3ನೇ ಬ್ಲಾಕ್ನಲ್ಲಿ 4 ದಿನಕ್ಕೊಮ್ಮೆ ಕುಡಿಯುವ ನೀರು ಬರುತ್ತಿದೆ. 2 ತಿಂಗಳಿನಿಂದ ಈ ಸಮಸ್ಯೆಯಿಂದ ನಲುಗುತ್ತಿದ್ದೇವೆ ಎಂದರು. ‘ಪರಿಶೀಲಿಸಲಾಗುವುದು’ ಎಂದ ಮೇಯರ್, ತಾತ್ಕಾಲಿಕವಾಗಿ ಟ್ಯಾಂಕರ್ ವ್ಯವಸ್ಥೆ ಮಾಡು ವಂತೆ ಅಧಿಕಾರಿಗಳಿಗೆ ಸೂಚಿಸಿದರು.
Advertisement
ಅಶೋಕನಗರದ ಸರಿತಾ ಲೋಬೋ ಅವರು ವಾರ್ಡ್ ಕಮಿಟಿ ಸಭೆ ನಡೆಯದಿರುವ ಬಗ್ಗೆ ಪ್ರಶ್ನಿಸಿದಾಗ, ನೀತಿಸಂಹಿತೆ ಇತ್ತು. ಆಯುಕ್ತರಲ್ಲಿ ಚರ್ಚಿಸಿ ಈ ತಿಂಗಳಿನಿಂದ ಮರು ಆರಂಭ ನಡೆಸಲಾಗುತ್ತದೆ ಎಂದರು ಮೇಯರ್.