Advertisement
ದಿನಬೆಳಗಾದರೆ ರಸ್ತೆಯ ಎರಡು ಬದಿಗಳಲ್ಲಿ ಕುಡುಕರ ಹಾವಳಿಯಿಂದ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿ ಗಳಿಗೆ, ಮಹಿಳೆಯರಿಗೆ ಕಿರಿಕಿರಿ ತಂದೊಡ್ಡುವಂತಾಗಿದೆ. ಉಜಿರೆ ಮುಖ್ಯ ವೃತ್ತವನ್ನೂ ವಿಶ್ರಾಂತಿ ತಾಣವನ್ನಾಗಿಸುತ್ತಿದ್ದಾರೆ. ಹೆಂಗಸರು, ಮಕ್ಕಳು ಓಡಾಡುವ ಹೆದ್ದಾರಿ ಬದಿ ಕುಡುಕರ ಈ ವರ್ತನೆಯಿಂದ ಜನರು ಬೇಸತ್ತಿದ್ದಾರೆ.
ಸಂಚಾರವಿರುವ ಈ ಪ್ರದೇಶ ಅಪಘಾತಕ್ಕೆ ಆಹ್ವಾನಿಸುವಂತಿದೆ. ನಿರ್ಗತಿಕರ ರಕ್ಷಣೆ, ಪುನರ್ವಸತಿ ಸಹಿತ ಇತರ ವಿಚಾರಗಳಿಗೆ ಗ್ರಾಮ ಪಂಚಾಯತ್ ಗಳಿಗೆ ಅನುದಾನ ಸರಕಾರದಿಂದ
ಬರುತ್ತದೆ. ಆದರೆ ಇದರ ಸದ್ಬಳಕೆ ಆಗುತ್ತಿಲ್ಲವೇ ಎಂಬ ಅನುಮಾನವನ್ನು ಜನರು ವ್ಯಕ್ತಪಡಿಸಲಾರಂಭಿಸಿದ್ದಾರೆ.
ಮುಂದೆಯಾದರೂ ಉಜಿರೆ ಗ್ರಾ.ಪಂ., ಪೊಲೀಸ್ ಇಲಾಖೆ ಇಂತವರ ಬಗೆಗೆ ಜಾಗೃತಿ, ಎಚ್ಚರಿಕೆ ಕ್ರಮ ಕೈಗೊಳ್ಳಬೇಕು
ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.