ಬೆಳ್ತಂಗಡಿ: ತಡರಾತ್ರಿ ಚಿರತೆಯೊಂದು ಬಾವಿಗೆ ಬಿದಿದ್ದು, ಅರಣ್ಯ ಇಲಾಖಾ ಸಿಬ್ಬಂದಿಗಳು ರಕ್ಷಿಸಿರುವ ಘಟನೆ ತಾಲೂಕಿನ ನಾವರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಗ್ರಾಮದ ಜಾಲ ಎಂಬಲ್ಲಿನ ವಸಂತ ಕೋಟ್ಯಾನ್ ಎಂಬುವರ ಮನೆಯ ಹಿತ್ತಿಲಲ್ಲಿರುವ ಬಾವಿಗೆ ತಡರಾತ್ರಿ ಚಿರತೆಯೊಂದು ಬಿದ್ದಿತ್ತು. ಬೆಳಿಗ್ಗೆ ಅದನ್ನು ಮೇಲಕ್ಕೆ ಬರಿಸಲು ಸ್ಥಳಿಯರು ಪ್ರಯತ್ನ ಮಾಡಿದ್ದರು. ಚಿರತೆ ಕೂಡ ಮೇಲೆ ಬರಲು ಒದ್ದಾಡುತ್ತಿತ್ತು. ಸ್ಥಳೀಯರು ತಮ್ಮ ಪ್ರಯತ್ನ ಬಿಟ್ಟು ಸುರಕ್ಷತೆಯ ದೃಷ್ಟಿಯಿಂದ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ಇದನ್ನೂ ಓದಿ: ಪುತ್ತೂರು: ಮುಸ್ಲಿಂ ಮಹಿಳೆಯ ಮನೆಯಲ್ಲಿ ಹಿಂದೂ ಯುವಕ: ಘಟನೆ ಬಗ್ಗೆ ಪೊಲೀಸರ ಸ್ಪಷ್ಟನೆ
ಕಾರ್ಕಳದಿಂದ 15 ಮಂದಿಯ ತಂಡವೊಂದು ಮಧ್ಯಾಹ್ನದ ವೇಳೆಗೆ ಆಗಮಿಸಿ, ಬಲೆಯ ಮೂಲಕ ಹಿಡಿದು ಚಿರತೆಯನ್ನು ಬೋನಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸ್ಥಳೀಯ ಇಲಾಖಾ ಸಿಬ್ಬಂದಿಗಳು, ವೇಣೂರು ಠಾಣಾ ಸಿಬ್ಬಂದಿಗಳು, ಸ್ಥಳೀಯರು ಸಹಕರಿಸಿದರು.
ಚಿರತೆ ಬೀಳಲು ತೆರೆದ ಬಾವಿಯೇ ಕಾರಣ ಎಂದು ಹೇಳಲಾಗುತ್ತಿದೆ. ಈಚೆಗೆ ಚಿರತೆಗಳ ಹಾವಳಿ ನಾವರ, ಸುಲ್ಕೇರಿ ಗ್ರಾಮದ ಸುತ್ತಮುತ್ತ ಇದ್ದು ಹಲವಾರು ಸಾಕು ನಾಯಿಗಳು, ಕೋಳಿಗಳು ಇಲ್ಲವಾಗಿವೆ ಎಂದು ಸ್ಥಳೀಯರು ದೂರಿದ್ದಾರೆ.