ಬೆಳ್ತಂಗಡಿ: ತನ್ನ ಶಾಸಕತ್ವದ 200 ದಿನಗಳಲ್ಲಿ 102 ಕೋ. ರೂ. ಅನುದಾನವನ್ನು ತಾಲೂಕಿನ ಅಭಿವೃದ್ಧಿಗೆ ನೀಡುವ ಮೂಲಕ ನವಬೆಳ್ತಂಗಡಿ ನಿರ್ಮಾಣಕ್ಕೆ ಬದ್ಧನಾಗಿದ್ದೇನೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಗುರುವಾರ ಗೇರುಕಟ್ಟೆ ಸಹಕಾರಿ ಸಭಾಭವನದಲ್ಲಿ ಬಿಜೆಪಿ ಕಳಿಯ – ನ್ಯಾಯತರ್ಪು ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಕಳಿಯ ಮತ್ತು ನ್ಯಾಯತರ್ಪು ಗ್ರಾಮದ 110 ಫಲಾನುಭವಿಗಳಿಗೆ ಅಡುಗೆ ಅನಿಲ ಸೌಲಭ್ಯ ವಿತರಿಸಿ ಮಾತನಾಡಿದರು.
ಬಿಜೆಪಿ ಬೆಳ್ತಂಗಡಿ ಮಂಡಲದ ಪ್ರಧಾನ ಕಾರ್ಯದರ್ಶಿ ಸೀತಾರಾಮ ಬಿ.ಎಸ್. ಮಾತನಾಡಿದರು. ಬಿಜೆಪಿ ಕಳಿಯ ಪಂ. ಸಮಿತಿ ಅಧ್ಯಕ್ಷ ವಿಜಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ ಮಜಲು, ಬಿಜೆಪಿ ಕಳಿಯ ಪಂ. ಸಮಿತಿಯ ಕಾರ್ಯದರ್ಶಿ ಶೇಖರ್ ನಾಯ್ಕ, ಗ್ರಾ.ಪಂ. ಸದಸ್ಯರಾದ ದಿವಾಕರ ಎಂ., ಸುಧಾಕರ ಮಜಲು, ವಿಜಯ ಪ್ರಸಾದ್, ನಳಿನಿ ಶೆಟ್ಟಿ, ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜನಾರ್ದನ ಗೌಡ ಉಪಸ್ಥಿತರಿದ್ದರು. ಬಿಜೆಪಿ ಕಳಿಯ ಶಕ್ತಿ ಕೇಂದ್ರ ಪ್ರಮುಖ್ ರಾಜೇಶ್ ಪೆಂರ್ಬಡ ಸ್ವಾಗತಿಸಿ, ನಿರೂಪಿಸಿದರು.
ದಾಖಲೆ
ಪ್ರಧಾನಿ ನರೇಂದ್ರ ಮೋದಿಯವರು ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಮತ್ತೆ ಮೋದಿಯವರನ್ನು ಪ್ರಧಾನಿಯಾಗಿ ಆರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನನ್ನ ಅವಧಿಯಲ್ಲಿ ತಾಲೂಕಿನಲ್ಲಿ ಈವರೆಗೆ 2,600 ಮಂದಿಗೆ ಉಜ್ವಲ ಯೋಜನೆಯಲ್ಲಿ ಅಡುಗೆ ಅನಿಲ ಸೌಲಭ್ಯ ವಿತರಿಸಿ ಜಿಲ್ಲೆಯಲ್ಲೇ ದಾಖಲೆ ನಿರ್ಮಿಸಲಾಗಿದೆ.
- ಹರೀಶ್ ಪೂಂಜ ಶಾಸಕರು