Advertisement

ಬೆಳ್ಮಣ್‌ ರಸ್ತೆಗಳಲ್ಲಿ ಬಂಡೆ ಸಾಗಾಟ: ಕಡಿವಾಣ ಹಾಕಲು ಆಗ್ರಹ

06:50 AM Mar 13, 2018 | |

ಬೆಳ್ಮಣ್‌: ಕರಾವಳಿ ಭಾಗದಲ್ಲಿ ಕಡಲ್ಕೊರೆತ ತಪ್ಪಿಸಲು ಕಲ್ಲು ಹಾಕುವ ಕಾರ್ಯ ಅಲ್ಲಲ್ಲಿ ನಡೆಯುತ್ತಿದ್ದು  ಬೆಳ್ಮಣ್‌ ಪರಿಸರದ ಕೋರೆಗಳಿಂದ ಈ  ಕಲ್ಲುಗಳ ಸಾಗಾಟ ನಡೆಯುತ್ತಿದ್ದು ಗುಜರಿ ಟಿಪ್ಪರ್‌ಗಳು ಅಪಾಯಕಾರಿಯಾಗಿದ್ದು ಇವುಗಳಿಗೆ ಬ್ರೇಕ್‌ ಹಾಕಲು ಒತ್ತಾಯ ಕೇಳಿ ಬರುತ್ತಿದೆ.

Advertisement

ಈ ಬೃಹತ್‌ ಬಂಡೆಗಳ ಸಾಗಾಟ ನಡೆಸುವ ಟಿಪ್ಪರ್‌ಗಳು ಬೆಳ್ಮಣ್‌ ಶಿರ್ವ ಮಾರ್ಗವಾಗಿ ಸಂಚರಿಸುತ್ತಿದ್ದು  ಬಂಡೆಗಳು ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿ ಸಾಗಾಟವಾಗುತ್ತಿವೆ. ಕಳೆದ ವಾರದ ಹಿಂದೆ ಸೂಡಾ ತಿರುವಿನ ಬಳಿ ಇಂತಹ ಬೃಹತ್‌ ಬಂಡೆಗಳನ್ನು ಹೊತ್ತ ಟಿಪ್ಪರ್‌ ಮಗುಚಿ ಬಿದ್ದು ಭಾರೀ ಅಫಘಾತವೊಂದು ಕೂದಲೆಳೆಯಲ್ಲಿ ತಪ್ಪಿ ಹೋಗಿತ್ತು.

ಅಧಿಕಾರಿಗಳು ಮೌನ
ದ್ವಿಚಕ್ರ ವಾಹನದ ಸವಾರ, ಹಿಂಬದಿ ಸವಾರರಿಗೆ ಹೆಲ್ಮೆಟ್‌ ಇಲ್ಲ ಎಂದು ತಲೆ ತಿಂದು ಕೇಸು ಜಡಿಯುವ, ರಿಕ್ಷಾ ಚಾಲಕರಿಗೆ ಖಾಕಿ ಇಲ್ಲ, ಟ್ಯಾಕ್ಸಿ ಚಾಲಕರಿಗೆ ಬಿಳಿ ಇಲ್ಲ ಎಂದು ರಸ್ತೆಗಳಲ್ಲಿ ಅಡ್ಡ ಹಾಕುವ ಸಾರಿಗೆ ಆಧಿಕಾರಿಗಳು, ಪೊಲೀಸ್‌ ಅಧಿಕಾರಿಗಳು ಈ ಅಪಾಯಕಾರಿ ಬಂಡೆ ಹೊರುವ ಗುಜರಿ ಟಿಪ್ಪರ್‌ಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇರುವುದು ಅವರಿವರ ನಡುವೆ ಹೊಂದಾಣಿಕೆಯ ಸಂಶಯ ಮೂಡಿಸಿದೆ. ಎನಿದ್ದರೂ ಘನಘೋರ ಅವಘಡ ನಡೆಯದೆ ನಮ್ಮ ಅಧಿಕಾರಿಗಳು ಕ್ರಮ ಕೈಗೊಳ್ಳಲಾರರು ಎನ್ನುವುದು ನಾಗರಿಕರ ಜಿಜಾ°ಸೆ.

Advertisement

Udayavani is now on Telegram. Click here to join our channel and stay updated with the latest news.

Next