Advertisement
ಉದ್ದೇಶಿತ ಟೋಲ್ ಗೇಟ್ ನಿರ್ಮಾಣವಾಗುವ ಸ್ಥಳವಾದ ಬೆಳ್ಮಣ್ ಸರಕಾರಿ ಪದವಿ ಪೂರ್ವ ಶಾಲೆಯ ಎದುರಿನಿಂದ ಬೆಳ್ಮಣ್ ಬಸ್ ನಿಲ್ದಾಣವರೆಗೆ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಲಾಯಿತು. 7ರಂದು ಬೃಹತ್ ಪ್ರತಿಭಟನೆ:
ಸುಂಕ ಸಂಗ್ರಹದ ವಿರುದ್ದ ಬೆಳ್ಮಣ್ ನಲ್ಲಿ ಅ. 7 ಭಾನುವಾರ ಬೃಹತ್ ಸಾರ್ವಜನಿಕ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ . ಸುಮಾರು 10 ಸಾವಿರ ಜನ ಸೇರುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ. ಕಾರ್ಕಳ, ಬೆಳ್ಮಣ್, ಸಚ್ಚೇರಿಪೇಟೆ ಭಾಗದ 50ಕ್ಕೂ ಹೆಚ್ಚು ಬಸ್ ಮಾಲಕರು ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಪ್ರತಿಭಟನೆಗೆ ಆಗಮಿಸುವವರಿಗೆ ಟಿಕೆಟ್ ರಹಿತ ಸೇವೆ ನೀಡಲಿದ್ದಾರೆ. ಲಾರಿ, ರಿಕ್ಷಾ, ಕಾರು ಮಾಲಕರು ಕೂಡಾ ಭಾನುವಾರ ನಡೆಯುವ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ.