Advertisement
ಕುಸಿಯುವ ಭೀತಿಯಲ್ಲಿದ್ದ ಹಳೆ ಟ್ಯಾಂಕ್‌ನ ಕುರಿತು ಉದಯವಾಣಿ ಎರಡೆರಡು ಬಾರಿ ಜನಪರ ಕಾಳಜಿಯಲ್ಲಿ ಸಚಿತ್ರವಾಗಿ ಎಚ್ಚರಿಸಿತ್ತು. ಇದೀಗ ಪಂಚಾಯತ್ ಆಡಳಿತ ಕಣ್ತೆರೆದು ಹಳೆಯ ಟ್ಯಾಂಕ್‌ಗೆ ಮುಕ್ತಿ ಕರುಣಿಸಿದೆ. ಬೆಳ್ಮಣ್ ಗ್ರಾಮ ಪಂಚಾಯತ್ ವ್ಯಾಪ್ತಿಯ 50 ಮೀಟರ್ ಅಂತರದಲ್ಲಿರುವ ಪ್ರಾರ್ಥನಾ ಮಂದಿರದ ಬಳಿಯಲ್ಲಿರುವ ನೀರಿನ ಟ್ಯಾಂಕ್, ಹಲವು ವರ್ಷಗಳಿಂದ ಇಡೀ ಗ್ರಾಮಕ್ಕೆ ನೀರು ಪೂರೈಕೆಯನ್ನು ಮಾಡುತ್ತಿತ್ತು. ಬಿರುಕು ಬಿಟ್ಟ ಪರಿಣಾಮ ಹಳೆಯ ಟ್ಯಾಂಕ್ ಪಕ್ಕದಲ್ಲೇ ಜಿಲ್ಲಾ ಪಂಚಾಯತ್ ಅನುದಾನದಲ್ಲಿ ಹೊಸ ಟ್ಯಾಂಕೊಂದನ್ನು ನಿರ್ಮಿಸಿ, ಅದರ ಮೂಲಕ ನೀರು ಸರಬರಾಜು ಮಾಡಲಾಗಿತ್ತು. ಹೊಸ ಟ್ಯಾಂಕ್ ನಿರ್ಮಾಣವಾಗಿದ್ದರೂ ಹಳೆಯ ಟ್ಯಾಂಕನ್ನು ಕೆಡವದಿರುವುದರಿಂದ ಇಲ್ಲಿನ ನಿವಾಸಿಗಳಿಗೆ ಹಾಗೂ ದಾರಿಹೋಕರಿಗೆ ನಿತ್ಯ ಸಮಸ್ಯೆ ಎದುರಾಗಿದ್ದು, ಹಳೆಯ ಟ್ಯಾಂಕ್ ಅಡಿ ಭಾಗದಲ್ಲಿ ಸಂಪೂರ್ಣ ಬಿರುಕು ಬಿಟ್ಟಿದ್ದು ಯಾವಾಗ ಧರೆಗೆ ಉರುಳುತ್ತೋ ಅನ್ನೋ ಮಟ್ಟ ತಲುಪಿದ್ದು ಈ ಬಗ್ಗೆ ಕಳೆದ ಕೆಲ ತಿಂಗಳ ಹಿಂದೆ ಉದಯವಾಣಿ ಸಮಗ್ರ ವರದಿಯನ್ನು ಪ್ರಕಟಿಸಿತ್ತು. ಇದೀಗ ಹಳೆಯ ಟ್ಯಾಂಕ್‌ನ್ನು ಕೆಡವಿ ಹಾಕಲಾಗಿ ಜನ ನೆಮ್ಮದಿಯಿಂದ ಓಡಾಡುವಂತಾಗಿದೆ. ಪಂಚಾಯತ್‌ನ ಈ ಸ್ಪಂದನೆಗೆ ಶ್ಲಾಘನೆ ವ್ಯಕ್ತವಾಗಿದೆ. Advertisement
ಮುಕ್ತಿ ಕಂಡ ಬೆಳ್ಮಣ್ ನೀರಿನ ಟ್ಯಾಂಕ್”
07:55 AM Mar 20, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.