Advertisement

ಬೆಳ್ಮಣ್‌: ನೀರಿದ್ದರೂ,ಉಪಯೋಗಕ್ಕಿಲ್ಲದ ಬಾವಿ 

06:00 AM Sep 09, 2018 | |

ಬೆಳ್ಮಣ್‌: ಸಾರ್ವಜನಿಕರ ಉಪಯೋಗಕ್ಕಾಗಿ ನಿರ್ಮಿಸಲಾಗಿದ್ದ ಬಾವಿ ನಿರ್ವಹಣೆ ಕಾಣದೆ ಪಾಳುಬಿದ್ದಿರುವುದು ಬೆಳ್ಮಣ್‌ ಸರಕಾರಿ ಪ.ಪೂ.ಕಾಲೇಜಿನ ಹೊರಭಾಗದ ಹೆದ್ದಾರಿ ಬದಿಯಲ್ಲಿ ಕಂಡು ಬಂದಿದೆ. 

Advertisement

1954 ರಲ್ಲಿ ನಿರ್ಮಾಣಗೊಂಡಿರುವ ಈ ಬಾವಿಯೂ ಪೇಟೆ ಪ್ರದೇಶದ ಸಾಕಷ್ಟು ಮನೆಗಳಿಗೆ ಕುಡಿಯುವ ನೀರಿಗಾಗಿ ಉಪಯೋಗವಾಗುತ್ತಿತ್ತು. ಆದರೆ ಇದೀಗ ಪೇಟೆ ಪ್ರದೇಶಗಳು ಬೆಳವಣಿಗೆಯಾಗುತ್ತಿದ್ದಂತೆ ಈ ಸಾರ್ವಜನಿಕ ಕುಡಿಯುವ ನೀರಿನ ಈ ಬಾವಿ ಉಪಯೋಗಕ್ಕೆ ಬಾರದೆ ಪಾಳು ಬಿದ್ದಿದೆ. 

ಬಾವಿಯಲ್ಲಿ ಉತ್ತಮ  ನೀರಿನ ಒರತೆ ಇದ್ದರೂ ಈ ಭಾಗದಲ್ಲಿ ಉಪಯೋಗವಾಗುತ್ತಿಲ್ಲ, ಹಲವು ಮನೆಗಳಿಗೆ ಉಪಯೋಗ ಶುದ್ಧ ನೀರು ಹೊಂದಿರುವ ಈ ಬಾವಿಯ ನೀರು ಬೆಳ್ಮಣ್‌ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹಲವಾರು ಮನೆಗಳಿಗೆ ಉಪಯೋಗಕ್ಕೆ ಬರುತ್ತಿತ್ತು. ಬಾವಿಯ ಜತೆಗೆ  ನೀರನ್ನು ಶುಚಿಗೊಳಿಸಿದಲ್ಲಿ ನೀರಿನ ಅಭಾವದ ಸಮಸ್ಯೆ ಎದುರಿಸುತ್ತಿರುವ ಕೆಲವೊಂದು ಮನೆಗಳಿಗೆ ಪ್ರಯೋಜನವಾಗಲಿದೆ.ಹೊಸ ಬಾವಿ ನಿರ್ಮಿಸುವುದಕ್ಕಿಂತ ಇರುವ ಬಾವಿಯ ನಿರ್ವಹಣೆ ಮಾಡಬೇಕೆನ್ನುವುದು ಇಲ್ಲಿನ ಸ್ಥಳೀಯರ ಅಭಿಪ್ರಾಯ. 

ಬಾವಿ ತುಂಬಾ ತ್ಯಾಜ್ಯ
ಬಾವಿಯ ಒಳ ಭಾಗ ತುಂಬ ಹುಲ್ಲು, ಪೊದೆಗಳು ಬೆಳೆದಿದ್ದು ಬಾವಿಯ ನೀರು ಹಾಳಾಗಿದೆ. ಪ್ಲಾಸ್ಟಿಕ್‌ ತ್ಯಾಜ್ಯಗಳೂ ಇದರಲ್ಲಿವೆ. ಇದನ್ನು ಶುಚಿಗೊಳಿಸಿ ಬಳಕೆಗೆ ಯೋಗ್ಯವನ್ನಾಗಿ ಮಾಡಬಹುದು. 

ಶುಚಿಗೊಳಿಸಿ
ಈ ಹಿಂದೆ ಈ ಬಾವಿಯ ನೀರನ್ನು ಉಪಯೋಗಿಸುತ್ತಿದ್ದೆವು. ಮತ್ತೆ ಶುಚಿಗೊಳಿಸಿದರೆ ಈ ಭಾಗದ ಜನರಿಗೆ ಉಪಯೋಗವಾಗಬಹುದು. ಗಮನ ಹರಿಸಿದಲ್ಲಿ ಉತ್ತಮ. 
– ಭಾಸ್ಕರ್‌,ಗ್ರಾಮಸ್ಥ.

Advertisement

ಶೀಘ್ರ ಕ್ರಮ
ಬಾವಿಯ ನೀರನ್ನು ಉಪಯೋಗಿಸುವವರ ಸಂಖ್ಯೆ ಕಡಿಮೆಯಾದ ಕಾರಣ ಪಾಳು ಬಿದ್ದಿದೆ. ಮತ್ತೆ ಬಾವಿಯನ್ನು ಶುಚಿಗೊಳಿಸುವ ಕಾರ್ಯವನ್ನು ಶೀಘ್ರ ಕೈಗೊಳ್ಳುತ್ತೇವೆ.
ಮಲ್ಲಿಕಾ ರಾವ್‌,
ಬೆಳ್ಮಣ್‌ ಗ್ರಾ.ಪಂ ಅಧ್ಯಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next