Advertisement
ಸಂಬಂಧ ಇಲಾಖೆ ಗಮನಹರಿಸಲಿ: ಆಲೂರು ಪಟ್ಟಣಕ್ಕೆ 5 ಕಿ.ಮೀ.ದೂರದಲ್ಲಿರುವ ಹೊಳೆ ಬೆಳ್ಳೂರುರಸ್ತೆ ಈ ಹಿಂದೆ ಸಂಪೂರ್ಣವಾಗಿ ಗುಂಡಿ ಬಿದ್ದ ಹಿನ್ನೆಲೆ 3-4 ವರ್ಷಗಳ ಹಿಂದೆ ಬಂಡಿ ತಿಮ್ಮನಹಳ್ಳಿ, ಚಿಕ್ಕಣಗಾಲು ಹೊಸಳ್ಳಿ, ಕುಂಬಾರಹಳ್ಳಿ, ಕುಂಬಾರಹಳ್ಳಿಕೊಪ್ಪಲು, ನಾಕಲಗೋಡು ಕೊಪ್ಪಲು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಅಲ್ಲದೇ, ಪಕ್ಕದಲ್ಲಿಎತ್ತಿನಹೊಳೆ ಕಾಲುವೆ ಹಾದು ಹೋಗಿರುವುದರಿಂದರಸ್ತೆಯಲ್ಲಿ ಎತ್ತಿನ ಹೊಳೆ ಇಲಾಖೆಗೆ ಸೇರಿದ ವಾಹನಗಳು ಓಡಾಡುವುದರಿಂದ ರಸ್ತೆ ಸಂಪೂರ್ಣವಾಗಿ ಹಾಳಾಗಿ ಹೋಗಿದ್ದು ಸಂಬಂಧಪಟ್ಟ ಇಲಾಖೆ ರಸ್ತೆ ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸಿದ್ದರು. ಈ ಹಿನ್ನೆಲೆ 3-4 ವರ್ಷಗಳ ಹಿಂದೆಎತ್ತಿನಹೊಳೆ ಯೋಜನೆ ಇಲಾಖೆ 3 ಕೋಟಿ ರೂ.ವೆಚ್ಚದಲ್ಲಿ ಗೇಕರವಳ್ಳಿ ಕೆರೆ ಏರಿಗೆ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲಾಗಿದೆ.
Related Articles
Advertisement
ತಾಲೂಕಿನ ಹೊಳೆಬೆಳ್ಳೂರು ರಸ್ತೆ ಸಂಪೂರ್ಣವಾಗಿ ಹಾಳಾದ ಹಿನ್ನೆಲೆ ಜನಸಾಮಾನ್ಯರು ರಸ್ತೆಯಲ್ಲಿ ಓಡಾಡಲು ತುಂಬಾ ತೊಂದರೆಯಾಗಿದೆ. ಈ ಭಾಗದ ಜನಸಾಮಾನ್ಯರ ಹೋರಾಟದ ಫಲವಾಗಿ ಎತ್ತಿನಹೊಳೆ ಇಲಾಖೆ ವತಿಯಿಂದ ಗೇಕರವಳ್ಳಿ ಕೆರೆ ಏರಿ ಮೇಲೆ ಕಾಂಕ್ರೀಟೀಕರಣ ಮಾಡಲಾಗಿದೆ.ಇನ್ನುಳಿದ ಕಾಮಗಾರಿ ಆದಷ್ಟು ಬೇಗ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ತಾಪಂ ಮಾಜಿ ಸದಸ್ಯ ನಟರಾಜ್ ನಾಕಲಗೊಡು ಒತ್ತಾಯಿಸಿದ್ದಾರೆ.
ಬಿಕ್ಕೋಡು ರಸ್ತೆಯಿಂದ ಹೊಳಬೆಳ್ಳೂರು ಗ್ರಾಮದವರೆಗೆ ರಸ್ತೆ ಸಂಪೂರ್ಣವಾಗಿ ಗುಂಡಿ ಬಿದ್ದು ಓಡಾಡದಂತಹ ಸ್ಥಿತಿನಿರ್ಮಾಣವಾಗಿದೆ. ಈ ಭಾಗದ ಜನಸಾಮಾನ್ಯರ ಹೋರಾಟದಫಲವಾಗಿ ಗೇಕರವಳ್ಳಿ ಕೆರೆ ಏರಿ ಮೇಲೆ ಕೇವಲ 750 ಮೀ.ಮಾತ್ರ ಕಾಂಕ್ರಿಟ್ ರಸ್ತೆ ನಿರ್ಮಾಣವಾಗಿದೆ. ಆದರೆ ಕೆರೆ ಏರಿ ರಸ್ತೆಯ ಇಕ್ಕೆಲಗಳಲ್ಲಿ ತಡೆಗೊಡೆ ನಿರ್ಮಾಣವಾಗಬೇಕಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. – ವೀಣಾ, ಹುಣಸವಳ್ಳಿ ಗ್ರಾಪಂ ಸದಸ್ಯೆ
– ಟಿ.ಕೆ.ಕುಮಾರಸ್ವಾಮಿ ಟಿ.ತಿಮ್ಮನಹಳ್ಳಿ