Advertisement

ತಂಬಾಕು ಸೇವನೆ-ಉಗುಳುವುದು ನಿಷೇಧ

04:03 PM Jun 01, 2020 | Naveen |

ಬಳ್ಳಾರಿ: ವಿಶ್ವ ತಂಬಾಕು ವಿರೋಧಿ ದಿನಾಚರಣೆ ಅಂಗವಾಗಿ ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಏರ್ಪಡಿಸಿದ್ದ ವಾಹನಗಳ ಮೂಲಕ ಜನಜಾಗೃತಿ ಅಭಿಯಾನಕ್ಕೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಮರಿಯಂಬಿ ಮತ್ತು ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ| ಗುರುರಾಜ ಚವ್ಹಾಣ ಭಾನುವಾರ ಚಾಲನೆ ನೀಡಿದರು.

Advertisement

ಬಳಿಕ ಮಾತನಾಡಿದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಮರಿಯಂಬಿ, ಸಮುದಾಯದಲ್ಲಿ ಅನಾದಿಕಾಲದಿಂದಲೂ ಬಳಕೆಯಲ್ಲಿರುವ ತಂಬಾಕಿನ ವಿವಿಧ ಉತ್ಪನ್ನಗಳನ್ನು ಸಾರ್ವಜನಿಕ ಆರೋಗ್ಯದ ಹಿನ್ನೆಲೆಯಲ್ಲಿ ಹಂತಹಂತವಾಗಿ ಬಳಕೆಯನ್ನು ನಿಯಂತ್ರಿಸುವ ಕಾರ್ಯ ಕಾನೂನಾತ್ಮಕ ರೀತಿಯಲ್ಲಿ ಹಾಗೂ ಜಾಗೃತಿ ನೀಡುವ ಮೂಲಕ ಕೈಗೊಳ್ಳಲಾಗುತ್ತಿದೆ. ಇತ್ತೀಚಿಗೆ ಜಾಗತಿಕವಾಗಿ ಕಂಡುಬಂದ ಕೋವಿಡ್ ವೈರಸ್‌ ನಿಯಂತ್ರಣಕ್ಕಾಗಿ ಸಾರ್ವಜನಿಕ ಸ್ಥಳಗಳಲ್ಲಿ ಜಗಿಯುವ ತಂಬಾಕು ಸೇವನೆ ಮತ್ತು ಉಗುಳುವುದನ್ನು ನಿಷೇಧಿಸಲಾಗಿದ್ದು ಇದಕ್ಕಾಗಿ ಸಾರ್ವಜನಿಕರು ಸಂಪೂರ್ಣವಾಗಿ ಸಹಕಾರ ನೀಡುವಂತೆ ಕೋರಿದರು.

“ಯುವ ಪೀಳಿಗೆಯನ್ನು ತಂಬಾಕು ಉದ್ಯಮಗಳ ಕುತಂತ್ರ ಹಾಗೂ ತಂಬಾಕು ಮತ್ತು ನಿಕೋಟಿನ್‌ ಬಳಕೆಯಿಂದ ರಕ್ಷಣೆ ಮಾಡುವುದು’ ಈ ವರ್ಷದ ಧ್ಯೇಯವಾಕ್ಯವಾಗಿದೆ ಎಂದರು. ನಂತರ ವಾಹನದಲ್ಲಿ ಧ್ವನಿವರ್ಧಕದ ಮೂಲಕ ಜನಜಾಗೃತಿ ಅಭಿಯಾನವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಿಂದ ಹೊರಟು ಸಂಗಂ ವೃತ್ತ, ರಾಘವೇಂದ್ರ ಚಿತ್ರಮಂದಿರ ವೃತ್ತ, ಮೀನಾಕ್ಷಿ ವೃತ್ತ, ಜಿಲ್ಲಾಧಿಕಾರಿಗಳ ಕಾರ್ಯಾಲಯ, ರಾಯಲ್‌ ವೃತ್ತ, ಬೆಂಗಳೂರು ರಸ್ತೆ, ಬ್ರೂಸ್‌ಪೇಟೆ ಪೋಲೀಸ್‌ ಠಾಣೆ, ಎಪಿಎಂಸಿ ಯಾರ್ಡ್‌, ಬಾಪೂಜಿನಗರ, ಮಿಲ್ಲರ್‌ ಪೇಟೆ, ಶ್ರೀರಾಂಪುರ ಕಾಲೋನಿ, ಎಂ.ಜಿ. ವೃತ್ತ, ಪಟೇಲ್‌ ನಗರ, ಎಸ್‌.ಎನ್‌.ಪೇಟೆ, ಗಾಂಧಿ ನಗರ, ದುರ್ಗಮ್ಮ ಗುಡಿ ವೃತ್ತ, ಎಸ್‌ .ಪಿ.ಸರ್ಕಲ್‌, ಕೋಟೆ, ಕೌಲ್‌ ಬಜಾರ್‌, ಬೆಳಗಲ್‌ ಕ್ರಾಸ್‌, ರೇಡಿಯೋ ಪಾರ್ಕ್‌, ನಂದಿ ಸ್ಕೂಲ್‌ ಹೊಸಪೇಟೆ ರಸ್ತೆ, ಸುಧಾ ಕ್ರಾಸ್‌, ಓಪಿಡಿ ಇಂದಿರಾನಗರ, ದೇವಿನಗರ, ಮೋತಿ ವೃತ್ತ, ರಾಯಲ್‌ ವೃತ್ತ, ಪುನಃ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಗೆ ಮರಳಿತು.

ಈ ಸಂದರ್ಭದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ದುರುಗೇಶ ಎಸ್‌. ಮಾಚನೂರು, ಜಿಲ್ಲಾ ಕಾರ್ಯಕ್ರಮ ಸಂಯೋಜಕಿ ಜಬೀನ್‌ ತಾಜ್‌, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣ ನಾಯಕ, ಡಾ| ಗುರುಪ್ರಸಾದ್‌ ಪುರೋಹಿತ್‌, ಶರತ್‌ ಬಾಬು ಹಾಗೂ ಜಿಲ್ಲಾ ಸರ್ವೇಕ್ಷಣಾ ಘಟಕ ಸಿಬ್ಬಂದಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next