Advertisement

ಸಿಜಿಕೆ ರಂಗಭೂಮಿಯ ದೈತ್ಯ ಪ್ರತಿಭೆ

12:19 PM Jun 29, 2020 | Naveen |

ಬಳ್ಳಾರಿ: ಸಿ.ಜಿ.ಕೆ ಎಂದೇ ನಾಡಿನಲ್ಲಿ ಪ್ರಖ್ಯಾತರಾಗಿದ್ದ ಸಿ.ಜಿ. ಕೃಷ್ಣ ಸ್ವಾಮಿಯವರು ಕನ್ನಡ ರಂಗಭೂಮಿಯಲ್ಲಿ ಸಂಘಟಕರಾಗಿ, ರಂಗ ನಿರ್ದೇಶಕರಾಗಿ, ನಾಟಕಕಾರರಾಗಿ ಅವರ ಕೊಡುಗೆ ಅಪಾರವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸಿದ್ಧರಾಮ ಕಲ್ಮಠ ಅಭಿಪ್ರಾಯಪಟ್ಟರು.

Advertisement

ನಗರದ ಡಿ.ಆರ್‌.ಕೆರಂಗಸಿರಿ ಶಾಲೆಯಲ್ಲಿ ಡಿ.ಕಗ್ಗಲ್ಲಿನ ರಂಗಜಂಗಮ ಸಂಸ್ಥೆ, ಕರ್ನಾಟಕ ಬೀದಿನಾಟಕ ಅಕಾಡೆಮಿಯ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೀದಿ ನಾಟಕ ರಂಗಭೂಮಿಯ ಆಚರಣೆ ಹಾಗೂ ಸಿ.ಜಿ.ಕೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿಜಿಕೆ ಅವರು ಬದುಕಿನ ಕುರಿತು ಮಾತನಾಡಿದರು. ಸಿಜಿಕೆ ಅವರು ಹೊಸ ಹೊಸ ನಾಟಕ ಪ್ರಯೋಗಗಳಿಗೆ ತಮ್ಮನ್ನ ದುಡಿಸಿಕೊಂಡು ಎಲ್ಲರೂ ರಂಗ ಭೂಮಿಯಲ್ಲಿ ಕ್ರಿಯಾಶೀಲರಾಗಿ ಇರುವಂತೆ ಮಾಡಿದರು. ನೂರಾರು ವರ್ಷ ಇತಿಹಾಸ ಇರುವ ರಂಗಭೂಮಿಗೆ ನುರಿತ ರಂಗ ನಿರ್ದೇಶಕರಾದರು. ಬೀದಿ ನಾಟಕಗಳ ಮೂಲಕವೂ ಜನ ಸಾಮಾನ್ಯರಿಗೆ ಜಾಗೃತಿ ಮೂಡಿಸುತ್ತ ರಂಗ ಸಂಘಟಕರನ್ನು ಸಂಘಟಿಸುತ್ತಾ ಬಂದಿದ್ದರು ಎಂದು ಗುಣಗಾನ ಮಾಡಿದರು.

ರಂಗಸಂಘಟಕ, ನಿರ್ದೇಶಕ ಕೆ.ಸಿ.ಪರಶುರಾಮ ಅಂಗೂರು ಅವರಿಗೆ ಈ ಸಾಲಿನ ಸಿಜಿಕೆ ರಂಗ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪನ್ಯಾಸಕ ಡಾ| ಕೆ.ಬಸಪ್ಪ ಅವರು ಸಿ.ಜಿ.ಕೆ ಯವರ ಜೀವನ-ಬದುಕಿನ ಅಂತರಂಗ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ವೆಂಕೋಬಾಚಾರಿ, ಬಿ.ಗಂಗಣ್ಣ, ಕೆ.ಜಗದೀಶ. ರಾಮೇಶ್ವರ ಹಿರೇಮಠ ಮುಂತಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next