ಸಮೂಹ ಸಾರಿಗೆ ಪ್ರೋತ್ಸಾಹಿಸುವುದು, ನಾಲ್ಕು ಮಂದಿ ಪ್ರಯಾಣಿಸುವ ಕಾರುಗಳಿಗೆ ಪ್ರತ್ಯೇಕ ಪಥ ಗುರುತಿಸುವುದು, ಶಿಸ್ತುಬದ್ಧ ಪಥ ವ್ಯವಸ್ಥೆ ಜಾರಿಗೊಳಿಸುವುದು, ನಿಯಮ ಉಲ್ಲಂ ಸಿದವರಿಗೆ ದುಬಾರಿ ದಂಡ, ನಾನಾ ಬಗೆಯ ಸಮೂಹ ಸಾರಿಗೆಯನ್ನು ಪೂರಕವಾಗಿ ಹೊಂದಿಸಿದರೆ ಬಳ್ಳಾರಿ ರಸ್ತೆಯಲ್ಲಿ ಸಂಚಾರ ಸುಗಮಗೊಳಿಸಬಹುದು.
ಬಸವೇಶ್ವರ ವೃತ್ತದಿಂದ ಹೆಬ್ಟಾಳದ ನಡುವೆ ಸಂಚಾರ ದಟ್ಟಣೆ ತಪ್ಪಿಸಲು ಬಿಎಂಟಿಸಿ ಬಸ್‌ಗಳಿಗೆ ಪ್ರತ್ಯೇಕ ಪಥ ವ್ಯವಸ್ಥೆ ಕಲ್ಪಿಸಬಹುದು. ಸಂಚಾರ ಪಥ ವ್ಯವಸ್ಥೆಯನ್ನೂ ಕಟ್ಟುನಿಟ್ಟಾಗಿ ಪಾಲಿಸುವ ವ್ಯವಸ್ಥೆ ತರಬೇಕು. ಸೂಕ್ತ ಸಂಚಾರ ಸೂಚನಾ ಫಲಕಗಳನ್ನು ಅಳವಡಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬಹುದು.
ಬಸವೇಶ್ವರ ವೃತ್ತ- ಹೆಬ್ಟಾಳ ನಡುವೆ ಮೊದಲ ಹಂತದಲ್ಲಿ ಬಿಎಂಟಿಸಿ ಬಸ್ ಸಂಚಾರ ಪಥ ಹಾಗೂ ಅದರ ಮೇಲೆ ಮೆಟ್ರೋ ಮಾರ್ಗ ಕಲ್ಪಿಸುವತ್ತ ಗಂಭೀರ ಚಿಂತನೆ ನಡೆಸಬಹುದು. ಏಕೆಂದರೆ ಎರಡು ಕಾಮಗಾರಿಗೆ ಒಂದೇ ಕಡೆ ಪಿಲ್ಲರ್ ಅಳವಡಿಸಬಹುದಾಗಿದ್ದು, ನಿಲ್ದಾಣಗಳನ್ನು ಒಂದೇ ಕಡೆ ನಿರ್ಮಿಸಲು ಅವಕಾಶವಿದೆ. ಇದರಿಂದ ಏಕಕಾಲಕ್ಕೆ ಎರಡೂ ಪಥಗಳನ್ನು ನಿರ್ಮಿಸಿ ಸಮಯ ಕೂಡ ಉಳಿಸಬಹುದು. ಇದು ಶಾಶ್ವತ ಪರಿಹಾರವಾಗಬಹುದು.
ಇನ್ನು ನಗರದಲ್ಲಿ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ನಾನಾ ಪರ್ಯಾಯ ವ್ಯವಸ್ಥೆಯನ್ನು ಏಕಕಾಲಕ್ಕೆ ಜಾರಿಗೊಳಿಸಿ ಪರಿಣಾಮಕಾರಿಯಾಗಿ ಪಾಲಿಸುವುದು ಬಹಳ ಮುಖ್ಯ. ಸಮೂಹ ಸಾರಿಗೆಯಾದ ಬಿಎಂಟಿಸಿ ಬಸ್, ಮೆಟ್ರೋ ರೈಲು ಬಳಕೆಗೆ ಜನರಿಗೆ ಪ್ರೋತ್ಸಾಹ ನೀಡಬೇಕು. ಸಮೂಹ ಸಾರಿಗೆ ನಿರಂತರವಾಗಿ ಬಳಸುವ ಸಾರ್ವಜನಿಕರಿಗೆ ಉಚಿತ ಪಾಸ್ ಇತರೆ ಉತ್ತೇಜಕಗಳನ್ನು ನೀಡಬೇಕು.
ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ನಿಯಮಿತವಾಗಿ ಬಸ್ ಸಂಚಾರ ಕಲ್ಪಿಸುವ ಮೂಲಕ ಪ್ರೋತ್ಸಾಹ ನೀಡಬೇಕು. ಪ್ರತಿ ಮೆಟ್ರೋ ನಿಲ್ದಾಣಗಳಲ್ಲಿ ಕನಿಷ್ಠ ದ್ವಿಚಕ್ರ ವಾಹನ ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು.ಬಿಎಂಟಿಸಿ ಬಸ್‌ಗಳು ಹಾಗೂ ನಾಲ್ಕು ಮಂದಿ ಪ್ರಯಾಣಿಸುವ ಕಾರುಗಳು ತಡೆರಹಿತವಾಗಿ ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ಸಂಚರಿಸುವ ವ್ಯವಸ್ಥೆ ತರಬೇಕು. ಖಾಸಗಿ ವಾಹನಕ್ಕಿಂತ ಸಮೂಹ ಸಾರಿಗೆಯಲ್ಲೇ ತ್ವರಿತವಾಗಿ ಕ್ರಮಿಸುವ ವಿಶ್ವಾಸ ಮೂಡಿಸಿದರೆ ಜನ ಬಳಸ ಲಾರಂಭಿಸುತ್ತಾರೆ.
ಹಾಗೆಯೇ “ಕಾರ್ ಪೂಲಿಂಗ್’ ವ್ಯವಸ್ಥೆ ಪ್ರೋತ್ಸಾಹಿಸಬೇಕು. ಒಂದು ಕಾರಿನಲ್ಲಿ ನಿತ್ಯ ನಾಲ್ಕು ಮಂದಿ ಸಂಚರಿಸುವಂತಾದರೆ 100 ಕಾರುಗಳಿಗೆ ಬದಲಾಗಿ 25 ಕಾರುಗಳಷ್ಟೇ ರಸ್ತೆಗಿಳಿಯಲಿವೆ. ವಾಹನ ಕಡಿಮೆಯಾದರೆ ದಟ್ಟಣೆ ಜತೆಗೆ ಮಾಲಿನ್ಯ ಪ್ರಮಾಣವೂ ತಗ್ಗಲಿದೆ. ಹಾಗೆಯೇ ಅಪಘಾತ ಪ್ರಮಾಣಗಳೂ ತಗ್ಗಲಿವೆ.
ನಿರ್ಬಂಧಕ್ಕೆ ಕಠಿಣ ಕ್ರಮ: ಖಾಸಗಿ ವಾಹನ ಬಳಕೆ ತಗ್ಗಿಸುವ ಸಲುವಾಗಿ ಖಾಸಗಿ ವಾಹನಗಳಿಗೆ ದುಬಾರಿ ಪಾರ್ಕಿಂಗ್ ಶುಲ್ಕ ವಿಧಿಸಬಹುದು. ಆಯ್ದ ಪ್ರದೇಶದಲ್ಲಿ ದಟ್ಟಣೆ ಶುಲ್ಕ ವಿಧಿಸುವ ಬಗ್ಗೆಯೂ ಚಿಂತಿಸಬಹುದು. ಹೊಸ ವಾಹನಗಳಿಗೆ ದುಬಾರಿ ತೆರಿಗೆ ಸಂಗ್ರಹಿಸಬಹುದು. ನಗರದ ಎಲ್ಲ ಭಾಗಗಳಿಗೂ ಸುಗಮವಾಗಿ ಸಂಚರಿಸುವ ಸಂಪರ್ಕ ಜಾಲವನ್ನು ಅಭಿವೃದ್ಧಿಪಡಿಸಬೇಕು. ಶಾಲಾ- ಕಾಲೇಜು, ಕಾರ್ಪೋರೇಟ್ ಕಂಪನಿಗಳು ಹಾಗೂ ಸರ್ಕಾರಿ ಕಚೇರಿಗಳ ಕಾರ್ಯ ನಿರ್ವಹಣಾ ಅವಧಿಯಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿಕೊಂಡರೂ ದೊಡ್ಡ ಪರಿಣಾಮ ಕಂಡುಕೊಳ್ಳಬಹುದು.