Advertisement

ಬಳ್ಳಾರಿ : ಭಾರಿ ಮಳೆಗೆ ಮನೆಯ ಗೋಡೆ ಕುಸಿದು ಆಶಾ ಕಾರ್ಯಕರ್ತೆ ಸ್ಥಳದಲ್ಲೇ ಸಾವು

08:04 AM Sep 07, 2022 | Team Udayavani |

ಬಳ್ಳಾರಿ: ಜಿಲ್ಲೆಯ ಕಂಪ್ಲಿ ತಾಲೂಕು ಎಮ್ಮಿಗನೂರು ಗ್ರಾಮದಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಮನೆಯ ಗೋಡೆ ಕುಸಿದು ಆಶಾ ಕಾರ್ಯಕರ್ತೆಯೊಬ್ಬರು ಮೃತಪಟ್ಟಿದ್ದಾರೆ.

Advertisement

ಉಮಾದೇವಿ (44) ಮೃತ ದುರ್ದೈವಿ. ಗ್ರಾಮದ 7ನೇ ವಾರ್ಡ್ ನ ನೀರಾವರಿ ಇಲಾಖೆಯ ಕ್ವಾಟ್ರಸ್ ನಲ್ಲಿ ವಾಸವಾಗಿದ್ದರು. ಜಿಲ್ಲೆಯಲ್ಲಿ ಕಳೆದ ಎರಡ್ಮೂರು ದಿನಗಳಿಂದ ತಾತ್ರಿ ಹೊತ್ತು ನಿರಂತರ ಮಳೆ ಸುರಿಯುತ್ತಿದ್ದು, ಹಳೆಯದಾದ ಮನೆ ಶಿಥಿಲಾವಸ್ಥೆ ತಲುಪಿದೆ. ಪರಿಣಾಮ ಮಂಗಳವಾರ ರಾತ್ರಿಯೂ ಮಳೆ ಸುರಿದಿದ್ದು, ಮನೆಯೊಳಗೆ ಮಲಗಿದ್ದಾಗ ಮಧ್ಯರಾತ್ರಿ 1.30 ರ ಸುಮಾರಿಗೆ ಅಡುಗೆ ಕೋಣೆಯ ಅಡ್ಡಗೋಡೆ ಉಮಾದೇವಿ ಅವರ ಮೇಲೆ ಬಿದ್ದು ಮೃತಪಟ್ಟಿದ್ದಾರೆ.

ಎಮ್ಮಿಗನೂರು ಗ್ರಾಮಕ್ಕೆ ಕಂದಾಯಾಧಿಕಾರಿ ಗಣೇಶ ಮತ್ತು ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇದನ್ನೂ ಓದಿ :ನಾಳೆ “ಕರ್ತವ್ಯ ಪಥ’ ಉದ್ಘಾಟನೆ; ಪ್ರಧಾನಿ ಮೋದಿಯವರಿಂದ ಚಾಲನೆ

Advertisement

Udayavani is now on Telegram. Click here to join our channel and stay updated with the latest news.

Next