Advertisement

14 ಜನರಿಗೆ ಸೋಂಕು; 12 ಗುಣಮುಖ

12:46 PM Jun 21, 2020 | Naveen |

ಬಳ್ಳಾರಿ: ನಗರದ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್‌ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ 12 ಜನರು ಗುಣಮುಖರಾದ ಹಿನ್ನೆಲೆಯಲ್ಲಿ ಅವರನ್ನು ಶನಿವಾರ ಮನೆಗೆ ಕಳುಹಿಸಿಕೊಟಿದ್ದು, ಕೊಂಚ ನೆಮ್ಮದಿ ಮೂಡಿಸಿದರೆ, ಜಿಲ್ಲೆಯಲ್ಲಿ ಪುನಃ 14 ಪ್ರಕರಣಗಳು ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಈ ಮೂಲಕ ಗುಣವಾದವರ ಸಂಖ್ಯೆ 112ಕ್ಕೆ, ಸೋಂಕಿತರ ಸಂಖ್ಯೆ 416ಕ್ಕೆ ಏರಿಕೆಯಾಗಿದೆ.

Advertisement

ಜಿಲ್ಲೆಯಲ್ಲಿ ಶುಕ್ರವಾರವಷ್ಟೇ 65 ಕೋವಿಡ್‌ ಪ್ರಕರಣ ಪತ್ತೆಯಾಗಿದ್ದು, ಶನಿವಾರ ಪುನಃ 14 ಜನರಲ್ಲಿ ಸೋಂಕು ದೃಢಪಟ್ಟಿದೆ. ಹೊಸಪೇಟೆ 6, ಸಂಡೂರು 5, ಬಳ್ಳಾರಿ 1, ಸಿರುಗುಪ್ಪ 1, ಹಗರಿಬೊಮ್ಮನಹಳ್ಳಿ 1 ಸೇರಿ ಒಟ್ಟು 14 ಪ್ರಕರಣಗಳು ಹೊಸದಾಗಿ ಪತ್ತೆಯಾಗಿವೆ. ಇದರಲ್ಲಿ ಆರು ಪ್ರಕರಣಗಳು ಐಎಲ್‌ಐ (ಇನ್‌ಫ್ಲೂಯೆಂಜಾ ಲೈಕ್‌ ಇಲ್ಲನೆಸ್‌), 1 ಎಸ್‌ಎಎಐ, 2 ಜಿಂದಾಲ್‌ ಕಾರ್ಖಾನೆ ನೌಕರರ ಸಂಪರ್ಕ, ಒಬ್ಬರು ಬಿಎಲ್‌ ಆರ್‌ 395, ಇಬ್ಬರು ಪಿ.7419, ಮತ್ತೂಬ್ಬರು ಪಿ.7447 ಸೋಂಕಿತರ ಸಂಪರ್ಕ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಮಾಹಿತಿ ನೀಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ 416ಕ್ಕೆ ಏರಿಕೆಯಾಗಿದೆ. ಇದರಲ್ಲಿ 112 ಜನರು ಗುಣಮುಖವಾಗಿ ಮನೆಗೆ ಸೇರಿದ್ದಾರೆ. ಇಬ್ಬರು ಮರಣ ಹೊಂದಿದ್ದು, 314 ಸಕ್ರಿಯ ಪ್ರಕರಣಗಳಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next