Advertisement
2008ರಲ್ಲಿ ಕ್ಷೇತ್ರ ಮರುವಿಂಗಡಣೆಯಿಂದಾಗಿ ಬಳ್ಳಾರಿ ಮಹಾನಗರ ಪಾಲಿಕೆಯ 26 ವಾರ್ಡ್‌ಗಳನ್ನು ಸೇರಿಸಿ ಮೊದಲ ಬಾರಿಗೆ ಬಳ್ಳಾರಿ ನಗರ ಕ್ಷೇತ್ರವನ್ನಾಗಿ ರಚಿಸಲಾಯಿತು. ಮೊದಲ ಚುನಾವಣೆಯಲ್ಲೇ ಬಿಜೆಪಿಯಿಂದ ಜಿ. ಸೋಮಶೇಖರ ರೆಡ್ಡಿ, ಕಾಂಗ್ರೆಸ್‌ನಿಂದ ಅನಿಲ್ ಲಾಡ್ ಸ್ಪರ್ಧಿಸಿ ಮುಖಾಮುಖೀಯಾಗಿದ್ದರು. ಸೋಮಶೇಖರ ರೆಡ್ಡಿಯವರು ಕೇವಲ 1022 ಮತಗಳ ಅಂತರದಿಂದ ಪ್ರಯಾಸದ ಜಯ ದಾಖಲಿಸಿದ್ದರು. ಬಳಿಕ ಕೆಎಂಎಫ್ ರಾಜ್ಯಾಧ್ಯಕ್ಷರೂ ಆಗಿದ್ದರು. ಬದಲಾದ ರಾಜಕೀಯದಿಂದಾಗಿ 2011ರಲ್ಲಿ ಬಿಜೆಪಿಯಿಂದ ಹೊರಬಂದ ರೆಡ್ಡಿ ಸಹೋದರರು ಮತ್ತು ಶ್ರೀರಾಮುಲು ಸ್ವಂತ ಬಿಎಸ್‌ಆರ್ ಪಕ್ಷ ಸ್ಥಾಪಿಸಿದರು. ಪರಿಣಾಮ 2013ರ ವಿಧಾನಸಭೆ ಚುನಾವಣೆಯಲ್ಲಿ ಸೋಮಶೇಖರ ರೆಡ್ಡಿ ಸ್ಪರ್ಧಿಸದೆ ದೂರ ಉಳಿದಿದ್ದು, ಬಿಎಸ್‌ಆರ್ ಪಕ್ಷದಿಂದ ಎಸ್.ಮುರಳಿಕೃಷ್ಣ ಅವರನ್ನು ಕಣಕ್ಕಿಳಿಸಲಾಗಿತ್ತು. ಇದು ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಲಾಡ್ 18 ಸಾವಿರ ಮತಗಳ ಅಂತರದಿಂದ ಗೆಲ್ಲಲು ಕಾರಣವಾಯಿತು. ಇದೀಗ 2018ರ ವಿಧಾನಸಭೆ ಚುನಾವಣೆಯಲ್ಲಿ 2008ರ ಪ್ರತಿಸ್ಪರ್ಧಿಗಳೇ ಪರಸ್ಪರ ಎದುರಾಳಿಗಳಾಗಿದ್ದಾರೆ. ಸೋಮಶೇಖರ ರೆಡ್ಡಿ ವಿರುದ್ಧ ಅನಿಲ್ ಲಾಡ್ ಅಂದಿನ ಸೋಲಿನ ಸೇಡು ತೀರಿಸಿಕೊಳ್ಳಲಿದ್ದಾರೆಯೇ ಎಂಬುದು ಕುತೂಹಲ ಮೂಡಿಸಿದೆ.ಇನ್ನು, 2013ರ ಚುನಾವಣೆಯಲ್ಲಿ ನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಗಣಿ ಉದ್ಯಮಿ ಮಹ್ಮದ್ ಇಕ್ಬಾಲ್ ಹೊತೂರ್ ಈ ಬಾರಿ ಜೆಡಿಎಸ್‌ನಿಂದ ಅಖಾಡಕ್ಕಿಳಿದಿದ್ದು, ರೆಡ್ಡಿ, ಲಾಡ್‌ಗೆ ಪೈಪೋಟಿ ನೀಡಲು ಸಜ್ಜಾಗುತ್ತಿದ್ದಾರೆ.
ಪುರುಷರು – 1,15,130
ಮಹಿಳೆಯರು – 1,18,130
ಒಟ್ಟು : 2,33,260 ಮತದಾರರು
ಜಾತಿವಾರು ಲೆಕ್ಕಾಚಾರ
ಲಿಂಗಾಯತರು- 40 ಸಾವಿರ
ಮುಸ್ಲಿಂ- 39 ಸಾವಿರ
ಎಸ್ಸಿ- 35 ಸಾವಿರ
ಎಸ್‌ಟಿ- 35 ಸಾವಿರ
ಕುರುಬ – 30 ಸಾವಿರ
ಬಲಿಜ, ರೆಡ್ಡಿ, ಕಮ್ಮಾ-27 ಸಾವಿರ
ಬ್ರಾಹ್ಮಣ, ಜೈನ, ವೈಶ್ಯ-27 ಸಾವಿರ 2008ಕ್ಕೂ 2018ರ ಚುನಾವಣೆಗೂ ತುಂಬ ವ್ಯತ್ಯಾಸಗಳಿವೆ. ಅನಿಲ್ ಲಾಡ್ ಸಾರ್ವಜನಿಕ ಸೇವೆಯಲ್ಲಿದ್ದರೂ ಅಭಿವೃದ್ಧಿ ಮಾಡಿಲ್ಲ. ಹೀಗಾಗಿ ನನ್ನ ಗೆಲುವು ಶೇ.100ರಷ್ಟು ಖಚಿತ.
– ಜಿ. ಸೋಮಶೇಖರ ರೆಡ್ಡಿ, ಬಿಜೆಪಿ ಅಭ್ಯರ್ಥಿ
Related Articles
– ಅನಿಲ್ ಲಾಡ್, ಕಾಂಗ್ರೆಸ್ ಅಭ್ಯರ್ಥಿ
Advertisement