Advertisement

ಉತ್ತರಿ ಮಳೆಗೆ ಬದುಕು ತತ್ತರ

03:01 PM Sep 27, 2019 | |

ಬಳ್ಳಾರಿ: ಕಳೆದ ನಾಲ್ಕೈದು ದಿನಗಳಿಂದ ಬಳ್ಳಾರಿ ಜಿಲ್ಲೆಯದಾದ್ಯಂತ ಸುರಿಯುತ್ತಿರುವ ಮಳೆಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಜಿಲ್ಲೆಯಲ್ಲಿ 3 ಸಾವಿರ ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು, 277 ಮನೆಗಳು ಕುಸಿದಿವೆ. ಜತೆಗೆ 11 ಪ್ರಾಣಿಗಳು ಜೀವ ಕಳೆದುಕೊಂಡಿದ್ದು, ವ್ಯಕ್ತಿ ಸಾವನ್ನಪ್ಪಿದ್ದಾನೆ. ಇದುವರೆಗೆ ಒಟ್ಟು 4.30 ಕೋಟಿ ರೂಗಳ ನಷ್ಟ ಸಂಭವಿಸಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.

Advertisement

ಬಳ್ಳಾರಿ ತಾಲೂಕಿನಲ್ಲಿ 39 ಮನೆಗಳಿಗೆ ಹಾನಿಯಾಗಿದ್ದು 3.9ಲಕ್ಷ ರೂ. ನಷ್ಟ ಉಂಟಾಗಿದೆ. 826.31 ಹೆಕ್ಟೇರ್‌ ಬೆಳೆ ಹಾನಿಯಾಗಿದೆ ಮತ್ತು 111.50ಲಕ್ಷ ರೂಗಳ ಹಾನಿಯಾಗಿದೆ ಎಂದು ಅಂದಾಜಿಸಲಾಗಿದ್ದು, ಭತ್ತ, ಹತ್ತಿ ಮೆಣಸಿನಕಾಯಿ ಬೆಳೆ ನೀರಿನಲ್ಲಿ ಮುಳುಗಡೆಯಾಗಿದೆ. ನೀರು ನಿಂತಿರುವುದರಿಂದ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಗಳಿಂದ ಜಂಟಿ ಸಮೀಕ್ಷೆ ಮಾಡುವುದು ಬಾಕಿ ಇದೆ.

ಜಿಲ್ಲೆಯಲ್ಲಿ ಸಿರಗುಪ್ಪದಲ್ಲಿ ಅತಿಹೆಚ್ಚು ಹಾನಿ ಸಂಭವಿಸಿದೆ. ಸಿರಗುಪ್ಪ ತಾಲೂಕಿನಲ್ಲಿ 92 ಮನೆಗಳಿಗೆ ಹಾನಿಯಾಗಿದ್ದು 9.2 ಲಕ್ಷ ರೂ. ನಷ್ಟವಾಗಿದೆ. 1640 ಹೆಕ್ಟೇರ್‌ ಬೆಳೆಹಾನಿಯಾಗಿದ್ದು
221.40ಲಕ್ಷ ರೂ.ಹಾನಿಯಾಗಿದೆ. ನೀರು ನಿಂತಿರುವುದರಿಂದ ಜಂಟಿ ಸಮೀಕ್ಷೆ ಬಾಕಿ ಇದೆ. ಇನ್ನು ಕುರುಗೋಡು ತಾಲೂಕಿನಲ್ಲಿ 63 ಮನೆಗಳು ಹಾನಿಯಾಗಿದ್ದು 10.90 ಲಕ್ಷ ರೂ. ಅಂದಾಜು ಹಾನಿಯಾಗಿದೆ. 503.64 ಹೆಕ್ಟೇರ್‌ ಬೆಳೆಹಾನಿಯಾಗಿದ್ದು 68ಲಕ್ಷ ರೂ.ನಷ್ಟು ನಷ್ಟವುಂಟಾಗಿದೆ. ಮೆಣಸಿನಕಾಯಿ, ಭತ್ತ, ಹತ್ತಿ ನೀರಿನಲ್ಲಿ ಮುಳುಗಡೆಯಾಗಿದ್ದು, ನೀರು ನಿಂತಿರುವ ಹಿನ್ನೆಲೆ ಜಂಟಿ ಸಮೀಕ್ಷೆ ಬಾಕಿ ಇದೆ. ಸಂಡೂರು ತಾಲೂಕಿನಲ್ಲಿ 10 ಕುರಿಗಳು ಸಿಡಿಲಿಗೆ ಮೃತಪಟ್ಟಿವೆ. 14 ಮನೆಗಳು ಹಾನಿಯಾಗಿದ್ದು, 1.4ಲಕ್ಷ ರೂ. ನಷ್ಟವಾಗಿದೆ. ಹೊಸಪೇಟೆಯಲ್ಲಿ ವ್ಯಕ್ತಿ ಸಾವನ್ನಪ್ಪಿದ್ದಾನೆ. 2 ಮನೆಗಳಿಗೆ ಹಾನಿಯಾಗಿದ್ದು 20
ಸಾವಿರ ರೂ. ನಷ್ಟವುಂಟಾಗಿದೆ. ಕಂಪ್ಲಿ ತಾಲೂಕಿನಲ್ಲಿ 16 ಮನೆಗಳಿಗೆ ಹಾನಿಯಾಗಿದ್ದು 1.6ಲಕ್ಷ ರೂ. ನಷ್ಟ.

ಹಗರಿಬೊಮ್ಮನಹಳ್ಳಿಯಲ್ಲಿ 12 ಮನೆಗಳಿಗೆ ಹಾನಿಯಾಗಿದ್ದು 1.2ಲಕ್ಷ ರೂ. ನಷ್ಟವುಂಟಾಗಿದೆ. ಕೂಡ್ಲಿಗಿ ತಾಲೂಕಿನಲ್ಲಿ ಧಾರಾಕರ ಮಳೆ ಸುರಿದಿದ್ದರಿಂದ ಗೊಡೆ ಕುಸಿದಿದ್ದು, ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಎಮ್ಮೆ ಸಾವನ್ನಪ್ಪಿದೆ. 18 ಮನೆಗಳಿಗೆ ಹಾನಿಯಾಗಿದ್ದು, 1.8ಲಕ್ಷ ರೂ. ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ.

ಹಡಗಲಿ ಮತ್ತು ಹರಪನಹಳ್ಳಿ ತಾಲೂಕುಗಳಲ್ಲಿ 12 ಮತ್ತು 9 ಮನೆಗಳು ಸೇರಿದಂತೆ ಒಟ್ಟು 21 ಮನೆಗಳಿಗೆ ಹಾನಿಯಾಗಿದ್ದು 2.10 ಲಕ್ಷ ರೂ.ನಷ್ಟವುಂಟಾಗಿದೆ. ಕುರುಗೋಡು ತಾಲೂಕು ವ್ಯಾಪ್ತಿಯಲ್ಲಿ ಬರುವ ಮಾರುತಿ ಕ್ಯಾಂಪ್‌-ಸಿದ್ದಮ್ಮನಹಳ್ಳಿ ಸೇತುವೆ, ಬಾದನಹಟ್ಟಿಯಿಂದ ಸಿದ್ದಮ್ಮನಹಳ್ಳಿ ಸೇತುವೆ, ದಮ್ಮೂರು-ಕೊರ್ಲಗುಂದಿ ಸೇತುವೆ, ದಮ್ಮೂರು-ಹಂದಿಹಾಳ್‌ ಸೇತುವೆ, ಕ್ಯಾದಿಗಿಹಾಳ್‌ ಸೇತುವೆಗಳು ಮಳೆಯಿಂದ ಹಾನಿಗೊಂಡಿರುವ ಬಗ್ಗೆ ಅಂದಾಜಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next