Advertisement

ಬೆಳ್ಳಾರೆ: ಇ-ಲರ್ನಿಂಗ್‌ ಕಿಟ್‌ ಕೊಡುಗೆ

05:00 AM Jul 21, 2017 | Team Udayavani |

ಬೆಳ್ಳಾರೆ: ವಿದ್ಯುನ್ಮಾನ ಕಲಿಕಾ ಘಟಕಗಳಿಂದ  ಶಿಕ್ಷಕರಿಗೆ ತೊಂದರೆ ಇಲ್ಲ.ಇದು  ಶಿಕ್ಷಕರಿಗೆ ಪೂರಕವಾಗಿ ಇರಲಿದೆ ಎಂದು ರೋಟರಿ ಕ್ಲಬ್‌ ಬೆಳ್ಳಾರೆ ಟೌನ್‌ ವತಿಯಿಂದ ಮೆಂಡಾ ಫೌಂಡೇಶನ್‌ ಬೆಂಗಳೂರು ಇವರ ಸಹ ಯೋಗದಲ್ಲಿ ಮುಕ್ಕೂರು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಗೆ ನೀಡಿದ  ದಿ|  ಶೈಲೇಶ್‌ ಕುಮಾರ್‌ ರೈ ಸ್ಮರಣಾರ್ಥ ಇ-ಲರ್ನಿಂಗ್‌ ಕಿಟ್ಟನ್ನು ರೋಟರಿ ಜಿಲ್ಲೆಯ ಗವರ್ನರ್‌ ರೊ| ಎಸ್‌. ಗುರುರಾಜ್‌ ಅವರು ಉದ್ಘಾಟಿಸಿ ಮಾತನಾಡಿದರು.

Advertisement

ಕ್ಲಬ್‌ನ ಅಧ್ಯಕ್ಷ ವಿನಯಕುಮಾರ್‌ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಪೆರುವಾಜೆ  ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ಅನಸೂಯಾ, ಸೆಲ್ಕೋ ಸೋಲಾರ್‌ನ ರಾಧಾಕೃಷ್ಣ, ಶಾಲಾ ಮುಖ್ಯ ಶಿಕ್ಷಕಿ ಸೀತಾ ಅವರು ಮುಖ್ಯ ಅತಿಥಿಯಾಗಿದ್ದರು. 
ಈ ಸಂದರ್ಭದಲ್ಲಿ ಕಾರ್ಯದರ್ಶಿ ನವೀನ್‌ಕುಮಾರ್‌ ರೈ, ದಶಮಾನೋತ್ಸವ ಆಚರಣೆ ಸಮಿತಿ ಚೇರ್‌ಮನ್‌ ಮಾಧವ ಗೌಡ, ನಿಕಟಪೂರ್ವ ಅಧ್ಯಕ್ಷ ಪ್ರಭಾಕರ ಆಳ್ವ, ರೋಟರಿ ಸದಸ್ಯರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next