Advertisement

ಶರಣರು, ಸಂತರು, ಮಹಾತ್ಮರ ನುಡಿಗಳಲ್ಲಿರಲಿ ವಿಶ್ವಾಸ: ಪಾಟೀಲ

02:57 PM Oct 21, 2021 | Shwetha M |

ಮುದ್ದೇಬಿಹಾಳ: ಹೆಣ್ಣು, ಹೊನ್ನು, ಮಣ್ಣಿನ ದಾಸರಾಗಿ ನಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಭಗವಂತನಲ್ಲಿ, ಶರಣರಲ್ಲಿ, ಸಂತರಲ್ಲಿ ಮತ್ತು ಮಹಾತ್ಮರಲ್ಲಿ ಶ್ರದ್ಧೆ, ನಂಬಿಕೆ, ವಿಶ್ವಾಸ ಹೊಂದಿರಬೇಕಾದ ಅಗತ್ಯ ಹೆಚ್ಚಾಗಿದೆ ಎಂದು ತಾಳಿಕೋಟೆಯ ವಿಶ್ರಾಂತ ಪ್ರಾಚಾರ್ಯ ಡಾ| ಆರ್‌.ಎನ್‌.ಪಾಟೀಲ ಹೇಳಿದರು.

Advertisement

ಇಲ್ಲಿನ ಎಂಜಿವಿಸಿ ಕಾಲೇಜಿನಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್‌ ಮತ್ತು ಎಸ್‌ಜಿವಿಸಿ ಟ್ರಸ್ಟ್‌ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ಎಂಜಿವಿಸಿ ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾಗಿದ್ದ ಲಿಂ| ಶಂಕರಪ್ಪ ವಿರೂಪಾಕ್ಷಪ್ಪ ತಡಸದ ಸ್ಮರಣಾರ್ಥ ದತ್ತಿ ಉಪನ್ಯಾಸ ಹಾಗೂ ಶಂಕರಪ್ಪನವರ 9ನೇ ಪುಣ್ಯಸ್ಮರಣೆ ಸಂಯುಕ್ತ ಕಾರ್ಯಕ್ರಮದಲ್ಲಿ ಶರಣರು ಹಾಗೂ ಅನುಭಾವ ಕುರಿತು ಅವರು ಮಾತನಾಡಿದರು.

ಶರಣರು, ಮಹಾತ್ಮರ ನುಡಿಗಳಲ್ಲಿ ನಮಗೆ ವಿಶ್ವಾಸ ಇರಬೇಕು. ಆ ನುಡಿಗಳು ನಮ್ಮ ಬದುಕನ್ನು ಹಸನಾಗಿಸುತ್ತವೆ. 84 ಲಕ್ಷ ಜೀವರಾಶಿಯನ್ನು ದಾಟಿ ಬಂದ ಈ ಶರೀರ ತಾನಲ್ಲ, ತನ್ನದಲ್ಲ, ಮುಂದೆ ಬಾಹುದಲ್ಲ ಎನ್ನುವ ದಾಸರ ವಾಣಿಯಂತೆ ಪಂಚ ಭೂತಗಳಿಂದಾದ ಈ ದೇಹ ನನ್ನದಲ್ಲ. ಪರಮಾತ್ಮ, ಶರಣ, ಸಂತರ ದಾಸನಾದಾಗ ನಮ್ಮ ಜೀವನಕ್ಕೆ ಸಾರ್ಥಕತೆ ದೊರಕುತ್ತದೆ. ಒಬ್ಬ ವ್ಯಕ್ತಿ ಮಹಾತ್ಮನಾಗಲು ಆತನಿಗೆ ಎಂಥ ಗುರು ಸಿಕ್ಕಿರಬೇಕು ಅನ್ನೋದನ್ನು ಅರಿತುಕೊಂಡು ಸೂಕ್ತ, ಸಮರ್ಥ ಗುರುವನ್ನು ಹುಡುಕಿಕೊಂಡು ನಮ್ಮ ಬದುಕನ್ನು ದಾರ್ಶನಿಕವಾಗಿ ರೂಪಿಸಿಕೊಳ್ಳಬೇಕು ಎಂದರು.

ಇದನ್ನೂ ಓದಿ: ಶ್ರೀರಂಗಪಟ್ಟಣ ಬಾರಿ ಮಳೆಗೆ ಕೊಚ್ಚಿ ಹೋದ ರೈತರ ಬದುಕು

ವಿರೂಪಾಕ್ಷಪ್ಪ ತಡಸದ ಅವರು ಬಸವ ಭಾವಪೂಜೆ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಟ್ರಸ್ಟ್‌ ಆಡಳಿತಾಧಿಕಾರಿ ಎ.ಬಿ. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಎಂಜಿವಿಸಿ ಕಾಲೇಜಿನ ಪ್ರಾಚಾರ್ಯ ಎಸ್‌.ಎನ್‌. ಪೋಲೇಶಿ ಮುಖ್ಯ ಅತಿಥಿಯಾಗಿದ್ದರು. ಶಸಾಪ ಅಧ್ಯಕ್ಷ ಬಸವರಾಜ ನಾಲತವಾಡ ದತ್ತಿ ಕಾರ್ಯಕ್ರಮ ಮತ್ತು ಲಿಂ| ಶಂಕ್ರಪ್ಪನವರು ತಡಸದ ಅವರ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗಣ್ಯರಾದ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಂ.ಬಿ.ನಾವದಗಿ, ಎಂಜಿವಿಸಿ ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ತಡಸದ, ಜಿಲ್ಲಾ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್‌ ಅಧ್ಯಕ್ಷ ಅಬ್ದುಲ್‌ರಹೆಮಾನ್‌ ಬಿದರಕುಂದಿ, ವೀರಶೈವ ಬ್ಯಾಂಕ್‌ ಅಧ್ಯಕ್ಷ ಈರಣ್ಣ ತಡಸದ, ವೀರಶೈವ ಮಹಾಸಭಾದ ತಾಲೂಕಾಧ್ಯಕ್ಷ ಬಾಪುಗೌಡ ಪಾಟೀಲ ಆಲೂರ, ಮಾಜಿ ಸೈನಿಕ ಎಸ್‌.ಕೆ.ಕತ್ತಿ, ಪ್ರಗತಿ ಜೆಸಿ ಸಂಸ್ಥೆ ಅಧ್ಯಕ್ಷ ಸಂಗಮೇಶ ನಾವದಗಿ, ವಿದ್ಯಾಭಾರತಿ ಶಾಲೆಗಳ ಜಿಲ್ಲಾಧ್ಯಕ್ಷ ಪ್ರಭು ಕಡಿ, ವೀರಶೈವ ಮಹಾಸಭಾದ ಮಾಜಿ ಅಧ್ಯಕ್ಷ ಎಸ್‌.ಬಿ.ಕನ್ನೂರ, ಇಲಕಲ್ಲ ಡೆ„ಟ್‌ನ ಉಪನ್ಯಾಸಕ ಎಂ.ಎಂ.ಬೆಳಗಲ್ಲ, ಹಸಿರು ತೋರಣ ಬಳಗದ ಸದಸ್ಯ ರವಿ ತಡಸದ, ನಿವೃತ್ತ ಪ್ರಾಚಾರ್ಯ ಪ್ರೊ| ಎಸ್‌.ಜಿ.ನಂದಿ, ಗುತ್ತಿಗೆದಾರ ಸುತಾರ, ಎಂಜಿವಿಸಿ ಕಾಲೇಜು ಸಿಬ್ಬಂದಿ, ಶಸಾಪ ಸದಸ್ಯರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೂ ಮುನ್ನ ಬಸವೇಶ್ವರ ಮತ್ತು ಲಿಂ| ಶಂಕರಪ್ಪ ತಡಸದ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next