ಸುರಪುರ: ಸಿದ್ಧಗಂಗಾ ಮಠದ ಡಾ| ಶಿವಕುಮಾರ ಶ್ರೀಗಳ ಆತ್ಮಕ್ಕೆ ಶಾಂತಿ ಕೋರಿ ನಗರ ಹಾಗೂ ತಾಲೂಕಿನ ವಿವಿಧ ಗ್ರಾಮಗಳ ಮಠ. ಮಂದಿರ, ಶಾಲಾ ಕಾಲೇಜು, ವಸತಿ ನಿಲಯ ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಕಾರ್ಯಾಲಯದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಜರುಗಿತು. ತಾಲೂಕಿನ ರುಕ್ಮಾಪುರ ಗ್ರಾಮದ ಹಿರೇಮಠದಲ್ಲಿ ಪೂಜ್ಯ ಗುರುಶಾಂತ ಮೂರ್ತಿ ಸಾನ್ನಿಧ್ಯದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ವೇಳೆ ನಿವೃತ್ತ ಎಸ್‌ಪಿ ಚಂದ್ರಕಾಂತ ಭಂಡಾರಿ ಮಾತನಾಡಿ, ತ್ರಿವಿಧ ದಾಸೋಹಿಗಳಾದ್ದ ಶ್ರೀಗಳು ನೊಂದವರ ಧ್ವನಿಯಾಗಿದ್ದರು. ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ದಾಹ ನೀಗಿಸಿದ ಮಹಾನ್ ಸಂತ, ವಿಶ್ವದೆಲ್ಲಡೆ ಅಪಾರ ಶಿಷ್ಯಬಳಗ ಹೊಂದಿದ ಕರುಣಾಮಯಿ ಬಸವಣ್ಣನ ಪ್ರತಿರೂಪದಂತ್ತಿದ್ದ ಶ್ರೀಗಳ ಅಗಲಿಕೆ ಧಾರ್ಮಿಕ ಕ್ಷೇತ್ರಕ್ಕೆ ತುಂಬಲಾಗದ ನಷ್ಟ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸಿದರು. ಕಾಶಿನಾಥ ಬಣಗಾರ, ಬಸವರಾಜ ಮಿಣಜಗಿ, ಸಂಗಣ್ಣ ಶಿರಗೋಳ, ಸದಾಶಿವ ಮಿಣಜಗಿ, ಮಂಜುನಾಥ ಚೆಟ್ಟಿ ಇದ್ದರು.
ದೇವಾಪುರ: ದೇವಾಪುರ ಜಡಿ ಶಾಂತ ಲಿಂಗೇಶ್ವರ ಸಂಸ್ಥಾನ ಹಿರೇಮಠದಲ್ಲಿ ಪೂಜ್ಯ ಶಿವಮೂರ್ತಿ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಲಿಂಗೈಕ್ಯೆ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಸಣ್ಣ ಕವಲಿ, ಶರಣಗೌಡ ಪಾಟೀಲ ಶೆಳ್ಳಗಿ ಇದ್ದರು.
ಕಡ್ಲೆಪ್ಪನ ಮಠ: ನಗರದ ಕಬಡಗೇರಾ ವಾರ್ಡ್‌ನ ನಿಷ್ಠಿ ಕಡ್ಲೆಪ್ಪನರ್ ಮಠದಲ್ಲಿ ಮಂಗಳವಾರ ಪೂಜ್ಯ ಪ್ರಭುಲಿಂಗ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಅಗಲಿದ ಶ್ರೀಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಸವರಾಜ ಜಮದ್ರಖಾನಿ, ಶ್ರೀಹರಿರಾವು ಆದೋನಿ, ಶಾಂತರಾಜ ಬಾರಿ, ಅಪ್ಪು ಜಾಲಳ್ಳಿ, ಮಂಜುನಾಥ ಜಾಲಳ್ಳಿ, ಚಂದ್ರಕಾಂತ ಕಳ್ಳಿಮನಿ, ಚಂದ್ರಶೇಖರಯ್ಯ ಸ್ವಾಮಿ ಪಂಚಾಂಗಮಠ, ವೆಂಕಟೇಶ ಚಿತ್ರಗಾರ, ಶರಣಯ್ಯ ಸ್ವಾಮಿ ಮಠಪತಿ, ಚನ್ನಬಸಯ್ಯ ಜೇರಟಗಿಮಠ, ಮಹಾದೇವಪ್ಪ ಹಳ್ಳದ, ಸುಭಾಸ ಹೂಗಾರ, ಪರಪ್ಪ ಮಾಟನೂರ ಇದ್ದರು.
ವೀರಶೈವ ಕಲ್ಯಾಣ ಮಂಟಪ: ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ತಾಲೂಕು ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಡಾ| ಸುರೇಶ ಸಜ್ಜನ್ ಅಧ್ಯಕ್ಷತೆ ಸೋಮವಾರ ಸಂಜೆ ಲಿಂಗೈಕ್ಯೆ ಶ್ರೀಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಸಲಿಂಗಪ್ಪ ಪಾಟೀಲ, ವೀರಪ್ಪ ಅವಂಟಿ, ಜಿ.ಎಸ್. ಪಾಟೀಲ ಇದ್ದರು.
ತಿಮ್ಮಾಪುರ: ತಿಮ್ಮಾಪುರದ ಬಸವೇಶ್ವರ ದೇವಸ್ಥಾನದಲ್ಲಿ ನಗರ ಯೋಜನಾ ಪ್ರಾಧಿಕರ ಅಧ್ಯಕ್ಷ ಸೂಗೂರೇಶ ವಾರದ ಅಧ್ಯಕ್ಷತೆಯಲ್ಲಿ ಅಗಲಿದ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಸವರಾಜ ವಾರದ, ಗಂಗಪ್ಪ ಗುಳಗಿ, ಮಂಜುನಾಥ ಗುಳಗಿ, ಬಸವರಾಜ ಚಂದನಕೇರಿ, ಅಶೋಕ ಸಜ್ಜನ್, ಬಸವರಾಜ ಮೆಡಿಕಲ್ ಇದ್ದರು.
ಆಟೋ ಚಾಲಕರ ಸಂಘ: ವಿಷ್ಣು ಸೇನಾ ಆಟೋ ಚಾಲಕರ ಸಂಘದಿಂದ ನಗರದ ಹಳೆ ಆಸ್ಪತ್ರೆ ಆವರಣದಲ್ಲಿ ಅಗಲಿದ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಅಕ್ಕರಕಿ, ಉಪಾಧ್ಯಕ್ಷ ಚಂದಪ್ಪ ಓಕುಳಿ, ಭೀಮು ಹಸನಾಪುರ, ಗೋಪಾಲ ಚಿನ್ನಾಕರ ಇದ್ದರು.