ಬೆಳಗಾವಿ: ಮಕ್ಕಳಲ್ಲಿ ನಾವು ಬೆಳೆಸುವ ನೈತಿಕ ಮೌಲ್ಯಗಳಿಂದಲೇ ರಾಷ್ಟ್ರ ನಿರ್ಮಾಣ ಸಾಧ್ಯವಾಗುತ್ತದೆ. ಇಂದು ನಮ್ಮ ಮಕ್ಕಳು ಮೊಬೈಲ್-ಟಿ.ವಿ. ಹಾವಳಿಯಿಂದ ಅಧಃಪತನದ ದಾರಿ ಹಿಡಿದಿದ್ದಾರೆ. ಇಂತಹ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಬೇಕಾದ ಅನಿವಾರ್ಯತೆ ಬಹಳಷ್ಟಿದೆ ಎಂದು ಕುಂದರಗಿ ಅಡವಿಸಿದ್ಧೇಶ್ವರಮಠದ ಅಮರ ಸಿದ್ಧೇಶ್ವರ ಸ್ವಾಮಿಗಳು
ಹೇಳಿದರು.
ನಗರದ ಕಾರಂಜಿಮಠದ ಶಿವಾನುಭವ ಮಂಟಪದಲ್ಲಿ ಜರುಗಿದ 264 ಶಿವಾನುಭವ ಕಾರ್ಯಕ್ರಮದಲ್ಲಿಮಾತನಾಡಿದ ಅವರು, ಸಮಾಜದಲ್ಲಿನೈತಿಕ ಮೌಲ್ಯಗಳೂ ಅನೈತಿಕ ಮೌಲ್ಯಗಳೂ ಕೂಡಿಯೇ ಇರುತ್ತವೆ. ಆದರೆ ಹಂಸಕ್ಷೀರ ನ್ಯಾಯದಂತೆ ನಾವು
ನೈತಿಕ ಮೌಲ್ಯಗಳನ್ನು ಒಪ್ಪಿ ಬದುಕು ಸಾಗಿಸಿದರೆ ಸಾರ್ಥಕ ಎಂದರು.
ಕಾರಂಜಿಮಠದ ಗುರುಸಿದ್ಧ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ,ನಾವು ಮೊದಲು ಆತ್ಮಾವಲೋಕನ ಮಾಡಿಕೊಳ್ಳುವುದರ ಮೂಲಕ ನೈತಿಕಪ್ರಜ್ಞೆಯನ್ನು ಅನುಷ್ಠಾನಕ್ಕೆ ತರಬೇಕು. ವ್ಯಕ್ತಿ ವೈಯಕ್ತಿಕ ನೆಲೆಯಲ್ಲಿ ಸುಧಾರಿಸಿದರೆ, ಸಹಜವಾಗಿಯೇ ಸಮಾಜ ಸುಧಾರಣೆಯಾಗುತ್ತದೆ ಎಂದು ಹೇಳಿದರು.
ನಗರ ಯೋಜನಾಧಿಕಾರಿಗಳಾದ ಬಸವರಾಜ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆದ ಶೃತಿ ಶಿವಾನಂದ ಯರಗಟ್ಟಿ ಅವರನ್ನು ಸನ್ಮಾನಿಸಲಾಯಿತು. ಶ್ರೀಕಾಂತ ಶಾನವಾಡ ಸ್ವಾಗತಿಸಿದರು, ಪ್ರಕಾಶ ಗಿರಿಮಲ್ಲನವರ ಅತಿಥಿಗಳನ್ನು ಪರಿಚಯಿಸಿದರು. ಎ.ಕೆ.ಪಾಟೀಲ ನಿರೂಪಣೆ ಮಾಡಿದರು, ವಿ.ಕೆ.ಪಾಟೀಲ ವಂದಿಸಿದರು.