Advertisement

Belagavi: ಕನ್ನಡ ಸಾಹಿತ್ಯಕ್ಕಿದೆ ಶತಮಾನಗಳ ಇತಿಹಾಸ-ಬಿ.ಬಿ.ಮಠಪತಿ

05:47 PM Aug 08, 2023 | Team Udayavani |

ಬೆಳಗಾವಿ: ಕನ್ನಡ ಸಾಹಿತ್ಯದ ಹೃದಯ ಭಾಗದಂತಿರುವ ವಚನ ಸಾಹಿತ್ಯದಲ್ಲಿನ ಪ್ರತಿ ವಚನಗಳು ಗೂಡಾರ್ಥ ಹೊಂದಿರುವ ಅವರವರ ಆಚಾರ ವಿಚಾರಗಳಿಗೆ ಸಂಬಂಧಿಸಿದ ಒಂದು ರೀತಿಯ ಪ್ರಮಾಣಗಳಾಗಿವೆ ಎಂದು ಲಿಂಗರಾಜ ಕಾಲೇಜಿನ ಕನ್ನಡ ಉಪನ್ಯಾಸಕ ಬಿ.ಬಿ.ಮಠಪತಿ ಹೇಳಿದರು.

Advertisement

ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಹಮ್ಮಿಕೊಳ್ಳಲಾದ ದಿ.ಎಸ್‌. ವ್ಹಿ. ಬಾಗಿ, ದಿ. ನೇಮಿನಾಥ ಇಂಚಲ ಮತ್ತು ದಿ.ಬೆಟಗೇರಿ ಕೃಷ್ಣಶರ್ಮ ಅವರ ದತ್ತಿ, ಕಾವ್ಯ ಗಾಯನ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು ಕನ್ನಡ ಸಾಹಿತ್ಯಕ್ಕೆ ಶತಮಾನಗಳ ಇತಿಹಾಸವಿದೆ ಎಂದರು.

ಪ್ರತಿ ವಚನವು ಜೀವನದ ಸಾರವನ್ನು ಎತ್ತಿ ಹೇಳುವಂತಿತ್ತು. ಆಗಿನ ವಚನಗಳು ಅವರವರ ಪ್ರಸ್ತುತ ಆಚಾರ ವಿಚಾರಗಳಿಗೆ
ಸಂಬಂಧಿಸಿದವುಗಳಾಗಿದ್ದರೂ ಸಹ ಅವು ಈಗಲೂ ಪ್ರಸ್ತುತವಾಗಿವೆ. ಈ ನಿಟ್ಟಿನಲ್ಲಿ ವಚನ ಸಾಹಿತ್ಯ ಬೆಳೆಯುತ್ತ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿತು. ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಸಾಹಿತಿ ಸ.ರಾ.ಸುಳಕೂಡೆ ಮಾತನಾಡಿ, ದತ್ತಿ ಕಾರ್ಯಕ್ರಮಗಳು ಕನ್ನಡ ಶ್ರೀಮಂತಗೊಳಿಸಿದ ಹಿಂದಿನ ಕನ್ನಡದ ಮೇರು ಜೀವನಗಳನ್ನು ಅವರ ಸಾಧನೆಗಳನ್ನು ನೆನಪಿಸುವ ವಿಶೇಷ
ಕಾರ್ಯಕ್ರಮಗಳಾಗಿವೆ ಎಂದರು. ಅಧ್ಯಕ್ಷತೆ ವಹಿಸಿದ ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಮಾತನಾಡಿ, ದತ್ತಿ ಕಾರ್ಯಕ್ರಮಗಳು ಇತಿಹಾಸ ಸೃಷ್ಟಿಸಿದ ಮತ್ತು ಈಗಿನ ಪೀಳಿಗೆಗೆ ದಾರಿದೀಪ ಆಗಿವೆ ಎಂದರು.

ಕಾರ್ಯಕ್ರಮದಲ್ಲಿ ಗೋಕಾಕ ತಾಲೂಕಿನ ಕಸಾಪ ಅಧ್ಯಕ್ಷೆ ಭಾರತಿ ಮದಬಾವಿ ಅವರು ಆನಂದ ಕಂದ ಬೆಟಗೇರಿ ಕೃಷ್ಣಶರ್ಮರ ಜೀವನ ಚರಿತ್ರೆ ಮತ್ತು ಅವರ ಸಾಹಿತ್ಯದ ಬಗ್ಗೆ ವಿವರಿಸಿದರು. ಇದೇ ಸಂದರ್ಭದಲ್ಲಿ ಬೆಳಗಾವಿಯ ಅನಾಥಮಕ್ಕಳ ಶಾಲಾ
ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಭಾವಗೀತೆ ಸ್ಪರ್ಧೆ ವಿಜೇತರಿಗೆ ದಾನಿಗಳಾದ ಶೈಲಜಾ ಭಿಂಗೆ ಅವರಿಂದ ಬಹುಮಾನ ನೀಡಿ ಗೌರವಿಸಲಾಯಿತು. ಸಾಹಿತ್ಯ ಪರಿಷತ್ತಿನ ಚಟುವಟಿಕೆಗೆ ವಿಶೇಷ ರೀತಿಯಲ್ಲಿ ಸಹಾಯ ಸಹಕಾರ ನೀಡುತ್ತಿರುವ ಮಲ್ಲಿಕಾರ್ಜುನ
ಕನಶೆಟ್ಟಿ, ಮಹಾಂತೇಶ ತಾಂವಶಿ, ಡಾ| ವಿಜಯಲಕ್ಷ್ಮೀ ಪುಟ್ಟಿ, ಸಾಧಕಿ ಪ್ರೀತಿ ಸವಡಿ ಅವರನ್ನು ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಲಾಯಿತು.

Advertisement

ರಾಜೇಶ್ವರಿ ಹಿರೇಮಠ. ಪ್ರತಿಭಾ ಕಳ್ಳಿಮಠ, ನಂದಿತಾ ಮಾಸ್ತಿಹೊಳಿಮಠ, ಡಿ.ಎಸ್‌.ದೊಡ್ಡಬಂಗಿ ಅವರು ಕಾವ್ಯಗಾಯನ ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ಸುರೇಶ ಹಂಜಿ, ಡಾ| ಸಂಜಯ ಶಿಂಧಿಹಟ್ಟಿ, ಎಸ್‌.ಬಿ. ದಳವಾಯಿ, ರಮೇಶ ಬಾಗೇವಾಡಿ, ಮಲ್ಲಿಕಾರ್ಜುನ ಕೋಳಿ, ಸಾಹಿತಿಗಳಾದ ಹೇಮಾ ಸೊನೊಳ್ಳಿ, ಜಯಶೀಲಾ ಬ್ಯಾಕೋಡ, ಅನ್ನಪೂರ್ಣ ಕನೋಜ, ಗೌರಾದೇವಿ
ತಾಳಿಕೋಟಿಮಠ, ಇಂದಿರಾ ಮೂಟೆಬೆನ್ನೂರು ಉಪಸ್ಥಿತರಿದ್ದರು. ವೀರಭದ್ರ ಅಂಗಡಿ ಸ್ವಾಗತಿಸಿದರು. ಎಂ.ವೈ. ಮೆಣಸಿನಕಾಯಿ ನಿರೂಪಿಸಿದರು, ಶಿವಾನಂದ ತಲ್ಲೂರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next