ಯಮಕನಮರಡಿಯಲ್ಲಿ ಮಾತನಾಡಿದ ಶಾಸಕ ಸತೀಶ ಜಾರಕಿಹೊಳಿ, ನಾನು ದೆಹಲಿಗೆ ಹೋಗಿದ್ದು ಟಿಕೆಟ್ ಕೇಳಲು ಅಲ್ಲ. ಕೇಂದ್ರದ ನಾಯಕರು ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಯಾವ ರೀತಿ ಚುನಾವಣೆ ಎದುರಿಸಬೇಕೆಂದು ಚರ್ಚೆ
ನಡೆಸಿದ್ದ ಹಿನ್ನೆಲೆಯಲ್ಲಿ ಹೋಗಿದ್ದೆ. ಜಿಲ್ಲಾ ಉಸ್ತುವಾರಿ ಸಚಿವರು ಲಖನ್ ಪರವಾಗಿ ಟಿಕೆಟ್ ಕೇಳುವುದನ್ನು ಬಿಡಬೇಕು. ಟಿಕೆಟ್ ನೀಡುವ ಕುರಿತು ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ. ಲಖನ್‌ಗೆ ಟಿಕೆಟ್ ನೀಡುವ ಪ್ರಯತ್ನಕ್ಕೆ ನನ್ನ ವಿರೋಧವಿದೆ ಎಂದು ಹೇಳುವ ಮೂಲಕ ಭಿನ್ನಮತ ಶಮನವಾಗದ ಮುನ್ಸೂಚನೆ ನೀಡಿದರು. ಲಖನ್ ಜಾರಕಿಹೊಳಿ ಕಾಂಗ್ರೆಸ್ ಸದಸ್ಯರೇ ಅಲ್ಲ.
Advertisement
ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳ್ಕರ್ ಜತೆಗೆ ಯಾವುದೇ ವೈಮನಸ್ಸಿಲ್ಲ. ನಾನು ಬೇರೆಯವರಿಗೆ ಟಿಕೆಟ್ ಕೊಡಿಸುವಷ್ಟು ಸಶಕ್ತನಾಗಿದ್ದು, ನನ್ನ ಕ್ಷೇತ್ರದ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.ಮತ್ತೂಂದೆಡೆ ಗೋಕಾಕದಲ್ಲಿ ಮಾತನಾಡಿದ ಯುವ ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಮಕನಮರಡಿ ಕ್ಷೇತ್ರದಿಂದ ತಾವು ಸ್ಪಧಿರ್ಧಿಸುವುದು ಖಚಿತ ಎಂದರು. ನಾನು
ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಹೊಂದಿಲ್ಲ ಎಂಬ ಬೇಜವಾಬ್ದಾರಿ ಹೇಳಿಕೆಯನ್ನು ಸತೀಶ್ ಜಾರಕಿಹೊಳಿ ನೀಡಿದ್ದಾರೆ. ನಾನು ಕಾಂಗ್ರೆಸ್ ಸದಸ್ಯನಾಗಿದ್ದು ಪಕ್ಷದ ಸಂಘಟನೆಗಾಗಿ ಶ್ರಮಿಸುತ್ತಿರುವುದು ಜಗಜ್ಜಾಹೀರಾಗಿದೆ. ಜನರ ದಾರಿ ತಪ್ಪಿಸುವ ಇಂತಹ ಹೇಳಿಕೆಗಳಿಗೆ ಕ್ಷೇತ್ರದ ಜನತೆ ಕಿವಿಗೊಡಬಾರದು ಎಂದರು.